27th July 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲೆಯಲ್ಲಿ ರುವ ಅರಣ್ಯವಾರು, ಅರಣ್ಯದಲ್ಲಿ ವಾಸವಿರುವ ಪ್ರಾಣಿಗಳಿಗೆ ಮತ್ತು ಅರಣ್ಯಕ್ಕೆ ಎಷ್ಟು ನೀರು ಬೇಕು. ಅರಣ್ಯದಲ್ಲಿ ಬೀಳುವ ಮಳೆಯ ನೀರೆಷ್ಟು, ಎಷ್ಟು ನೀರನ್ನು ಸಂಗ್ರಹಮಾಡಲು ಕೆರೆ-ಕಟ್ಟೆಗಳು, ಪಿಕ್ ಅಪ್ ಗಳು ಅರಣ್ಯವಾರು ಹಾಲಿ ಇವೆ.

 ಹೊಸದಾಗಿ ಅರಣ್ಯವಾರು ನಿರ್ಮಾಣ ಮಾಡಬಹುದಾದ ಜಲಸಂಗ್ರಹಾಗಾರಗಳು ಎಷ್ಟು ಎಂಬ ಬಗ್ಗೆ ತುಮಕೂರು ಜಿಲ್ಲೆಯ ಅರಣ್ಯ ಇಲಾಖೆಯ ಡಿಸಿಎಫ್  ಶ್ರೀ ಡಾ.ರಮೇಶ್ ರವರೊಂದಿಗೆ ದಿನಾಂಕ:30.06.2022 ರಂದು ಸಮಾಲೋಚನೆ ನಡೆಸಲಾಯಿತು.

ಸ್ವತಃ ಸಂಶೋಧಕರಾಗಿರುವ ಡಾ.ರಮೇಶ್ ರವರು, ತಮ್ಮ ಆಲೋಚನೆ ನಿಜಕ್ಕೂ ಅಭಿನಂದನೀಯ, ಆದಷ್ಟು ಬೇಗ ತಮಗೆ ನಿಖರವಾದ ಮಾಹಿತಿ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಜೊತೆಗೆ ಪಿಪಿಪಿ ಮಾದರಿಯಲ್ಲಿ ತುಮಕೂರು ಜಿಲ್ಲೆಯ ತಮ್ಮ ಇಲಾಖೆಯ 11 ವಿಧಾನಸಭಾ ಕ್ಷೇತ್ರವಾರು ಯಾವ ಸ್ಥಳದಲ್ಲಿ ,ಎಲ್ಲೆಲ್ಲಿ ಯಾವ ಮಾದರಿಯ ಇಕೋ ಟೂರಿಸಂ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಲು ಚರ್ಚೆ ನಡೆಸಲಾಗಿದೆ.