TUMAKURU:SHAKTHIPEETA FOUNDATION
ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಸಂದರ್ಭದಲ್ಲಿ ‘ತುಮಕೂರು ನಗರದಲ್ಲಿ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಜೀವನದ ಪ್ರತಿಯೊಂದು ದಿವಸದ ನೆನೆಪಿಗೆ ಒಂದು ಗಿಡದಂತೆ, ಹಸಿರು–ತುಮಕೂರು ಯೋಜನೆಯಡಿ 36500 ಗಿಡಗಳನ್ನು ಹಾಕುವ ಮತ್ತು ತುಮಕೂರು ನಗರದ ಅಭಿವೃದ್ಧಿ ಬಗ್ಗೆ 100 ದಿನಗಳ ವಿಚಾರ ಸಂಕಿರಣ’ ವನ್ನು ಏರ್ಪಡಿಸುವ ಮೂಲಕ ತುಮಕೂರು ನಗರಕ್ಕೆ ಪ್ರಪ್ರಥಮವಾಗಿ ರೂ 100 ಕೋಟಿ ವಿಶೇಷ ಪ್ಯಾಕೇಜ್ ನೀಡಲು ಜನಾಂದೋಲನ ರೂಪಿಸಲಾಗಿತ್ತು.
ಅಂದಿನ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರೂ 45 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದು ಇತಿಹಾಸ. ಪ್ಯಾಕೇಜ್ ಕೇಳಿದಾಗ ಫೋರಂನ ವರೆಗೆ ತಲೆಕೆಟ್ಟಿದೆ ಎಂದು ಅಂದಿನ ಶಾಸಕರಾದ ಶ್ರೀ ಸೊಗಡು ಶಿವಣ್ಣನವರು ಹೇಳಿದ್ದು ,ಪ್ಯಾಕೇಜ್ ಘೋಷಣೆಯಾದಾಗ M.G ರೋಡಿನಲ್ಲಿ ಪಟಾಕಿ ಹೊಡೆದಿದ್ದು ಇತಿಹಾಸ .
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಲೋಕಸಭಾ ಅನುದಾನದಡಿ ತುಮಕೂರು ನಗರದಲ್ಲಿ 36500 ಗಿಡಗಳನ್ನು ಎರಡು ಅವಧಿಯಲ್ಲಿ ಹಾಕಿದ್ದು ಇತಿಹಾಸ.
‘ಬೆಳೆದು ನಿಂತಿರುವ, ಉಳಿದಿರುವ ಆ ಗಿಡಗಳನ್ನು ನೋಡುವುದೇ ನನಗೂ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರಿಗೂ ಪರಮಾನಂದ’.
ಇಂದು ಶ್ರೀಗಳ 115 ನೇ ಜನ್ಮ ದಿವಸ ಇಂದು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಕರ್ನಾಟಕ ರಾಜ್ಯದಲ್ಲಿರುವ ಸುಮಾರು 36000 ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿಗೆ ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಘೋಷಣೆಯಡಿ ನದಿ ನೀರು ತುಂಬಿಸುವ ಮತ್ತು ರಾಜ್ಯದ ಒಂದೊಂದು ಹನಿ ನೀರಿನ ‘ಜಲಗ್ರಂಥ’ ಸಿದ್ಧಪಡಿಸಲು ದೃಢ ಸಂಕಲ್ಪ ಮಾಡಲಾಗಿದೆ.
ಶ್ರೀ ಶ್ರೀ ಡಾ.ಶಿವಕುಮಾರ ಮಹಾ ಸ್ವಾಮಿಗಳು ಅಂದಿನ ಮುಖ್ಯ ಮಂತ್ರಿಯವರಾದ ಶ್ರೀ ಜಗದೀಶ್ ಶೆಟ್ಟರ್ ರವರಿಗೆ ನೀರಾವರಿ ತಜ್ಞ ಜಿ ಎಸ್ ಪರಮಶಿವಯ್ಯ ವರದಿ ಆಧಾರಿತ ಕೆರೆಗಳಿಗೆ ನದಿ ನೀರು ತುಂಬಿಸಲು ಪತ್ರ ಬರೆದಿದ್ದು, ಈ ಹಿನ್ನಲೆಯಲ್ಲಿ ಅವರು ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡಿದ್ದು ಇತಿಹಾಸ, ಸೇರ್ಪಡೆ ಮಾಡಲು ಶ್ರೀಮತಿ ಶಿಲ್ಪಶೆಟ್ಟರ್ ರವರು ಸಹಕರಿಸಿದ್ದನ್ನು ಜೀವನದಲ್ಲಿ ಮರೆಯಲು ಸಾಧ್ಯಾವಿಲ್ಲ. ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಕೊಪ್ಪಳ್ ನಾಗರಾಜ್ ರವರು ಮತ್ತು ನಾನು ‘ಇಡೀ ರಾತ್ರಿ ಮುಖ್ಯಮಂತ್ರಿಯವರ ಮನೆಯಲ್ಲಿ ಜಾಗರಣೆ’ ಮಾಡಿದ್ದು ಇತಿಹಾಸ.
ಅಂದು ನಮ್ಮ ಪಾಡಿಗೆ ನಾವು ‘ಹಸಿರು–ತುಮಕೂರು’ ಆಂದೋಲನ ಆರಂಭ ಮಾಡಿದ್ದೇವು. ಇಂದು ಕರ್ನಾಟಕ ರಾಜ್ಯದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಎಂ.ಓ.ಯು ಮಾಡಿಕೊಂಡು, ಯೋಜನಾ ಇಲಾಖೆಯ ಅನುಮತಿಯೊಂದಿಗೆ ಸರ್ಕಾರದ ಜೊತೆ ಸೇರಿ ‘ಜಲಗ್ರಂಥ’ ಸಿದ್ಧಪಡಿಸಲಾಗುವುದು.
ಈಗಾಗಲೇ ಪ್ರಕ್ರೀಯೇ ಆರಂಭವಾಗಿದೆ. ದಿನಾಂಕ:22.03.2022 ರಂದು ವಿಶ್ವ ಜಲದಿನಾಚರಣೆಯ ದಿನದೊಂದು ಎಂ.ಓ.ಯು ಗೆ ಸಹಿ ಮಾಡಲಾಗಿದೆ. ಸಿದ್ಧಗಂಗಾ ಶ್ರೀಗಳ 115 ನೇ ಜನ್ಮ ದಿವಸ ದಿನಾಂಕ:01.04.2022 ರಂದು ‘ಜಲ ಪ್ರತಿಜ್ಞೆ’ ಮಾಡಲಾಗಿದೆ. ದಿನಾಂಕ:14.04.2022 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನದಿಂದ ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ಜಲ ಆಂದೋಲನ ಪ್ರಾರಂಭಿಸಲಾಗುವುದು.
ಅಂದು ಈ ಪುಸ್ತಕವನ್ನು ನಾನು ಬರೆದ ನಂತರ ಶ್ರೀ ವಿನಯ್ ಭಟ್‍ರವರು ಮತ್ತು ಶ್ರೀ ಕವಿತಾ ಕೃಷ್ಣರವರು ಅಂತಿಮ ರೂಪು ಕೊಟ್ಟಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ದಿ.ಅರಕೆರೆ ರುದ್ರೇಶ್ ರವರು ಪ್ರಿಂಟ್ ಮಾಡಲು ಶ್ರೀ ನಾಗಕುಮಾರ್ ರವರಿಗೆ ಹಣ ನೀಡಿದ್ದರು.
ಅಂದು ಜನಾಂದೋಲನಕ್ಕೆ ಸಹಕರಿಸಿದ್ಧ ತುಮಕೂರಿನ ಹಲವಾರು ‘ಹುಡುಗರು’ ಇಂದು ಹೋರಾಟದ ಮಂಚೂಣೆಯಲ್ಲಿರುವದು,ರಾಜ್ಯಮಟ್ಟದ ‘ನಾಯಕ’ ರಾಗಿರುವುದು ನನಗೆ ಹೆಮ್ಮೆ.
ಇಂದು ಯಾವ ದಾನಿಗಳು ಮುಂದೆ ಬರುತ್ತಾರೆ ನೋಡೋಣ?
ಆಸಕ್ತರು ನಮ್ಮ ಜೊತೆ ಹೆಜ್ಜೆ ಹಾಕ ಬಹುದು.