24th April 2024
Share

TUMKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಜೀವಂತವಾಗಿ  ಇದ್ದವು, ಎನ್ನಲಾದ ತಲಪುರಿಕೆಗಳಿಗೆ ಜೀವ ತುಂಬಲು ಕಳೆದ ಹಲವಾರು ವರ್ಷಗಳಿಂದ ಜನತೆಯ ಹೋರಾಟ ನಿರಂತರವಾಗಿ ಇತ್ತು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಸಂಸದರ ಆದರ್ಶ ಗ್ರಾಮಪಂಚಾಯಿತಿಯ ಯೋಜನೆಯಡಿ, ಕೊರಟಗೆರೆ ತಾಲ್ಲೋಕಿನ, ಕುರುಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲತಾಳ್ ಶ್ರೀ ಸಿದ್ದಗಂಗಯ್ಯನವರ ತೋಟದ ಬಳಿ ಇದ್ದ ತಲಪುರಿಕೆ ಬಳಿಯೇ ಸಭೆ ನಡೆಸಿ ತಲಪುರಿಕೆ ಸಂರಕ್ಷಣೆ ಮಾಡಿ ಎಂಬ ಜಲಶಕ್ತಿ ಅಭಿಯಾನ ಮಾಡಿ ಸರ್ಕಾರದ ಗಮನ ಸೆಳೆದ್ದಿದ್ದರು.

ಇಂದು ದಿನಾಂಕ:11.06.2022 ರಂದು ಕೊರಟಗೆರೆಯ ಜಲಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧ ಹಿರಿಯ ಐಎಸ್ ಅಧಿಕಾರಿ ಶ್ರೀ ಅನಿಲ್ ಕುಮಾರ್ ರವರು ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿರವರಾದ ಶ್ರೀ ಮೃತ್ಯುಂಜಯಸ್ವಾಮಿರವರು ಭಾಗವಹಿಸಿದ್ದರು.

ತಲಪುರಿಕೆ ಸಂಶೋಧಕರು ಇಲ್ಲಿಯೂ ಸಹ ತಲಪುರಿಕೆ ಸಂರಕ್ಷಣೆಯ ಬಗ್ಗೆ ಗಮನಸೆಳೆದರು, ಈ ತಲಪುರಿಕೆಗಳು ಯಾವ ಇಲಾಖೆಗೆ ಸೇರುತ್ತವೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ನೀತಿ ಆಯೋಗದವರು ತಲಪುರಿಕೆ ಬಗ್ಗೆ ಯೋಜನೆ ರೂಪಿಸಿರುವಾಗ, ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಏನಾಗಿದೆ ಎಂಬ ಭಾಷಣಗಳು ಹರಿದಾಡಿದವು.

ಸಭೆ ಮುಗಿದ ತಕ್ಷಣ ಶ್ರೀ ಮೃತ್ಯುಂಜಯಸ್ವಾಮಿರವರು ಮಾಡಿದ ಕೆಲಸ, ನಡೆಯಿರಿ ತಲಪುರಿಕೆ ಸ್ಥಳ ಪರೀಶಿಲನೆ ಮಾಡೋಣ ಎಂದು ತಲಪುರಿಕೆ ಬಳಿ ಹೋರಟೇ ಬಿಟ್ಟರು. ಅದೇ ಹೊಲತಾಳ್ ಸಿದ್ಧಗಂಗಯ್ಯನವರ ತೋಟದ ತಲಪುರಿಕೆ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ತಕ್ಷಣ ತÀಲಪುರಿಕೆ ಸಂರಕ್ಷಣೆ ಬಗ್ಗೆ ಪರಿಕಲ್ಪನೆ ವರದಿ ನೀಡಲು ಸೂಚಿಸಿದರು.

ಜನರಿಗೆ ಆಶ್ಚರ್ಯವೋ ಆಶ್ಚರ್ಯ ಸರ್ಕಾರವೇ ತಲಪುರಿಕೆ ಬಳಿ ಬಂತಲ್ಲ ಎಂಬ ಹರ್ಷ ವ್ಯಕ್ತಪಡಿಸಿದರು. ಜಲಗ್ರಂಥ ರಚಿಸುತ್ತಿರುವ ನನಗೆ ಇದೊಂದು ಲೈವ್ ಆರ್ ಅಂಡ್ ಡಿ ಆಯಿತು. ಜನ ನೀರಿಕ್ಷೆ ಮಾಡುವುದು ಇದನ್ನೆ. ಶ್ರೀ ಮೃತ್ಯುಂಜಯಸ್ವಾಮಿರವರೇ ಧನ್ಯವಾದಗಳು

ತುಮಕೂರು ಜಿಲ್ಲೆಯಲ್ಲಿನ  ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ, ಶ್ರೀ ರೂಪಣ್ ಮಿಡಿಗೇಶಿ, ಶ್ರೀ ಎಸ್.ನರಸಿಂಹಲು ಬಾಬು, ದಾನ ಫೌಂಡೇಷನ್  2008 ರಲ್ಲಿ ಸಂಶೋಧನೆ ಮಾಡಿರುವ ‘ತಲಪುರಿಕೆ ಜೀವ ಪೊರೆಯುವ ಜಲನಿಧಿ’ ಅಧ್ಯಯನ ವರದಿಯನ್ನು ಶ್ರೀ ಎಸ್.ನರಸಿಂಹಲು ಬಾಬು ನೀಡಿ ತಲಪುರಿಕೆ ಜೀವ ತುಂಬಿರಿ ಎಂಬ ಸಲಹೆ ನೀಡಿದರು.