22nd November 2024
Share

TUMAKURU:SHAKTHIPEETA FOUNDATION

ತುಮಕೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 939 ಉಧ್ಯಾನವನಗಳ ಪೈಕಿ ನಮಗೂ ದತ್ತು ನೀಡಿ, ರೈಸ್ ಮಿಲ್ ಅಸೋಶಿಯೇಷನ್ ವತಿಯಿಂದ ನಿರ್ವಹಣೆ ಮಾಡುವುದರ ಜೊತೆಗೆ ಗಿಡಗಳನ್ನು ಹಾಕಿ ಬೆಳೆಸುತ್ತೇವೆ ಎಂದು ಶ್ರೀ ಕಲ್ಕಿ ರಮೇಶ್ ಬಾಬು ಸಂತೋಷದಿಂದ ವಿಷಯ ಹಂಚಿಕೊಂಡರು.

ಈ ಹಿನ್ನಲೆಯಲ್ಲಿ ತುಮಕೂರು ಮಹಾ ನಗರ ಪಾಲಿಕೆಯ ಮೇಯರ್ ಶ್ರೀ ಕೃಷ್ಣಪ್ಪನವರು, ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ರವರೊಂದಿಗೆ ಸಮಾಲೋಚನೆ ನಡೆಸಿ, ಶೀಘ್ರವಾಗಿ ಜಿಲ್ಲಾಧಿಕಾರಿಗಳಿಂದ ಕಡತ ಅನುಮೋದನೆ ಮಾಡಿಸಿ, ಪಿಪಿಪಿ ಮಾದರಿ ಹಸಿರು ತುಮಕೂರು ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲು  ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ 26 ನೇ ವಾರ್ಡ್‍ನ ಪಾಲಿಕೆ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ್ ರವರು ಮತ್ತು ಬೇವಿನ ಮರದ ಶ್ರೀ ಸಿದ್ದಪ್ಪನವರು ಇದ್ದರು.

‘ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಮಯ ನೀಡಿದ ತಕ್ಷಣ, ನಗರದ ಸಂಘಸಂಸ್ಥೆಗಳ ಪದಾಧಿಕಾರಿಗಳ  ಸಭೆ ಆಯೋಜಿಸಲಾಗುವುದು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರೂ 17,50000 ಅನುದಾನ ಮಂಜೂರು ಮಾಡಿಸಿ ಬೇಗ ಸಭೆ ನಡೆಸಿ ಎಂದು ಸ¯ಹೆ ನೀಡಿದ್ದಾರೆ.

ನಗರದ ಹಲವಾರು ತಂಡಗಳು ಪಿಪಿಪಿ ಮಾದರಿಯಲ್ಲಿ ತುಮಕೂರು ನಗರವನ್ನು ಹಸಿರು ತಾಣÀವಾಗಿಸಲು ಸಜ್ಜಾಗಿದ್ದಾರೆ.