22nd November 2024
Share

TUMAKURU:SHAKTHIPEETA FOUNDATION

ದಿನಾಂಕ:01.07.2022 ರಂದು ಶ್ರೀ ಗಜೇಂದ್ರ ಸಿಂಗ್ ರವರೊಂದಿಗೆ ಬೆಂಗಳೂರಿನಲ್ಲಿ ಸಮಾಲೋಚನೆ.

ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಜೊತೆರವರ ಜೊತೆ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ, ಸಿದ್ಧಪಡಿಸಲು ಉದ್ದೇಶಿರುವ ಜಲಗ್ರಂಥ ದ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವg ನೇತೃತ್ವದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು.

 ಹರ್ಯಾಣ ಸರ್ಕಾರದಲ್ಲಿ ಈಗಾಗಲೇ ಸುಮಾರು 18 ಲಕ್ಷ ವಾಟರ್ ಬಾಡಿಗಳನ್ನು ಪತ್ತೆ ಮಾಡಿ ಜಿಯೋ ಟ್ಯಾಗ್ ಮಾಡಿದ್ದಾರೆ. ಅತ್ಯಂತ ಸಣ್ಣ ಪುಟ್ಟ ಖಾಸಗಿ ವಾಟರ್ ಬಾಡಿಗಳು ಇದರಲ್ಲಿ ಸೇರ್ಪಡೆ ಆಗಿವೆ, ಎಂದು ಸಚಿವರು ತಮ್ಮ ಅನುಭವ ಹಂಚಿಕೊಂಡರು.

ಬಸವರಾಜ್ ರವರ ಮನದಾಳದಂತೆ, ಕರ್ನಾಟಕ ರಾಜ್ಯ ಸರ್ಕಾರ, ಈ ರೀತಿ ವಾಟರ್ ಬಾಡಿಗಳನ್ನು ಪತ್ತೆ ಮಾಡಿ ಜಿಯೋ ಟ್ಯಾಗ್ ಮಾಡಿರುವ ಬಗ್ಗೆ ಖಾತರಿ ಮಾಡುವುದರ ಜೊತೆಗೆ, ಈ ಕೆರೆ-ಕಟ್ಟೆಗಳಿಗೆ ನದಿ ನೀರು ಮತ್ತು ಸಂಸ್ಕರಿಸಿದ ನೀರು ತುಂಬಿಸುವ ಬಗ್ಗೆ ಚಿಂತನೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದರು.

ಅಧ್ಯಯನವನ್ನು ಪ್ರಾಯೋಜಿಕವಾಗಿ ತುಮಕೂರು ಜಿಲ್ಲೆಯಲ್ಲಿ ಕೈಗೊಂಡು ನಂತರ, ರಾಜ್ಯಾಂದ್ಯಾಂತ ವಿಸ್ತರಣೆ ಮಾಡಲು ಉದ್ದೇಶ ಹೊಂದಿರುವುದು ಬಹಳ ಒಳ್ಳೆಯ ಆಲೋಚನೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಬ್ಬ ಮಹಿಳೆ ಒಂದು ಕಲ್ಯಾಣಿಯನ್ನು ದತ್ತು ತೆಗೆದು ಕೊಂಡು ಪುನಶ್ಚೇತನ ಮಾಡಿರುವ ಪೋಟೋಗಳನ್ನು ತಮ್ಮ ಮೊಬೈಲ್ ನಲ್ಲಿ ತೆಗೆದು ಪ್ರದರ್ಶನ ಮಾಡಿದ್ದು ಮೆಚ್ಚಲೇ ಬೇಕು.

ಕರ್ನಾಟಕ ರಾಜ್ಯ ಸರ್ಕಾರ ಕೆರೆಗಳಿಗೆ ನದಿ ನೀರು ತುಂಬಿಸುÀವುದು ಯಾವಕಾರಣಕ್ಕಾಗಿ, ಎಂದು ಶ್ರೀ ಜಿ.ಎಸ್.ಬಸವರಾಜ್ ರವರು ಎಳೆಎಳೆಯಾಗಿ ವಿವರಿಸಿದರು. ಸುಮಾರು ತುಮಕೂರು ಜಿಲ್ಲೆಯಲ್ಲಿಯೇ 5 ಲಕ್ಷಕ್ಕೂ ಅಧಿಕ ಬೋರ್ ವೆಲ್ ಗಳು ಇವೆ, ಮಳೆ ನೀರಿನಿಂದ ಪಿಕ್ ಅಪ್ ಗಳಲ್ಲಿ ನೀರು ತುಂಬಿದ ಒಂದೆರೆಡು ದಿವಸದಲ್ಲಿ, ಈ ಬೋರ್ ವೆಲ್ ಗಳು ನೀರನ್ನು ಖಾಲಿ ಮಾಡುವ ಬಗ್ಗೆ ವಿವರಿಸಿದರು.

ಸಚಿವರು ಬಹಳ ಖುಷಿಯಾಗಿ, ನಿಮ್ಮ ಒಮ್ಮತದ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಬರಲಿ, ಈ ಪ್ರಾಯೋಗಿಕ ಯೋಜನೆಯನ್ನು ಪರಿಶೀಲಿಸುತ್ತೇವೆ ಎಂಬ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಯಾವ ಯಾವ ಅಂಶಗಳನ್ನು, ಜಲಗ್ರಂಥ ದಲ್ಲಿ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ. ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸುವ 75 ಜಲಶಕ್ತಿ ಅಭಿಯಾನದ ಬಗ್ಗೆ ಮತ್ತು 75 ನೇ ಸಭೆಗೆ ತಾವೂ ಭಾಗವಹಿಸಿ, ತುಮಕೂರು ಜಿಲ್ಲಾ ಜಲಗ್ರಂಥ ಬಿಡುಗಡೆ ಸಮಾರಂಭಕ್ಕೆ ಬರಲು ಮತ್ತು ಜಲಗ್ರಂಥಕ್ಕೆ ಸಂದೇಶ ಕಳುಹಿಸಲು ಸಚಿವರಿಗೆ ಒಂದು ದಿಕ್ಸೂಚಿ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಸತ್ಯಾನಂದ್, ಶ್ರೀ ಬಸವರಾಜ್ ಸುರಣಗಿ ಮತ್ತು ಶ್ರೀ ರಕ್ಷಿತ್ ಇದ್ದರು.