22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಕೆರೆ-ಕಟ್ಟೆಗಳು 1596 ಅಥವಾ 4365 ಎಂಬ ಬಗ್ಗೆ ಡಿಜಿಟಲ್ ದಾಖಲೆ ನೀಡುವವರೆಗೂ ಧರಣೆ ಕೂರುವ ನಿರ್ಧಾರ ಮಾಡಿದ್ದೆ. ಈ ದಿನದ ಸಭೆಯಲ್ಲಿ ಎನ್.ಆರ್.ಡಿ.ಎಂ.ಎಸ್ ಶ್ರೀ ಸತೀಶ್ ಕುಮಾರ್ ರವರು ಸಾರ್ ನಾವು, ಗ್ರಾಮ ಪಂಚಾಯತ್‍ವಾರು ಜಲಸಂಗ್ರಹಾಗಾರಗಳ ಜಿಯೋ ಟ್ಯಾಗಿಂಗ್ ಮಾಡಿದ್ದೇವೆ. ಪಟ್ಟಿಯನ್ನು ನೀಡುತ್ತೇವೆ ಎಂದು ಒಂದು ಪಟ್ಟಿಯನ್ನು ಕೊಟ್ಟಿದ್ದಾರೆ. ಈ ಪಟ್ಟಿಯ ಪ್ರಕಾರ ತುಮಕೂರು ಜಿಲ್ಲೆಯಲ್ಲಿ 363 ಕಲ್ಯಾಣಿಗಳಿವೆಯಂತೆ.

ಕಲ್ಯಾಣಿಗಳ ಕೋಆರ್ಡಿನೇಟ್ ಕೊಟ್ಟಿಲ್ಲ ಆದ್ದರಿಂದ ಎನ್.ಆರ್.ಡಿ.ಎಂ.ಎಸ್ ಜಿಲ್ಲೆಯ ಜಲಸಂಗ್ರಹಾಗಾರಗಳ  ಜಿಯೋಟ್ಯಾಗಿಂಗ್ ಸಹಿತ ಪಟ್ಟಿ ಪಡೆಯಲು, ದಿನಾಂಕ:14.07.2022 ರಂದು ತಮ್ಮ ಕಚೇರಿಗೆ ಬರುತ್ತೇನೆ, ಎಂದು ಹೇಳಿದ್ದೇನೆ. ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಅವರಿಗೆ ನಾನು ಮೊಬೈಲ್‍ನಲ್ಲಿ ಪ್ರತಿ ದಿವ¸ ಮಾತನಾಡುವಾಗÀ ಪೋನ್ ರೆಕಾರ್ಡಿಂಗ್ ಮಾಡಿಕೊಳ್ಳಿ,   ನೋಡೋಣ ಎಷ್ಟು ದಿವಸ ಶ್ರಮ ಹಾಕಲಾಗಿದೆ ಎಂಬ ಡಿಜಿಟಲ್ ದಾಖಲೆಯೂ ನಿಮ್ಮ ಬಳಿ ಮತ್ತು ನನ್ನ ಬಳಿ ಇರಲಿ ಎಂಬ ಸಲಹೆ ನೀಡಿದ್ದೇನೆ. ಅವರು ಸಹ ಪೋನ್ ರೆಕಾರ್ಡಿಂಗ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದೇ ರೀತಿ ಸಣ್ಣ ನೀರಾವರಿ ಇಲಾಖೆಯವರು, ಇದೂವರೆಗೂ ಲೆಕ್ಕವಿಲ್ಲದೆ ಇಲ್ಲದೇ ಇರುವ  389 ಜಲಸಂಗ್ರಹಾಗಾರಗಳನ್ನು ಹುಡುಕಿ ತಂದು ಪಟ್ಟಿಯನ್ನು ಇಂದಿ£ ಸಭೆಯಲ್ಲಿ ನೀಡಿದ್ದಾರೆ.

 ಅಟಲ್ ಭೂಜಲ್ ಯೋಜನೆಗೆ ಸೇರ್ಪಡೆ ಆಗಿರುವ 6 ತಾಲ್ಲೋಕುಗಳ ಪಟ್ಟಿಯನ್ನು ಪ್ರತಿವಾರವೂ ಸಂಗ್ರಹ ಮಾಡಿ ಜಿಯೋಟ್ಯಾಗಿಂಗ್ ಮಾಡಿ ಕೊಡುವ ಭರವಸೆಯನ್ನು ಅಟಲ್ ಭೂಜಲ್ ನ ಶ್ರೀ ಪ್ರಭಾಕರ್ ತಿಳಿಸಿದ್ದಾರೆ. ಅವರು ಮಾತಿನ ಮೇಲೆ ನಿಗಾ ಇರುವ ವ್ಯಕ್ತಿ. ಸಣ್ಣ ನೀರಾವರಿ ಇಲಾಖೆಗೂ ಪ್ರತಿವಾರ ಭೇಟಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ನಡೆದ (ದಿನಾಂಕ:12.07.2022 g0Àದು) ದಿಶಾ ಸಮಿತಿÀಯಲ್ಲೂ, ಈ ಬಗ್ಗೆ ಬಿಸಿ,ಬಿಸಿ ಚರ್ಚೆಯಾಗಿದೆ, ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರತಿ ವಾರವೂ ಇಂತಿಷ್ಟು ಹೊಸದಾಗಿ ಜಲಸಂಗ್ರಹಾಗಾರಗಳನ್ನು ಹುಡುಕಲಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡಿ, ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಅಧಿಕೃತವಾಗಿ ಪಟ್ಟಿ ನೀಡಲು ಖಡಕ್ ಸೂಚನೆ ನೀಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿರವರು, ತುಮಕೂರು ಜಿಲ್ಲೆಯ ಪ್ರತಿ ಗ್ರಾಮದ ಜಲಸಂಗ್ರಹಾಗಾರಗಳನ್ನು ಜಿಯೋಟ್ಯಾಗಿಂಗ್ ಸಹಿತಿ ಪಟ್ಟಿ ನೀಡಲು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇಂದಿನಿಂದ  ಜಲಸಂಗ್ರಹಾಗಾರಗಳ ಹುಡುಕಾಟಕ್ಕೆ ಅಧಿಕೃತವಾಗಿ, ಜಲಶಕ್ತಿ ಅಭಿಯಾನ ಮಾಡಲಾಗುವುದು. ಪ್ರತಿವಾರವೂ, ಎನ್.ಆರ್.ಡಿ.ಎಂ.ಎಸ್ ಕಚೇರಿಗೆ ಭೇಟಿ ನೀಡಿ, ಜಲಸಂಗ್ರಹಾಗಾರಗಳ ಡಿಜಿಟಲ್ ಲೆಕ್ಕ ಕೊಡಿ ಎಂಬ ಆಂದೋಲನವನ್ನು ನಡೆಸುವ ಮೂಲಕ, ಜಿಲ್ಲೆಯ ಜಲಸಂಗ್ರಹಾಗಾರಗಳ ಅಧಿಕೃತ ಪಟ್ಟಿಯನ್ನು ಪಡೆದು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ರವರಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ.

ಈ ಬಗ್ಗೆ ಪ್ರತಿ ವಾರವೂ ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಲ್.ಕೆ.ಅತೀಕ್ ರವರಿಗೆ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿರವರಿಗೆ ಡಿಜಿಟಲ್ ಮೂಲಕ ಮಾಹಿತಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ.

ತುಮಕೂರಿನ ಪ್ರಜಾಪ್ರಗತಿ ದಿನ ಪತ್ರಿಕೆ ಮತ್ತು ಪ್ರಗತಿ ಟೀವಿಯವರು ಸಹ ಜಲಸಂಗ್ರಹಾಗಾರಗಳ ಡಿಜಿಟಲ್ ಲೆಕ್ಕ ಕೊಡಿ ಅಂದೋಲನಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರು ಸಹ ಗ್ರಾಮ ಪಂಚಾಯತ್ ವಾರು ಮತ್ತು ನಗರ ಸ್ಥಳೀಯವಾರು ಸಂಸ್ಥೆಗಳ ಅಧಿಕೃತವಾಗಿ ಪಟ್ಟಿ ಪಡೆಯುವವರೆಗೂ ನಮ್ಮ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಜನಪರ ಹೋರಾಟಕ್ಕೆ ಸಾಥ್ ನೀಡಲಿದ್ದಾರೆ.

ಆಸಕ್ತರು ನಮ್ಮ ಜೊತೆ ಕೈಜೋಡಿಸ ಬಹುದು.