22nd December 2024
Share

TUMAKURU:SHAKTHIPEETA FOUNDATION

ಕಾರ್ನಟಕ ರಾಜ್ಯಕ್ಕೆ ಮುಕುಟ ಮಣಿಯಂತಿರುವ ಯುಧ್ಧ ದೇವಾಲಯ ಹೆಚ್..ಎಲ್ ಘಟPÀದ ಲೋಕಾರ್ಪಣೆಗೆ ಮತ್ತೆ ತುಮಕೂರಿಗೆ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಬಹುತೇಕ ಬರಲಿದ್ದಾರೆ ಎಂಬ ಅಂಶ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ರಕ್ಷಣಾ ಖಾತೆಯ ಉನ್ನತ ಮಟ್ಟದ ಅಧಿಕಾರಿಗಳು ಈಗಾಗಲೇ ಬಂದು ಹೆಚ್.ಎ.ಎಲ್ ಘಟಕ ಯಾವ ಹಂತದಲ್ಲಿದೆ ಎಂಬ ಬಗ್ಗೆ ಖುದ್ಧು ಪರಿಶೀಲನೆ ಮಾಡಿಹೋಗಿದ್ದಾರೆ ಎಂಬ ಅಂಶ ದೆಹಲಿಯ ಮೂಲದಿಂದ ತಿಳಿದು ಬಂದಿದೆ.

2022 ರ ಆಗಸ್ಟ್ 15 ರಂದು ಮೋದಿಯವರು ದೇಶದ 75 ಬೃಹತ್ ಯೋಜನೆಗಳನ್ನು ಲೋಕಾರ್ಪಣೆ/ಶಂಕುಸ್ಥಾಪನೆ ಮಾಡುವ ಗುರಿ ಹೊಂದಿದ್ದಾರೆ ಎಂಬ ಅಂಶವಿದ್ದರೂ, ಇದು ಅತ್ಯಂತ ಪ್ರತಿಷ್ಠಿತ ಯೋಜನೆಯಾಗಿರುವುದರಿಂದ ಮತ್ತೆ ಯಾವ ಕ್ಷಣದಲ್ಲಾದರೂ ಬರಬಹುದು.

ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೋಕಿನ ನಮ್ಮೂರಿನ ಪಕ್ಕದಲ್ಲಿರುವ ಬಿದರೆಹಳ್ಳಕಾವಲ್ ನಲ್ಲಿ ಲೋಕಾರ್ಪಣೆಗೊಳ್ಳಲಿರುವ ಹೆಚ್.ಎ.ಎಲ್ ಘಟಕದ ಪರಿಶೀಲನೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ಭೇಟಿ ನೀಡಲಾಗಿತ್ತು. ರಕ್ಷಣಾ ಇಲಾಖೆಗೆ ಒಳಪಟ್ಟಿರುವದರಿಂದ ಯಾವುದೇ ಅಂಶಗಳನ್ನು ಬರೆಯಬಾರದು.

1988 ರಲ್ಲಿ ನಾನು ಕಂಡ ಕನಸು 2022 ರಲ್ಲಿ ನನಸಾಗುವ ಕಾಲ ಬಂದಿದೆ, ವಧುವಿನಂತೆ ಹೆಚ್.ಎ.ಎಲ್ ಘಟಕ ಸಿದ್ಧವಾಗಿ ನಿಂತಿದೆ. 34 ವರ್ಷಗಳ ನಿರಂತರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ. ನನಗಿಂತ ನಾಲ್ಕು ವರ್ಷ ಮೊದಲೇ ಅಂದರೆ 1984 ರಲ್ಲಿ ಮೊದಲನೇ ಭಾರಿ ಸಂಸದರಾಗಿ ಆಯ್ಕೆಯಾದಗಲೇ ಇಲ್ಲಿಗೆ ಯಾವುದಾರೊಂದು ಬೃಹತ್ ಯೋಜನೆ ತರುವ ಕನಸು ಕಂಡಿದ್ದವರು ಜಿ.ಎಸ್.ಬಸವರಾಜ್ ರವರು.

ನಿಜಕ್ಕೂ ನಿನ್ನೆ(15.07.2022) ರಂದು ಘಟಕಕ್ಕೆ ಭೇಟಿ ನೀಡಿದಾಗ ಬಸವರಾಜ್ ರವರಿಗೆ, ಶ್ರೀ ಟಿ.ಆರ್.ರಘೋತ್ತಮರಾವ್ ರವರಿಗೆ, ಕೊನೆಯಲ್ಲಿ ಆವರಣ ಗೋಡೆಯ ಜಮೀನು ಸಮಸ್ಯೆ ಬಗೆಹರಿಸಿದ ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ಕುಮಾರ್ ರವರಿಗೆ, ಗುಬ್ಬಿ ತಹಶೀಲ್ಧಾರ್ ರವರಾದ ಶ್ರೀಮತಿ ಆರತಿಯವರಿಗೆ, ಆರಂಭದ ದಿನಗಳಲ್ಲಿ ಹೆಚ್.ಎ.ಎಲ್ ತಂಡ ತುಮಕೂರಿಗೆ ಬಂದಾಗ ಸಾಯಿಬಾಬಾ ದೇವಾಲಯದಲ್ಲಿ ಊಟದ ವವ್ಯಸ್ಥೆ ಮಾಡಿದ್ದ ಶ್ರೀ ಗುರುಸಿದ್ಧಪ್ಪನವರಿಗೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಜಿಲ್ಲೆಯವರೇ ಆದ ನೌಕರವರ್ಗಕ್ಕೆ ಆದ ತೃಪ್ತಿ ಅಷ್ಟಿಷ್ಟಲ್ಲ.

ಜನವರಿ 2016 ರ ಮೂರನೇ ತಾರೀಖು ಖುದ್ಧು ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದು ಇತಿಹಾಸ. 2018 ರಲ್ಲಿ, ಮೊದಲನೇ ಹೆಲಿಕ್ಯಾಪ್ಟರ್ ಅನ್ನು ಸಾಂಕೇತಿವಾಗಿ ಹಾರಾಟ ಮಾಡಲಾಗಿದೆ. ಈಗ ಎರಡನೇ ಹೆಲಿಕ್ಯಾಪ್ಟರ್ ಹಾಗೂ ಮೂರನೇ ಹೆಲಿಕ್ಯಾಪ್ಟರ್, ನಮ್ಮೂರಿನ ಘಟಕದಲ್ಲಿಯೇ ಸಿದ್ಧಗೊಳ್ಳುವುದನ್ನು ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂಬ ಆಸೆ ಚಿಗುರಿದೆ.

 ಸ್ಥಳೀಯ ರೈತರ ಮಕ್ಕಳು  ಇಲ್ಲಿ ನೌಕರಿ ಮಾಡಲಿದ್ದಾರೆ ಎಂದು ಮೋದಿಯವರು ಘೋಷಣೆ ಮಾಡಿದ್ದರು. ಈಗ ಹೆಚ್.ಎ.ಎಲ್ ನೌಕರಿ ಬಗ್ಗೆ ಯಾರಾದರೂ ಮಾತನಾಡಿದರೆ, ಫೋನ್ ಕಟ್ ಮಾಡುವ ಸ್ಥಿತಿ ಬಂದು ಒದಗಿಗೆ, ಆ ಸುದ್ಧಿ ಜೈಲಿಗೂ ಅಟ್ಟಬಹುದು ಎಂಬ ಭಯವಿದೆ. ಮಾತನಾಡದಿದ್ದರೆ ಸ್ಥಳೀಯರಿಗೆ ದ್ರೋಹ ಮಾಡಿದಂತಾಗುತ್ತಿದೆ. ಇದೊಂದು ಧರ್ಮ ಸಂಕಟವಾಗಿದೆ.

ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಜಿಲ್ಲೆಯವರೇ ಬಹುತೇಕ ನೌಕರರು, ಅಧಿಕಾರಿಗಳು ಇಲ್ಲಿ ಕಾರ್ಯನಿರ್ವಹಿಸಲು ಬಂದಿರುವುದು ಹರ್ಷತಂದಿದೆ.

ಸಂಸದರ ಭೇಟಿಯ ಸಮಯದಲ್ಲಿ ಗಮನಿಸಿದÀ/ಚರ್ಚಿಸಿದ ವಿಚಾರ ಬರೆಯುವುದು ಉಚಿತವಲ್ಲ. ಇನ್ನೂ ಯೋಜನೆಯ ವಿಸ್ತಾರಕ್ಕೆ ಜಮೀನು ನೀಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ್ದಾಗಿದೆ. ಈ ಕೆಲಸವನ್ನು ತ್ವರಿತವಾಗಿ ಮಾಡಲು ಸಂಸದರು ಪಣ ತೊಟ್ಟಿದ್ದಾರೆ.

ಸಂಸದರು ಮೋದಿಯವರು ಬಂದಾಗ ಸಮಾರಂಭ ನಡೆಯ ಬಹುದಾದ ಸ್ಥಳದ ಪರಿಶೀಲನೆಯನ್ನು ಖುದ್ಧು ಮಾಡಿದರು.