TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ನದಿ ನೀರಿನ ಮೌಲ್ಯಮಾಪನ ಮಾಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದಡಿ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯ ಜಾರಿಗೆ ‘ಜಲಗ್ರಂ ರಚಿಸಲು ಜಲಶಕ್ತಿ ಅಭಿಯಾನ ಕೈಗೊಳ್ಳಲಾಗಿದೆ.
ಮೊಟ್ಟ ಮೊದಲ ವಿಧಾನಸಭಾ ಕ್ಷೇತ್ರದ ನೀರಿನ ಲೆಕ್ಕದ ಸಭೆ, ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ದಿನಾಂಕ: 11.07.2022 ರಂದು ಆರಂಭವಾಗಲಿದೆ. ಜಯಮಂಗಲಿ,ಸುವರ್ಣಮುಖಿ ಮತ್ತು ಗರುಡಾಚಲ ನದಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಶ್ರೀ ವೆಂಕಟಚಲಾಪತಿಯವರು ಮತ್ತು ಶ್ರೀ ಕೊಡಗದಾಲದ ಲೋಕೇಶ್ ರವರು ಆಯೋಜಿಸಿರುವ ‘ಅಂತರ್ಜಲ ಮತ್ತು ನದಿ ನೀರು ಅಭಿವೃದ್ಧಿ ಸಂವಾದ’ ಸಭೆಯಲ್ಲಿಯೇ ಚಾಲನೆ ನೀಡಲಾಗುವುದು.
ಕೊರಟಗೆರೆ ಶಾಸಕರಾದ ಶ್ರೀ ಡಾ.ಜಿ.ಪರಮೇಶ್ವರ್ ರವರೊಂದಿಗೂ ಹಾಗೂ ಕ್ಷೇತ್ರದ ಮಾಜಿ ವಿಧಾನಸಭಾ ಸದಸ್ಯರು ಮತ್ತು ವಿಧಾನಸಭಾ ಆಕಾಂಕ್ಷಿಗಳ ಜೊತೆಯಲ್ಲಿಯೂ ಸಮಾಲೋಚನೆ ನಡೆಸಲಾಗುವುದು.
ಎಲ್ಲಾ ವರ್ಗದ ಜನರ ಸಹಭಾಗಿತ್ವ ಅವಶ್ಯಕ.







