TUMAKURU:SHAKTHIPEETA FOUNDATION
ತುಮಕೂರು ಸ್ಮಾರ್ಟ್ ಸಿಟಿಯಾಗಿದೆ. ಬಹಳಷ್ಟು ಕೆಲ¸ಗಳು ಆಗುತ್ತಿವೆ. ಆದರೇ ತುಮಕೂರಿನ ಜಿಲ್ಲಾಧಿಕಾರಿ ಕಟ್ಟಡ/ಮಿನಿವಿಧಾನ ಸೌಧ ಸೋರುತ್ತಿದೆ. ಯಾವ ದಾಖಲೆಗಳು ಯಾವಾಗ ನೀರಿನಿಂದ ಹಾಳು ಆಗುತ್ತಿವೆ ಎಂಬ ಭಯದ ವಾತಾವಾರಣ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಲೆನೋವಾಗಿದೆ.
ಜಿಲ್ಲಾಧಿಕಾರಿ ಕಟ್ಟಡದ ಸುತ್ತ ಹಳೇ ಕಟ್ಟಡಗಳ ಸುಮಾರು 7 ಎಕರೆ ಜಮೀನು ಇದೆಯಂತೆ. ಈ ಜಮೀನನಲ್ಲಿ ಹೊಸದಾಗಿ ಜಿಲ್ಲಾಧಿಕಾರಿ ಕಚೇರಿ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಬಗ್ಗೆ ಸಮಾಲೋಚನೆ ನಡೆಯಿತು.
ಜೊತೆಗೆ ನಗರದ ಒಂದನೇ ವಾರ್ಡ್‍ನ ಮರಳೇನಹಳ್ಳಿಯಲ್ಲಿ ಇದೆ ಎನ್ನಲಾದ ಸರ್ಕಾರಿ ಭೂಮಿಯಲ್ಲೂ ವಿವಿಧ ಸರ್ಕಾರಿ ಕಚೇರಿಗಳ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಬಗ್ಗೆಯೂ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಸಮಾಲೋಚನೆ ನಡೆಸಿದರು.
ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದರು. ತಹಶೀಲ್ಧಾರ್ ಶ್ರೀ ಮೋಹನ್ ರವರು, ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್ ರವರು ಈ ಸಂದರ್ಭದಲ್ಲಿ ಹಾಜರಿದ್ದು ಪ್ರಸ್ತಾವನೆ ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ಸೂಚಿಸಿದರು.