12th April 2024
Share

TUMAKURU:SHAKTHIPEETA FOUNDATION 

ಕೇಂದ್ರ ಸರ್ಕಾರ ತುಮಕೂರು ನಗರಕ್ಕೆ ಮಂಜೂರು ಮಾಡಿರುವ ಇ.ಎಸ್.ಐ ಆಸ್ಪತ್ರೆಗೆ 5 ಎಕರೆ, ತುಮಕೂರಿನ ಸರ್ಕಾರಿ ಐ.ಟಿ.ಐ ಕಾಲೇಜಿಗೆ 5 ಎಕರೆ ಮತ್ತು ಮಾನ್ಯ ಮುಖ್ಯ ಮಂತ್ರಿಯವರು  ತುಮಕೂರು ನಗರಕ್ಕೆ ಜಮೀನು ನೀಡಿದರೆ ಜಯದೇವ ಹೃದಯಾಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರ ಹಿನ್ನಲೆಯಲ್ಲಿ ಆಸ್ಪತ್ರೆಗೆ 5 ಎಕರೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿ  ಶ್ರೀ ವೈ.ಎಸ್.ಪಾಟೀಲ್ ರವರೊಂದಿಗೆ  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಸಮಾಲೋಚನೆ ನಡೆಸಿದರು.  

ಮೊಬೈಲ್ ಮೂಲಕ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶೀಘ್ರವಾಗಿ ಜಮೀನು ಮಂಜೂರು ಮಾಡಿ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದರು.

ತಹಶೀಲ್ಧಾರ್ ಶ್ರೀ ಮೋಹನ್ ರವರು, ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್ ರವರು ಈ ಸಂದರ್ಭದಲ್ಲಿ ಹಾಜರಿದ್ದು ಒಂದು ವಾರದೊಳಗೆ ಜಮೀನು ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ಸೂಚಿಸಿದರು.