15th January 2025
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಹಾÀಗೂ ಸಾಮಾಜಿಕ ಅರಣ್ಯ ಇಲಾಖೆ ಹಸಿರು ತುಮಕೂರು ಮತ್ತು ಉದ್ಯಾನವನಗಳ ದತ್ತು ನೀಡಲು ‘ಮಾಸ್ಟರ್ ಪ್ಲಾನ್’ ಮಾಡಲು ಈಗಾಗಲೇ ಆರಂಭಿಸಿವೆ, ಈ ಕೆಳಕಂಡ ಅಂಶಗಳವಾರು ಕಾರ್ಯ ಆರಂಭ ಮಾಡಿವೆ.

  1. ಡಿಜಿಟಲ್ ಟ್ರಿ ಸರ್ವೇ ಆಪ್: ಖಾಸಗಿ ಅಥವಾ ಸರ್ಕಾರಿ ಯಾವುದೇ ಜಾಗದಲ್ಲಿರುವ ಗಿಡಗಳನ್ನು ಸ್ವತ್ತಿನ ಮಾಲೀಕರು ಗಿಡಗಳ ಫೋಟೋ ಸಹಿತ ಅಫ್ ಲೋಡ್ ಮಾಡುವುದು. ಇದರಿಂದ ಸ್ವತ್ತಿನ ಪಿಐಡಿ ನಂಬರ್ ನಲ್ಲಿ ಗಿಡಗಳ ಡಿಜಿಟಲ್ ಗಣತಿ ನೋಂದಾವಣೆ ಆಗಲಿದೆ.(ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಹಾÀಗೂ ಸಾಮಾಜಿಕ ಅರಣ್ಯ ಇಲಾಖೆ ಸಿದ್ಧಪಡಿಸುತ್ತಿದೆ)
  2. ಡಿಜಿಟಲ್ ಪ್ಲಾಂಟ್ ಡಿಮ್ಯಾಂಡ್ ಸವೇ ಆಪ್: ಖಾಸಗಿ ಅಥವಾ ಸರ್ಕಾರಿ ಯಾವುದೇ ಜಾಗದಲ್ಲಿ ಸ್ವತ್ತಿನ ಮಾಲೀಕರು ಯಾವ ಜಾತಿಯ ಗಿಡಗಳನ್ನು, ಹಾಕಲು ಆಸಕ್ತಿ ಇರುವವರೋ ಅದೇ ಜಾತಿಯ ಗಿಡಗಳ ಬುಕ್ಕಿಂಗ್ ಮಾಡುವುದು. ಇದರಿಂದ ಸ್ವತ್ತಿನ ಪಿಐಡಿ ನಂಬರ್‍ನಲ್ಲಿ  ಯಾವ ಜಾತಿಯ ಗಿಡಹಾಕಲಿದ್ದಾರೆ  ಎಂಬ ನೀಡ್ ಬೇಸ್ಡ್ ಡಿಜಿಟಲ್ ಗಣತಿ ನೋಂದಾವಣೆ ಆಗಲಿದೆ. (ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಹಾÀಗೂ ಸಾಮಾಜಿಕ ಅರಣ್ಯ ಇಲಾಖೆ ಸಿದ್ಧಪಡಿಸುತ್ತಿದೆ)
  3. ಶಾಲಾ, ಕಾಲೇಜುಗಳ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಮಾಧ್ಯಮಿಕ ಶಾಲೆಗಳು, ಪ್ರೌಢಶಾಲೆಗಳು,ಪದವಿ ಪೂರ್ವ ಕಾಲೇಜುಗಳು, ಪ್ರಥಮದರ್ಜೇ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಮೆಡಿಕಲ್ ಕಾಲೇಜುಗಳು, ತರಬೇತಿ ಸಂಸ್ಥೆಗಳುವಾರು ಜಿಐಎಸ್ ಲೋಕೇಷನ್ ಗರುತು ಮಾಡಲಿದ್ದಾರೆ. ಹಾಗೆಯೇ ಪ್ರತಿ ಶಾಲೆವಾರು ಗ್ರೀನ್ ನೋಡೆಲ್ ಆಫೀಸರ್ ಪಟ್ಟಿಯನ್ನು ಸಿದ್ಧಮಾಡುತ್ತಿದ್ದಾರೆ.(ಡಾ. ಸದಾಶಿವಯ್ಯನವರ ನೇತೃತ್ವದಲ್ಲಿ ಎಂಪ್ರೆಸ್ ಕಾಲೇಜು ಕುಟುಂಬ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ)
  4. ಉಧ್ಯಾನವನಗಳ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ಯಾನವನಗಳ ಜಿಐಎಸ್ ಲೇಯರ್ ವಾರು, ಪಟ್ಟಿ ಪರೀಶೀಲಿಸಿ, ಬಡಾವಾಣಿವಾರು, ವಾರ್ಡ್‍ವಾರು, ಲೇಔಟ್‍ವಾರು ಅಂತಿಮ ಪಟ್ಟಿ ಸಿದ್ಧಪಡಿಸಲಿದ್ದಾರೆ. (ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ಶ್ರೀ ರಕ್ಷಿತ್, ಟೂಡಾದ ಗ್ರೀನ್ ನೋಡೆಲ್ ಆಫೀಸರ್ ಶ್ರೀ ಅರಣ್ ಹೆಚ್.ಆರ್. ಮತ್ತು ತುಮಕೂರು ಸ್ಮಾರ್ಟ್ ಸಿಟಿಯ ಗ್ರೀನ್ ನೋಡೆಲ್ ಆಫೀಸರ್ ಶ್ರೀಮತಿ ಎಸ್.ಆರ್. ರಷ್ಮಿರವರು)
  5. ಕೆರೆಕಟ್ಟೆಗಳ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆ-ಕಟ್ಟೆಗಳ ಜಿಐಎಸ್ ಲೇಯರ್ ವಾರು, ಪಟ್ಟಿ ಪರೀಶೀಲಿಸಿ, ಬಡಾವಾಣಿವಾರು, ವಾರ್ಡ್‍ವಾರು, ಗ್ರಾಮವಾರು ಅಂತಿಮ ಪಟ್ಟಿ ಸಿದ್ಧಪಡಿಸಲಿದ್ದಾರೆ. (ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ಶ್ರೀ ರಕ್ಷಿತ್, ಟೂಡಾದ ಗ್ರೀನ್ ನೋಡೆಲ್ ಆಫೀಸರ್ ಶ್ರೀ ಅರಣ್ ಹೆಚ್.ಆರ್. ಮತ್ತು ತುಮಕೂರು ಸ್ಮಾರ್ಟ್ ಸಿಟಿಯ ಗ್ರೀನ್ ನೋಡೆಲ್ ಆಫೀಸರ್ ಶ್ರೀಮತಿ ಎಸ್.ಆರ್. ರಷ್ಮಿರವರು)
  6. ಉಧ್ಯಾನವನಗಳ ದತ್ತುದಾರರ ಸಂಘÀ ಸಂಸ್ಥೆಗಳ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಘÀ ಸಂಸ್ಥೆಗಳು ಯಾರು ಉಧ್ಯಾನವನಗಳ ದತ್ತು ತೆಗೆದುಕೊಳ್ಳಲು ಆಸಕ್ತಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಸಿದ್ಧಪಡಿಸುತ್ತಿದ್ದಾರೆ (ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ಶ್ರೀ ರಕ್ಷಿತ್‍ರವರು ಎಲ್ಲಾ 35 ವಾರ್ಡ್‍ಗಳ ಪಾಲಿಕೆ ಸದಸ್ಯರ ಸಹಭಾಗಿತ್ವದಲ್ಲಿ)
  7. ಗ್ರೀನ್ ನೋಡೆಲ್ ಆಫೀಸರ್ಸ್ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಇಲಾಖೆಗಳ ಗ್ರೀನ್ ನೋಡೆಲ್ ಆಫೀಸರ್ಸ್ ಜಿಐಎಸ್ ಲೇಯರ್ ಮತ್ತು ಮಾಹಿತಿಗಳ ಪಟ್ಟಿ ಸಿದ್ಧಪಡಿಸಲಿದ್ದಾರೆ. (ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ಶ್ರೀ ರಕ್ಷಿತ್‍ರವರು ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ)
  8. ಪತ್ತಿನ ಸಹಕಾರ ಸಂಘ ಮತ್ತು ಬ್ಯಾಂಕ್ಗಳ ಜಿಐಎಸ್ ಲೇಯರ್: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸಹಕಾರ ಪತ್ತಿನ ಸಹಕಾರ ಸಂಘ ಮತ್ತು ಬ್ಯಾಂಕ್ ಗಳ ಜಿಐಎಸ್ ಲೇಯರ್ ಅನ್ನು ಲೀಡ್ ಬ್ಯಾಂಕ್ ಮತ್ತು ಡಿಆರ್ ಸಿಎಸ್ ಇಲಾಖೆಗಳ ಗ್ರೀನ್ ನೋಡೆಲ್ ಆಫೀಸರ್ ಸಿದ್ಧಪಡಿಸಲಿದ್ದಾರೆ. (ತುಮಕೂರು ಮಹಾನಗರ ಪಾಲಿಕೆಯ ಗ್ರೀನ್ ನೋಡೆಲ್ ಆಫೀಸರ್ ಶ್ರೀ ರಕ್ಷಿತ್‍ರವರು ಇಲಾಖೆ ಅಧಿಕಾರಿಗಳ ಸಹಭಾಗಿತ್ವದಲ್ಲಿ)
  9. ಹಸಿರು ಕಚೇರಿ: ತುಮಕೂರು ಅಮಾನಿಕೆರೆಯಲ್ಲಿ ಗಿಡಗಳ ಸಂಗ್ರಹಣೆ ಮಾಡಲು, ನರ್ಸರಿ ಬೆಳೆಸಲು ಒಂದು ಎಕರೆ ಸ್ಥಳ ನಿಗದಿ ಮಾಡಲಾಗಿದೆ. ಪಕ್ಕದಲ್ಲಿಯೇ ಇದ್ದ ಒಂದು ಕೊಠಡಿಯನ್ನು ಹಸಿರು ಕಚೇರಿಯಾಗಿ ಮಾಡಲು ಹಸಿರು ಸುಣ್ಣ ಬಣ್ಣ ಮಾಡುವ ಮೂಲಕ ಹಸಿರು ಕಚೇರಿಗೆ ಚಾಲನೆ ನೀಡಿದೆ (ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ)

 ಆಸಕ್ತರು ಯಾರು ಬೇಕಾದರೂ ಜೊತೆ ಸೇರಬಹುದಾಗಿದೆ. ಈ ಬಗ್ಗೆ ಒಂದೆರಡು ದಿವಸದಲ್ಲಿ ಘನತ್ಯಾಜ್ಯ ವಸ್ತುಗಳ ಆಟೋದಲ್ಲಿ ಪ್ರಚಾರ, ಮನೆ ಮನೆಗೆ ಕರಪತ್ರ ಹಂಚುವ ಕೆಲ ಆರಂಭವಾಗಲಿದೆ. ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪ್ರತಿ ದಿವಸ ಪಾಲೋ ಅಫ್ ಮಾಡಲು ಆರಂಭಿಸಿದೆ.

 ಕಂದಾಯ, ನಗರಾಭಿವೃದ್ದಿ, ಅರಣ್ಯ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಎಂಪ್ರೆಸ್ ಕಾಲೇಜು ಆವರಣದ ಸಭಾಂಗಣದಲ್ಲಿ ಗ್ರೀನ್ ನೋಡೆಲ್ ಆಫೀಸರ್ ಸಮಾವೇಶ ಶೀಘ್ರದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ.