22nd December 2024
Share

TUMAKURU:SHAKTHIPEETA FOUNDATION

2010 ರಲ್ಲಿ ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಮಲ್ಲಿಕಾರ್ಜುಜನ್ ಖರ್ಗೆಯವರು, ತುಮಕೂರಿಗೆ 100 ಬೆಡ್ ಇಎಸ್‍ಐ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ನಿರಂತರವಾಗಿ ಇಎಸ್‍ಐ ಆಸ್ಪತ್ರೆ ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತಲೇ ಇದ್ದರು.

ಇಎಸ್‍ಐ ಸಮುದಾಯ ಭವನ ಮತ್ತು ಇಎಸ್‍ಐ ಅಸ್ಪತ್ರೆಗೆ ನಗರದಲ್ಲಿಯೇ ಜಮೀನು ನೀಡುವ ಇಂಗಿತವನ್ನು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹೊಂದಿದ್ದರೂ, ಕೊನೆಗೆ ತುಮಕೂರಿನಲ್ಲಿಯೇ  ತಹಶೀಲ್ಧಾರ್ ಆಗಿ ಹಾಗೂ ಕಾರ್ಮಿಕ ಸಚಿವರ ಬಳಿ ಕಾರ್ಯನಿರ್ವಹಿಸಿದ್ದ ಶ್ರೀ ಎಕೇಶ್ ಬಾಬುರವರು ಸಾರ್, ಎಲ್ಲೋ ಒಂದು ಕಡೆ ತುಮಕೂರು ಜಿಲ್ಲೆಗೆ ಮಂಜೂರು ಆಗಲಿ ಎಂದು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಶ್ರಮಿಸಿದ್ದು ಇತಿಹಾಸ.

ಮೋದಿಯವರು ನೀಡಿದ ಕೊಡುಗೆ ನೋಡಿದ ಶಾಸಕರಿಗೆ, ಸಂಸದರಿಗೆ ನಿರಂತರವಾಗಿ ಜ್ನಾಪನ ಪತ್ರ ಬರೆಯುತ್ತಿದ್ದ ಶ್ರೀ ಟಿ.ಆರ್.ರಘೋತ್ತಮ ರಾವ್ ರವರಿಗೆ ಆದ ಖುಷಿ ಅಷ್ಟಿಷ್ಟಲ್ಲ.