12th April 2024
Share

TUMAKURU:SHAKTHIPEETA FOUNDATION

ಜುಲೈ 14 ರಂದು  ಹಸಿರು ತುಮಕೂರು ಮತ್ತು ನಗರದ ಉಧ್ಯಾನವನಗಳ ಹುಡುಕಾಟ ಜನಜಾಗೃತಿ ಸಭೆಯನ್ನು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನಗರದ ಸೋಮೇಶ್ವರ ಪುರಂನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಸಭೆಯನ್ನು  ಆಯೋಜಿಸಲಾಗಿದೆ.

ಈ ಸಭೆಯನ್ನು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಉದ್ಘಾಟನೆ ಮಾಡುವರು.

‘ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.’ತುಮಕೂರು ಮಹಾನಗರ ಪಾಲಿಕೆಯ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಈ ಯೋಜನೆಯ ನೇತೃತ್ವ ವಹಿಸಲಿದೆ ‘.

ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಕೃಷ್ಣಪ್ಪನವರು ಮತ್ತು ಪಾಲಿಕೆಯ ಸದಸ್ಯರು ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಾನವನಗಳ ಮತ್ತು ಗಿಡಹಾಕುವ ಯೋಜನೆಗೆ ಚಾಲನೆ ನೀಡಿದರೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು ಮತ್ತು ಸದಸ್ಯರು ಟೂಡಾ ವ್ಯಾಪ್ತಿಯ ಉಧ್ಯಾನವನಗಳ ಹುಡುಕಾಟ ಮತ್ತು ಗಿಡಹಾಕುವ ಯೋಜನೆಗೆ ಚಾಲನೆ ನೀಡುವುದು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರನ್ನು ನಗರದಲ್ಲಿ ಇವೆ ಎನ್ನಲಾದ 939  ಉಧ್ಯಾನವನದ ಮೌಲ್ಯ ಮಾಪನ ವರದಿ ಸಿದ್ಧಪಡಿಸಲು, ಜಿಐಎಸ್ ಲೇಯರ್ ಅಂತಿಮಗೊಳಿಸಲು ಮತ್ತು ಉಧ್ಯಾನವನಗಳÀ ದತ್ತು ನೀಡುವ ಯೋಜನೆಗಳಿಗೆ ಚಾಲನೆ ನೀಡಲು ಆಹ್ವಾನಿಸಲಾಗುವುದು.

ತುಮಕೂರಿನ ಪ್ರೆಸ್ ಕ್ಲಬ್ ಪಧಾದಿಕಾರಿಗಳು ನಗರದ 939 ಉಧ್ಯಾವನಗಳ ‘ಜಿಯೋಟ್ಯಾಗಿಂಗ್ ಡಿಜಿಟಲ್ ಆಂದೋಲ£’Àಕ್ಕೆ ಚಾಲನೆ ನೀಡುವರು.

ತುಮಕೂರಿನ ರೈಸ್ ಮಿಲ್ ಅಸೋಸಿಯೇಷನ್ ಪದಾಧಿಕಾರಿಗಳು ಉಧ್ಯಾವನಗಳ ದತ್ತು ಯೋಜನೆ ಜನಜಾಗೃತಿಗೆ  ಚಾಲನೆ ನೀಡುವರು.

ನಗರದ ಹಲವಾರು ಪರಿಸರ ಪ್ರೇಮಿಗಳು ಪಿಪಿಪಿ ಮಾದರಿಯಲ್ಲಿ ಯೋಜನೆ ಕೈಗೊಳ್ಳುವ ಬಗ್ಗೆ ಪ್ರತಿಪಾದನೆ ಮಾಡುವರು.

ತುಮಕೂರು ನಗರದಲ್ಲಿ ಮತ್ತು ವಸಂತಾನರಸಾಪುರಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನಂತೆ, ಒಂದು ಲಕ್ಷ ಗಿಡಹಾಕುವ ಮತ್ತು 10 ವರ್ಷ ನಿರಂತರವಾಗಿ ನಿರ್ವಹಣೆ ಮಾಡುವ ಯೋಜನೆಗೆ ಮುನ್ನುಡಿ ಬರೆಯಲಾಗುವುದು.

ಅರಣ್ಯ ಇಲಾಖೆಯ ಡಿಎಫ್‍ಓ ಶ್ರೀ ಡಾ.ರಮೇಶ್‍ರವರು ಯೋಜನೆಯ ರೂಪುರೇಷೆ ಸಿದ್ದಪಡಿಸಿಲಿದ್ದಾರೆ.

ತುಮಕೂರು ನಗರದಲ್ಲಿರುವ ಎಲ್ಲಾ ಹಂತದ ಶಾಲಾಕಾಲೇಜುಗಳ ವಿಧ್ಯಾರ್ಥಿಗಳ ಹಸಿರು ತಪಾಸಣೆ ಬಗ್ಗೆ, ಡಿಡಿಪಿಐ ಶ್ರೀ ನಂಜಪ್ಪನವರು, ಪಿಯು ಡಿಡಿ ಶ್ರೀ ಗಂಗಾಧರಯ್ಯನವರು ಮತ್ತು ವಿವಿಯ ಮುಖ್ಯಸ್ಥರು ಅಭಿಪ್ರಾಯ ಮಂಡಿಸುವರು, ನೋಡೆಲ್ ಪರಿಸರ ಪ್ರೇಮಿಗಳಾಗಿ ಇವರನ್ನು ಆಯೋಜಿಸುವ ಹೊಣೆಗಾರಿಕೆಯನ್ನು ನಗರದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಷಣ್ಮುಖಪ್ಪನವರು ಮತ್ತು ಅವರ ತಂಡ  ವಹಸಿಕೊಂಡಿದ್ದಾರೆ.

ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರು ನಗರಕ್ಕೆ ಬಂದು ಆಲದ ಮರದ ಪಾರ್ಕ್‍ನಲ್ಲಿ ‘ಉಧ್ಯಾನವದ ದತ್ತು’ ಬಗ್ಗೆ ಪ್ರತಿಪಾದನೆ ಮಾಡಿದ ವಿಚಾರಕ್ಕೆ ಒಂದು ಅಂತಿಮ ಮೆರೆಗು ಬರಲಿದೆ.

ಶ್ರೀ ಕನ್ನಿಕಾ ಪರಮೇಶ್ವರಿ ಮಹಿಳಾ ಸಮಾಜದವರು ದಿನಾಂಕ:07.07.2022 ರಂದು ಕೈಗೊಂಡಿದ್ದ ಅಷ್ಟದಶ ಶಕ್ತಿಪೀಠಾದಿ ದೇವತೆಗಳ ಪೂಜೆ’ ಯ ದಿವಸ, ಶ್ರೀ ರಮೇಶ್ ಬಾಬು, ಶ್ರೀ ಲಕ್ಷ್ಮಿನಾರಾಯಣ ಶೆಟ್ಟರು, ಶ್ರೀ ಬೇವಿನ ಮರದ ಸಿದ್ಧಪ್ಪನವರು ನಡೆಸಿದ ಚರ್ಚೆಗೆ, ಪೂರಕವಾಗಿ ದಿನಾಂಕ:11.07.2022 ರಂದು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶಕ್ತಿಪೀಠ ಫೌಂಡೇಷನ್ ಕಚೇರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರ್ಧಿರ್ಘ ಚರ್ಚೆ ನಡೆಸಿ, ಅಂತಿಮ ರೂಪರೇಷೆ ಬಗ್ಗೆ ಸಲಹೆ ನೀಡಿದರು.

ನಗರದ ಪರಿಸರ ಅಭಿಮಾನಿಗಳು ಹಾಜರಾಗಲು ಮನವಿ ಮಾಡಲಾಗಿದೆ.