18th April 2024
Share

TUMAKURU:SHAKTHIPEETA FOUNDATION

ಮೈಸೂರು ಚಾಮುಂಡೇಶ್ವರಿ ಶಕ್ತಿಪೀಠನಾ ಅಥವಾ ಸಿದ್ಧಿಪೀಠನಾ ಎಂಬ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಆಗಮಿಕರಾದ ಶ್ರೀ ಡಾ.ಎನ್.ಶಶಿಶೇಖರ್ ದೀಕ್ಷಿತ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಕೆಲವು ಕಡೆ ಬರವಣಿಗೆÉಗಳಲ್ಲಿ ಮೈಸೂರು ಶ್ರೀ ಚಾಮುಡೇಶ್ವರಿ ದೇವಾಲಯ ಒಂದು ಶಕ್ತಿಪೀಠ ಇಲ್ಲಿ ಸತಿಯ ಕೂದಲುಗಳು ಬಿದ್ದಿವೆ ಎಂಬುದಾಗಿ ದಾಖಲಿಸಿದ್ದಾರೆ. ಇನ್ನೂ ಕೆಲವರು ಮಹಿಷಾಸುರನನ್ನು ಕೊಂದಿದ್ದರಿಂದ ಮೈಸೂರು ಚಾಮುಂಡೇಶ್ವರಿ ಪ್ರಸಿದ್ದಿಯಾಗಿದೆ ಎಂದು ದಾಖಲಿಸಿದ್ದಾರೆ.

ಸುಮಾರು 8 ತಲೆ ಮಾರುಗಳಿಂದ ಈ ಕುಟುಂಬ, ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 24 ದೇವಾಲಯಗಳು ಸಹ ಚಾಮುಂಡೇಶ್ವರಿ ದೇವಿಯ ಆಡಳಿತ ಮಂಡಳಿಗೆ ಬರುತ್ತವೆಯಂತೆ. ಇದರಲ್ಲಿ ಯಾವುದು ಸತ್ಯ ಚರ್ಚೆ ಆರಂಭವಾಗಿದೆ. ಕಾದು ನೋಡೋಣ ಯಾವ ಹುತ್ತದಲ್ಲಿ ಯಾವ ಹಾವು ಇದೆ.

ದಿನಾಂಕ:18.07.2022 ರಂದು  ದೇವಿ ದರ್ಶನ ಮಾಡಿದ ನಂತರ ಸುಧೀರ್ಘ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಶಕ್ತಿಪೀಠ ಫೌÀಂಡೇಷನ್ ಸಿಇಓ ಕೆ.ಆರ್.ಸೋಹನ್,  ಶ್ರೀಮತಿ ಬಿ.ಸುಜಾತಕುಮಾರಿ ಮತ್ತು ಆರ್ಥಿಕ ತಜ್ಞರಾದ ಶ್ರೀ ಬಸವರಾಜ್ ರವರು ನನ್ನ ಜೊತೆಯಲ್ಲಿ ಇದ್ದರು.

ದೀಕ್ಷಿತ್ ರವರು ಮುಕ್ತ ಮನಸ್ಸಿನಿಂದ ನಾನು ಕೇಳಿದ ಯಾವುದೇ ಪ್ರಶ್ನೆಗೆ ಬೇಸರ ಮಾಡಿಕೊಳ್ಳದೆ ಒಂದು ಗಂಟೆಗಳ ಕಾಲ ಮಾತನಾಡಿದ್ದನ್ನು ವಿಡಿಯೋ ಚಿತ್ರಿಕರಣ ಮಾಡಿಕೊಳ್ಳಲಾಗಿದೆ.

ವಿಶ್ವದಲ್ಲಿ ಇವೆ ಎನ್ನಲಾದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹ ಮಾತ್ತು ಸಂಶೋಧನೆ ಮಾಡುತ್ತಿರುವ ಶಕ್ತಿಪೀಠ ಫೌಂಡೇಷನ್ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.