23rd December 2024
Share

TUMAKURU:SHAKTHIPEETA FOUNDATION

ಕೊರಟಗೆರೆಯಲ್ಲಿ ನಡೆದ ಅಂತರ್ಜಲ ಮತ್ತು ನದಿ ನೀರು ಜಲಸಂವಾದದಲ್ಲಿ ಕೈಗೊಂಡ ಮಹತ್ತರ ನಿರ್ಣಯಗಳು.

  1. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಪ್ರಸ್ತಾವನೆ ಸಲ್ಲಿಸಲು ಸಣ್ಣ ನೀರಾವರಿ ಇಲಾಖೆಗೆ ಜನತೆಯ ಒತ್ತಾಯ, ಕೂಡಲೇ ಜಿಲ್ಲೆಯ ಯಾವುದೇ ಒಂದು ಒಂದು ಗ್ರಾಮವನ್ನು ಬಿಡದೆ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂಬ ಭರವಸೆಯನ್ನು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿರವರಾದ ಶ್ರೀ ಮೃತ್ಯುಂಜಯಸ್ವಾಮಿರವರು ನೀಡಿದರು.
  2. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಪ್ರಸ್ತಾವನೆಯನ್ನು ಸಲ್ಲಿಸುವುದು ಅಧಿಕಾರಿಗಳ ಕೆಲಸವಾದರೆ, ಅದಕ್ಕೆ ಬೇಕಾಗುವ ಹಣಕಾಸು ಮತ್ತು ನದಿ ನೀರಿನ ಅಲೋಕೇಷನ್ ಬಗ್ಗೆ ಜಿಲ್ಲೆಯ, ಸಚಿವರು ಶಾಸಕರು ಮತ್ತು ಸಂಸದರು ಹೊರಬೇಕು. ಉದಾಸೀನ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುವ ನಿರ್ಧಾರಕ್ಕೆ ರೈತ ಶಕ್ತಿ ಕಹಳೆ ಮೊಳಗಿಸಿತು.
  3. ಎತ್ತಿನಹೊಳೆ ಯೋಜನೆಯ ‘ಬೈರಗೊಂಡ್ಲು ಬ¨ಪರ್ ಡ್ಯಾಂ’ ಸ್ಥಳಾಂತರ ಬೇಡ ಮುಖ್ಯ ಮಂತ್ರಿಯವರೇ? ಅಲ್ಲಿಯೇ ನಿರ್ಮಾಣ ಮಾಡಿ. ಎಂಬ ಬಹಿರಂಗ ಮನವಿ ಮಾಡಿದರು. ಡ್ಯಾಂ ನಿರ್ಮಾಣ ಮಾಡುವವರೆಗೂ ಹೋರಾಟ ಮಾಡಲು ರೈತರು ಪ್ರತಿಜ್ಞೆ ಕೈಗೊಂಡರು.
  4. ಕೊರಟಗೆರೆ, ಮಧುಗಿರಿ ತಾಲ್ಲೋಕಿನ ಕೆರೆಗಳ ನದಿ ನೀರಿನ ಯೋಜನೆಗೆ ‘ಸಚಿವ ಸಂಪುಟದ ಅನುಮೋದನೆ ನೀಡಿ’, ಜಿಲ್ಲೆಯ ಎಲ್ಲಾ ರೂ 1249 ಕೋಟಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಮುಖ್ಯ ಮಂತ್ರಿಯವರಿಗೆ ಬಹಿರಂಗ ಮನವಿ ಮಾಡಿದರು.
  5. ಕೇಂದ್ರ ಸರ್ಕಾರ ‘ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೊಳ್ಳಲು, ಕುಮಾರಧಾರ ಮತ್ತು ಬೆಟ್ಟಕುಮ್ರಿ ಯೋಜನೆಯನ್ನು ಸೇರ್ಪಡೆ’ ಮಾಡಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಯವರಿಗೆ ಮತ್ತು ಜಲಸಂಪನ್ಮೂಲ ಸಚಿವರಿಗೆ ಬಹಿರಂಗ ಮನವಿ ಮಾಡಿದರು.
  6. ತಲಪುರಿಕೆಗಳು ಸೇರಿದಂತೆ, ತುಮಕೂರು ಜಿಲ್ಲೆಯಲ್ಲಿ ಗೂಗಲ್ ಇಮೇಜ್ ನಲ್ಲಿ ಕಾಣುವ ‘4365 ಜಲಸಂಗ್ರಹಾಗಾರಗಳ ತಪಾಸಣೆ’ ನಡೆಸಲು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿರವರಾದ ಶ್ರೀ ಮೃತ್ಯುಂಜಯಸ್ವಾಮಿರವರು ಇಲಾಖಾ ಅಧಿಕಾರಿಗಳಿಗೆ ಆದೇಶ. ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಲು ಜನತೆಯ ಆಗ್ರಹ.
  7. ಮೇಕೆದಾಟುವಿನ ಬಳಿ 57 ಟಿ.ಎಂ.ಸಿ.ಅಡಿ ನೀರು ನಿಲ್ಲಿಸುವ ಬದಲಿಗೆ, ತುಮಕೂರು ತಾಲ್ಲೋಕು ‘ಜಾಲಗುಣಿ ಬಳಿ ಸುಮಾರು 15 ಟಿ.ಎಂ.ಸಿ ಅಡಿ ಸಾಮಾಥ್ರ್ಯದ ಹೇಮಾವತಿ ಬಫರ್ ಡ್ಯಾಂ’ ನಿರ್ಮಾಣ ಮಾಡಿ, ನೀರು ನಿಲ್ಲಿಸಲು ಜನತೆಯ ಆಗ್ರಹ. ಶ್ರೀ ಬಸವರಾಜ್ ಬೊಮ್ಮಾಯಿರವರೇ ಜಲಸಂಪನ್ಮೂಲ ಸಚಿವರಾಗಿದ್ದಾಗ ರೂಪಿಸಿದ ಯೋಜನೆ ಇದಾಗಿದೆ. ಉಳಿದ 40 ಟಿ.ಎಂ.ಸಿ ಅಡಿ ನೀರಿನ ಮೇಕೆದಾಟು ಯೋಜನೆಗೂ ಮತ್ತು ಜಾಲಗುಣಿ ಡ್ಯಾಂಗೂ ಕೇಂದ್ರ ಸರ್ಕಾರ ಅನುದಾನ ನೀಡುವವರೆಗೂ ಹೋರಾಟ ಮಾಡಲು ನಿರ್ಧಾರ ಮಾಡಿದರು.
  8. ತುಮಕೂರು ಜಿಲ್ಲೆಯಲ್ಲಿ ಉಗಮವಾಗುವ ಬಹುತೇಕ ನದಿಗಳು ಕೊರಟಗೆರೆಯ ಸಿದ್ಧರಬೆಟ್ಟದಲ್ಲಿ ಉಗಮವಾಗುವುದರಿಂದ ಉಗಮವಾಗುವ ನದಿಗಳು ಮತ್ತು ಹರಿಯುವ ‘ನದಿಗಳ ಪುನಶ್ಚೇತನ’ಕ್ಕೆ ಜನತೆಯ ಆಗ್ರಹ.
  9. ತುಮಕೂರು ಜಿಲ್ಲೆಯಲ್ಲಿನ ‘ಕರಾಬುಹಳ್ಳಗಳ ಪುನಶ್ಚೇತನ’ಕ್ಕೆ ಜನತೆಯ ಆಗ್ರಹ.

ಈ ಒಂಬತ್ತು ಯೋಜನೆಗಳ ಅನುಷ್ಠಾನ ಆಗುವವರೆಗೂ, ರೈತರ ಜೊತೆಯಲ್ಲಿ ಇದ್ದು, ಹಳ್ಳಿಯಿಂದ ದೆಹಲಿವರೆಗೂ ಸ್ಪಂಧಿಸುವ ಮತ್ತು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಅಧ್ಯಯ£ ಮಾಡುತ್ತಿರುವ ಶಕ್ತಿಪೀಠ ಫೌಂಡೇಷನ್ ಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಹಿರಿಯ ಐಎಸ್ ಅಧಿಕಾರಿ ಶ್ರೀ ಅನಿಲ್ ಕುಮಾರ್ ರವರು ಬಹಿರಂಗವಾಗಿ ಘೋಶಿಸಿದರು.

ಶಕ್ತಿಪೀಠ ಫೌಂಡೇಷನ್, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ನದಿ ನೀರಿನ ಮೌಲ್ಯಮಾಪನ ಮಾಡುವ ಆಂದೋಲನ ಆರಂಭಿಸಿದ್ದು, ಕೊರಟಗೆರೆಯ ಶಾಸಕರಾದ ಶ್ರೀ ಡಾ.ಪರಮೇಶ್ವರ್ ರವರಿಗೆ ‘ನದಿ ನೀರಿನ ಲೆಕ್ಕ ಕೊಡಿ’ ಎಂಬ ಬಹಿರಂಗ ಮನವಿ ಮಾಡಲಾಯಿತು. ಸಭೆಯಲ್ಲಿ ಇದ್ದ ಪರಮೇಶ್ವರ್ ರವರ ಅಭಿಮಾನಿಗಳು, ಸಭೆಯ ನಂತರ ಅವರ ಗಮನಕ್ಕೆ ತರುವ ಭರವಸೆ ನೀಡಿದರು.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಅಧ್ಯಯನ ಮಾಡುತ್ತಿದ್ದು ಬುದ್ದೀ ಜೀವಿಗಳು ಸಲಹೆ ನೀಡಲು   ಬಹಿರಂಗ ಮನವಿ ಮಾಡಲಾಯಿತು.

 ಶ್ರೀ ಜಿ.ಎಸ್.ಬಸವರಾಜ್ ರವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿಗೆ ನಿರಂತರವಾಗಿ ಶ್ರಮಿಸುತ್ತಿರುವ ಬಗ್ಗೆಯೂ ವಿವರ ನೀಡಲಾಯಿತು.

ಸಭೆಯಲ್ಲಿ ಶ್ರೀ ವೆಂಕಟಾಛಲಪತಿ ಮಾತನಾಡಿ, ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ಮಾಡಿ, ಮೇಲ್ಕಂಡ ಎಲ್ಲಾ ಯೋಜನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಘೋಶಿಸಿದರು. ಶ್ರೀ ಜಿ.ಎಸ್.ಬಸವರಾಜ್ ರವರು ಸೇರಿದಂತೆ ಪಕ್ಷಾತೀತವಾಗಿ ಜಿಲ್ಲೆಯ  ಎಲ್ಲ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳನ್ನು ಸರ್ವ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗುವುದು ಎಂದರು.

  ಶ್ರೀ ಕೋಡಗದಾಲ, ಲೋಕೇಶ್‍ರವರು ಮಾತನಾಡಿ, ಶಕ್ತಿಪೀಠ ಫೌಂಡೇಷನ್ ಆರಂಭಿಸಿರುವ ಜಲಶಕ್ತಿ ಅಭಿಯಾನದ 75 ಸಭೆಗಳ ಪೈಕಿ, 7 ನೇ ಸಭೆ ಇದಾಗಿದೆ. ಮಧುಗಿರಿಯಲ್ಲಿ ಮುಂದಿನ ಸಭೆ ನಡೆಸಲು ದಿನಾಂಕ ಮತ್ತು ಸಮಯ ನೀಡಿದರೆ  ಕಾರ್ಯಕ್ರಮ ರೂಪಿಸುವುದಾಗಿ ಘೋಷಿಶಿದರು.

ಶ್ರೀ ನರಸಿಂಹಲುರವರು ತಲಪುರಿಕೆ ಪುನಶ್ಚೇತನದ ಬಗ್ಗೆ ಮಾತನಾಡಿದರು, ಶ್ರೀ ಪಂಚಾಕ್ಷರಿರವರು ಮರಗಿಡಗಳ ಬಗ್ಗೆ ಮಾತನಾಡಿದರು,  ಶ್ರೀ ವೇದಾನಂದಮೂರ್ತಿಯವರು ಕುಮಾರಧಾರ ಮತ್ತು ಬೆಟ್ಟಕುಮ್ರಿ ಯೋಜನೆಯ ಬಗ್ಗೆ ಮಾತನಾಡಿದರು.

ಶ್ರೀ ವೆಂಕಟೇಶ್ ರವರು ನದಿಗಳ ಪುನಶ್ಚೇತನದ ಬಗ್ಗೆ ಮಾತನಾಡಿದರು.  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಣಯಗಳ ಮೆಲುಕು ಹಾಕಿದರು. ಸಂವಾದದಲ್ಲಿ ಇನ್ನೂ ಮುಂತಾದವರು ಮಾತನಾಡಿದರು.

ಸಭೆಯ ನಂತರ ಹಲವಾರು ರೈತರು, ಸಾರ್ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ನಿವೃತ್ತರಾಗಿರುವ ಶ್ರೀ ಕೆ.ಜೈಪ್ರಕಾಶ್ ರವರನ್ನು ಏಕೆ ಈ ಸಭೆಗೆ ಕರೆದುಕೊಂಡು ಬರಲಿಲ್ಲ, ಅವರನ್ನು ರಾಜ್ಯದ/ಜಿಲ್ಲೆಯ ನೀರಾವರಿ ಹೋರಾಟದಲ್ಲಿ ತೊಡಗಿಸಿಕೊಳ್ಳಿ ಎಂಬ ಸಲಹೆ ನೀಡಿದರು.

ಶ್ರೀ ಮಣುವಿನಕುರಿಕೆ ಶಿವರುದ್ರಯ್ಯ, ಶ್ರೀ ರಕ್ಷಿತ್ ರಾಮುಲು ಜೊತೆಯಲ್ಲಿ ಇದ್ದರು.