22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಈ ಹೋರಾಟ ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಏನೂ ಪ್ರಗತಿ ಸಾಧಿಸಿಲ್ಲ ಎಂಬ ಕೊರಗಂತೂ ಇಲ್ಲ. ಆದರೇ ಶೇಕಡ 100 ರಷ್ಟು ಪ್ರಗತಿ ಸಾಧಿಸಲೇ ಬೇಕು ಎಂಬ ಹಠ ನಮ್ಮದಾಗಿದೆ.

ಹೋರಾಟದ ನೇತೃತ್ವ ವಹಿಸಿರುವುದು ಸಾಮಾನ್ಯ ಒಬ್ಬ ಪ್ರಜೆಯಲ್ಲ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 5 ಭಾರಿ ಸಂಸದರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ಜೊತೆ ಆವೇಶ, ಆಕ್ರೋಶ, ಕೂಗಾಟ, ಚೀರಾಟ ಮಾಡಿಕೊಂಡು  ಬಂದಿರುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಎಂಬ ಸಂಸ್ಥೆಯ ಪದಾಧಿಕಾರಿಗಳು.

ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಜಿಲ್ಲೆಯ ಕೆಲವು ಕೆರೆಗಳಿಗಾದರೂ ನದಿ ನೀರು ತುಂಬುವ ಸಾಹಸ ಮಾಡುತ್ತಿದ್ದಾರೆ. ಸಂಸದರು ಜಿಲ್ಲೆಯ ಎಲ್ಲಾ ಕೆರೆಗಳಿಗೂ ನದಿ ನೀರು ಅಲೋಕೇಷನ್ ಮಾಡಿಸಲು ಹರಸಾಹಸ ಮಾಡುತ್ತಿದ್ದಾರೆ.

‘ಈಗ ಶಕ್ತಿಪೀಠ ಫೌಂಡೇಷನ್ ಸಂಸ್ಥೆ, ತುಮಕೂರಿನ ಪ್ರಜಾಪ್ರಗತಿ ದಿನ ಪತ್ರಿಕೆ ಮತ್ತು ಪ್ರಗತಿ ಟಿವಿ ಸಹಕಾರದಿಂದ ತನಿಖಾ ಪತ್ರಿಕಾವರದಿ ಮಾಡುವ ಮೂಲಕ, ತುಮಕೂರು ಜಿಲ್ಲೆಯಲ್ಲಿವೆ ಎಂದು ಹೇಳುತ್ತಿರುವ ಸುಮಾರು 4365 ಕೆರೆಕಟ್ಟೆಗಳ ಜಿಯೋ ಟ್ಯಾಗಿಂಗ್ ಗೆ ಕೊನೆಯ ಪ್ರಯತ್ನ’.

ದಿನಾಂಕ:21.10.2019 ರಿಂದ ಇದೂವರೆಗೂ ನಡೆದಿರುವ ಪ್ರತಿಯೊಂದು ದಿಶಾ ಸಮಿತಿ ಸಭೆಯಲ್ಲಿ ಚರ್ಚೆಸಿ, ನಿರ್ಣಯ ಮಾಡಲಾಗಿದೆ. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದಿಶಾ ಸಮಿತಿ ನಿರ್ಣಯ ಮಾಡಿದ 30 ದಿವಸದೊಳಗೆ ಅಗತ್ಯಕ್ರಮ ಕೈಗೊಳ್ಳ ಬೇಕು ಎಂಬ ಆದೇಶ ಮಾಡಿದ್ದಾರೆ.

ಪ್ರತಿ ದಿಶಾ ಸಭೆಯ ಅನುಪಾಲನಾ ವರದಿ ನೀಡಿ, ನಾನು ಕೇಳುತ್ತಿರುವುದು ಕೆರೆ-ಕಟ್ಟೆಗಳ ಜಿಯೋ ಟ್ಯಾಗಿಂಗ್, ಕೆರೆಗಳಿಗೆ ನದಿ ನೀರು, ಜೆಜೆಎಂ ಯೋಜನೆಯಡಿ ವಿಲೇಜ್ ಆಕ್ಷನ್ ಪ್ಲಾನ್, ಅಟಲ್ ಭೂಜಲ್ ಯೋಜನೆಯಡಿ ಪ್ರತಿ ಗ್ರಾಮಪಂಚಾಯಿತಿಯ ವಾಟರ್ ಆಡಿಟ್, ವಾಟರ್ ಬಡ್ಜೆಟ್, ವಾಟರ್ ಸ್ಟ್ರಾಟಜಿ ಮಾಹಿತಿ ನೀಡಿ.ಜೊತೆಗೆ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರಿನ ಯೋಜನೆಯ ಪಕ್ಕಾ ಮಾಹಿತಿ ನೀಡಿ,

 ನಾನು ಈ ಬಗ್ಗೆ ಬಹುತೇಕ ಎಲ್ಲಾ ಕಚೇರಿಗಳಿಗೂ ಭೇಟಿ ನೀಡಿ, ಪಾಠ ಮಾಡಿ ಬಂದಿದ್ದೇನೆ, ರಾಜ್ಯ ಸರ್ಕಾರದಿಂದಲೂ ನೀರಾವರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಮತ್ತು ಮಾಹಿತಿ ಕಣಜಕ್ಕೆ ಮಾಹಿತಿ ಅಪ್ ಲೋಡ್ ಮಾಡಲು ಶಕ್ತಿಪೀಠ ಫೌಂಡೇಷನ್ ಮತ್ತು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಶ್ರಮಿಸುತ್ತಿದ್ದಾರೆ, ಸಹಕರಿಸಿ ಎಂದು ಸುತ್ತೋಲೆ ಹೊರಡಿಸಿದ್ದಾರೆ.

ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ರವರಿಗೆ ಮನವಿ ಸಲ್ಲಿಸಿದಾಗ ಅವರು ಹೇಳಿದ ಖಡಕ್ ಮಾತು, ನಿಮ್ಮ ಮನವಿ ಒಪ್ಪುತ್ತೇನೆ, ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರಧಾನಿ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ. ದಿಶಾ ಸಮಿತಿಯಲ್ಲೂ ನಿರ್ಣಯ ಮಾಡಿದ್ದೀರಿ. ಆದರೆ ಇಲಾಖೆ ಮೂಲಕ ಪೂರ್ಣ ಪ್ರಮಾಣದ ಪ್ರಸ್ತಾವನೆ ಬರದೆ ನಾನು ಹೇಗೆ ಮಂಜೂರು ಮಾಡಲಿ.

ಅಪೂರ್ಣ ಪ್ರಸ್ತಾವನೆಯನ್ನು ಈಗಾಗಲೇ ನನಗೂ ಸಲ್ಲಿಸಲಾಗಿದೆ. ಪೂರ್ಣಪ್ರಮಾಣದ ಯೋಜನೆ ಸಲ್ಲಿಸುತ್ತೇವೆ ಎಂದು ಎಷ್ಟು ದಿವಸದಿಂದ ಹೇಳುತ್ತೀರಿ ಎಂಬಂತೆ ಇತ್ತು. ಅವರ ಮಾತಿನ ಧಾಟಿ.

ತುಮಕೂರು ಜಿಲ್ಲೆಯ ಮತದಾರರು ದಡ್ಡರಲ್ಲ, ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರನ್ನು ಸೋಲಿಸಿ, ಬಸವರಾಜ್ ರವರನ್ನು ಗೆಲ್ಲಿಸಿದ್ದು ಇವರು ಪಕ್ಷಬೇದ, ಜಾತಿಬೇದ ಮಾಡದೆ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಿಸುವ ಹೋರಾಟ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ಇದ್ದಾರೆ ಏನಾದರೂ ಅನೂಕೂಲ ಆಗಬಹುದು ಎಂಬ ಮತ ಪ್ರಜ್ಞೆಯಿಂದ, ಈಗ ಮೌನವಾಗಿದ್ದರೆ ಮತದಾರರಿಗೆ ದ್ರೋಹ ಮಾಡಿದ ಹಾಗೆ ಆಗುವುದಿಲ್ಲವೇ?’

ದಿನಾಂಕ:12.06.2022 ರಂದು ನಡೆಯುವ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ  ಪಕ್ಕಾ ಅನುಪಾಲನಾ ವರದಿ ನೀಡುವವರೆಗೂ ಮೇಲೆ ಹೇಳುವುದಿಲ್ಲ, ಮಾನ್ಯ ಎಸ್.ಪಿಯವರು ಜೈಲಿಗೆ ಬೇಕಾದರೂ ಹಾಕಿಸಲಿ. ಇದು ಕೊನೆಯ ಆಟ ಆಗ ಬಹುದು.