29th March 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ಮೂರನೇ ಹಂತದ ಹಸಿರು ತುಮಕೂರು  ಯೋಜನೆ ಮತ್ತು ಉಧ್ಯಾನವನಗಳ ದತ್ತು ಆಂದೋಲನ ಕಾರ್ಯಕ್ರಮದ ಸಭೆ ತುಮಕೂರಿನಲ್ಲಿ ಇಂದು (14.07.2022)  ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಿಕಾ ಪರಮೇಶ್ವರಿ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ 18 ಶಕ್ತಿಪೀಠಗಳ ಪೂಜೆಯಂದು ನಡೆದ ಸಮಾಲೋಚನೆಗೆ ಇಂದು ಅಧಿಕೃತವಾಗಿ ಮುದ್ರೆ ಬಿದ್ದಂತಾಯಿತು.

ಈ ಸಭೆಯ ವಿಶೇಷ ಯಾರೂ ಭಾಷಣ ಮಾಡುವ ಆಗಿರಲಿಲ್ಲ, ಗಿಡ ಹಾಕಿ ಬೆಳೆಸಿದ ತಮ್ಮ ಅನುಭವ ಹಾಗೂ ಸಲಹೆಗಳಿಗೆ ಮಾತ್ರ ಸೀಮೀತವಾಗಿತ್ತು, ಬಹುಷಃ ಶಾಸಕರು ಮತ್ತು ಸಂಸದರು ಬಿಟ್ಟರೇ ಯಾರು ಸಹ 3 ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಲಿಲ್ಲ.

ಬಹಳ ಜನ  ಸಾರ್ವಜನಿಕರು ಮತ್ತು ಅಧಿಕಾರಿಗಳು ಮಾತನಾಡಿ ತಮ್ಮ ಹಸಿರು ಬದ್ಧತೆ ಬಗ್ಗೆ ಬೆಳಕು ಚೆಲ್ಲಿದರು. ಗಿಡಹಾಕಲು ಯೋಜನೆ ರೂಪಿಸಲು ಶೇ 50 ರಷ್ಟು ಸಮಯ ಬೇಕಾದರೇ, ಗಿಡಗಳ ನಿರ್ವಹಣೆಗೆ ಶೇ 40 ರಷ್ಟು ಸಮಯದ ಅಗತ್ಯವಿದೆ. ಗಿಡ ಹಾಕುವ ಶೇ 10 ರ ಸಮಯ ಕೇವಲ ಫೋಟೋಗಳಿಗೆ ಸೀಮಿತವಾಗಿದೆ.

ಇದನ್ನು ಬಿಟ್ಟು ವೈಜ್ಞಾನಿಕವಾಗಿ ಮಾಸ್ಟರ್ ಪ್ಲಾನ್ ಮಾಡಿ, ಪಕ್ಕಾ ಡಿಜಿಟಲ್ ದಾಖಲೆಯೊಂದಿಗೆ, ನಿರ್ಧಿಷ್ಠವಾದ ಸ್ಥಳದಲ್ಲಿ, ನಿರ್ದಿಷ್ಠ ಸಂಘÀ ಸಂಸ್ಥೆಗಳು ಮಾತ್ರ, ನಿಗದಿ ಪಡಿಸಿದ ಜಾತಿಯ ಗಿಡಗಳನ್ನೇ ಹಾಕಬೇಕು ಎಂಬ ಒಮ್ಮತದ ನಿರ್ಧಾರ ದೇವಿಯ ಸಮ್ಮುಖದಲ್ಲಿ ನಡೆಯಿತು.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಹಾಗೂ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಮತ್ತು ಮೇಯರ್ ಶ್ರೀ ಕೃಷ್ಣಪ್ಪನವರ  ಸಮ್ಮುಖದಲ್ಲಿ  ‘ಹಸಿರು ತುಮಕೂರು- ತಂಪು ತುಮಕೂರು’   ಮಾಡುವÀ ಪ್ರತಿಜ್ಞೆ ಎಲ್ಲರ ಗಮನ ಸೆಳೆಯಿತು.

ನಗರದ 1,10,000 ಸ್ವತ್ತಿನ ಮಾಲೀಕರು ಸಹ, ಒಂದಲ್ಲ ಒಂದು ಜಾತಿಯ ಗಿಡಗಳನ್ನು ಹಾಕಲೇ ಬೇಕು, ಕಡೇ ಪಕ್ಷ ಒಂದು ತುಳಸಿ ಗಿಡದ ಕುಂಡವಾದರೂ ಮನೆ ಮುಂದೆ ಕಡ್ಡಾಯವಾಗಿ ಇರಲೇ ಬೇಕು, ಎಂಬ ಹಸಿರು ನಿರ್ಧಾರಕ್ಕೆ ಎಲ್ಲರ ಒಮ್ಮತದ ಬೆಂಬಲ ದೊರೆಯಿತು.

ಅರಣ್ಯ ಅಧಿಕಾರಿಯವರಾದ ಶ್ರೀ ಡಾ.ರಮೇಶ್ ರವರು ಸಿದ್ಧಪಡಿಸುವ ಮಾಸ್ಟರ್ ಪ್ಲಾನ್ ನತ್ತ ಎಲ್ಲರ ಚಿತ್ತ. ಶಾಸಕರ ಸೂಚನೆಯ ಮೇರೆಗೆ, ಅವರಿಗೆ ಸೂಕ್ತ ಡಿಜಿಟಲ್ ಡಾಟಾ ನೀಡುವ ಹೊಣೆಗಾರಿಕೆ, ಶಕ್ತಿಪೀಠ ಫೌಂಡೇಷನ್ ಸೇರಿದಂತೆ ನಗರದ ನೂರಾರು ಸಂಘಟನೆಗಳ ಹೆಗಲಿಗೆ ಬಿದ್ದಿದೆ.

ಭಾಗವಹಿಸಿದ ಎಲ್ಲರಿಗೂ ಹಸಿರು ಧನ್ಯವಾದಗಳು.