23rd December 2024
Share

TUMAKURU:SHAKTHIPEETA FOUNDATION

ನನ್ನ ಹುಟ್ಟೂರು ಕುಂದರನಹಳ್ಳಿಯ ನಮ್ಮ ಮನೆ ಪಕ್ಕದ ರಸ್ತೆಯ ಸ್ಥಿತಿಯ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಕುಂದರನಹಳ್ಳಿ ಗ್ರಾಮದ  ಮೋದಿಯವರ ಪರಮ ಭಕ್ತ ಶ್ರೀ ಕೆ.ಆರ್.ಮಹೇಶ್ ರವರು ಗೇಲಿ ಮಾಡಿದ್ದಾರೆ. ಇವರು ಏಕೆ ಗೇಲಿ ಮಾಡಿದ್ದಾರೆ ಎಂಬುದರ ಅರಿವು ನನಗಿದೆ.

ನಮ್ಮ ಮನೆಯ ಪಕ್ಕ ಖಾಸಗಿ ಜಮೀನು ಇತ್ತು, ಈಗ ದಿ.ಪ್ರಕಾಶ್ ರವg ಕುಟುಂಬ ಹೊಸದಾಗಿ ಮನೆ ನಿರ್ಮಾಣ ಮಾಡಿ, ಆವರಣ ಗೋಡೆ ಹಾಕಿದ್ದಾರೆ, ಒಂದು ಕಡೆ ದಿಬ್ಬ ಇದೆ, ಇನ್ಮೊಂದು ಕಡೆ ಪಿಎಂಜಿಎಸ್‍ವೈ ನವರು ನಿರ್ಮಾಣ ಮಾಡುತ್ತಿರುವ ರಸ್ತೆ ಇದೆ.

ಇದು ಒಂದು ಕೆಸರಿನ ವಾಟರ್ ಬಾಡಿ ಆಗಿದೆ, ಎಂದು ಶಾಲುವಿನಲ್ಲಿ ಇಟ್ಟು ಒಡೆದ ಹಾಗೇ ಈ ಚಿತ್ರ ಪ್ರದರ್ಶನ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ರವರು ಈ ಬಗ್ಗೆ ಗಮನ ಹರಿಸಲು ಈ ಮೂಲಕ ಬಹಿರಂಗ ಮನವಿ.

ಪಿಎಂಜಿಎಸ್‍ವೈ ರಸ್ತೆ ನಿರ್ಮಾಣ ಮಾಡುತ್ತಿದ್ದು, ಈ ಭಾಗದ ಚರಂಡಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಎಇಇ ರವರಾದ ಶ್ರೀ ರಮೇಶ್ ರವರ ಗಮನ ಸೆಳೆಯಲಾಗಿದೆ.