16th September 2024
Share

TUMAKURU:SHAKTHIPEETA FOUNDATION

ದಿನಾಂಕ:25.07.2022 ರಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಮತಿ ರೇಣುಕರವರ ಅಧ್ಯಕ್ಷತೆಯಲ್ಲಿ ನಡೆದ ಉಧ್ಯಾನವನಗಳ ದತ್ತು ಆಂದೋಲನ ಮತ್ತು ಹಸಿರು ತುಮಕೂರು ಯೋಜನೆಯ ಸಭೆಯ ನಡವಳಿಕೆಗಳು.

1.ದಿನಾಂಕ:14.07.2022 ರಂದು ತುಮಕೂರು ನಗರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡವಳಿಕೆಗಳ ಬಗ್ಗೆ.

ದಿನಾಂಕ:14.07.2022 ರಂದು ತುಮಕೂರು ನಗರದ ಶಾಸಕರ ಅಧ್ಯಕ್ಷತೆಯಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ನಡೆದ ಸಭೆ ನಡವಳಿಕೆಗಳ ನಿರ್ಣಯದ ಪ್ರತಿಯನ್ನು ಶಾಸಕರ ಕಚೇರಿಯಿಂದ ಪಡೆಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

2.ಇದೂವರೆಗೂ ನಡೆದಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಸಭೆ ನಡವಳಿಕೆಗಳ ಬಗ್ಗೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ವಿಶೇಷ ಆಸಕ್ತಿಯಿಂದ ಇದೂವರೆಗೂ ನಡೆದಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಸಭೆ ನಡೆವÀಳಿಕೆಗಳ ಪಾಲಾನಾವರದಿಯನ್ನು ಒಂದು ವಾರದೊಳಗೆ ಪರಿಶೀಲಿಸಿ ಸೂಕ್ತ ಅಭಿಪ್ರಾಯಗಳೊಂದಿಗೆ ಸಿದ್ಧಪಡಿಸಲು   ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

3.ವಿವಿಧ ಸಂಘ ಸಂಸ್ಥೆಗಳು ಸಲ್ಲಿಸಿರುವ ಪ್ರಸ್ತಾವನೆಗಳ ಬಗ್ಗೆ.

ಹಸಿರು ತುಮಕೂರು ಯೋಜನೆ ಮತ್ತು ಉಧ್ಯಾನವನಗಳ ದತ್ತು ಪಡೆಯುವ ಬಗ್ಗೆ ವಿವಿಧ ಸಂಘ ಸಂಸ್ಥೆಗಳಿಂದ ಬಂದಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಅಭಿಪ್ರಾಯಗಳೊಂದಿಗೆ ವರದಿ ಸಿದ್ಧಪಡಿಸಲು   ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

4.ವಿವಿಧ ಜಿಐಎಸ್ ಲೇಯರ್ ಬಗ್ಗೆ

ಹಸಿರು ತುಮಕೂರು ಯೋಜನೆಯ ಯಶಸ್ವಿಗೆ ಅಗತ್ಯವಿರುವ ಕೆಳಕಂಡ ಜಿಐಎಸ್ ಲೇಯರ್

ಮಾಹಿತಿ ಸಂಗ್ರಹಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

  1. ವಾರ್ಡ್ ವ್ಯಾಪ್ತಿ ಜಿಐಎಸ್ ಲೇಯರ್
  2. ಬಡಾವಣೆ ವ್ಯಾಪ್ತಿ ಜಿಐಎಸ್ ಲೇಯರ್
  3. ಬೂತ್ ವ್ಯಾಪ್ತಿ ಜಿಐಎಸ್ ಲೇಯರ್
  4. ಘನತ್ಯಾಜ್ಯ ವಸ್ತು ಅಟೋ ಪ್ರಯಾಣ ಮಾಡುವ ವ್ಯಾಪ್ತಿ ಜಿಐಎಸ್ ಲೇಯರ್
  5. ಕುಡಿಯುವ ನೀರು ನೋಡಿಕೊಳ್ಳುವ ವಾಲ್ವ್‍ವಾರು ನೌಕರರ ವ್ಯಾಪ್ತಿ ಜಿಐಎಸ್ ಲೇಯರ್
  6. ಪೌರಕಾರ್ಮಿಕರ ವ್ಯಾಪ್ತಿ ಜಿಐಎಸ್ ಲೇಯರ್
  7. ಪೋಲೀಸ್ ಬೀಟ್ ವ್ಯಾಪ್ತಿ ಜಿಐಎಸ್ ಲೇಯರ್
  8. ಉದ್ಯಾನವನಗಳ ಜಿಐಎಸ್ ಲೇಯರ್
  9. ತುಮಕೂರು ನಗರದಲ್ಲಿರುವ ಸ್ವತ್ತಿನ ಮಾಲೀಕರವಾರು ಜಿಐಎಸ್ ಲೇಯರ್
  10. ಅಂಗನವಾಡಿಗಳ ಜಿಐಎಸ್ ಲೇಯರ್
  11. ನರ್ಸರಿಗಳ ಜಿಐಎಸ್ ಲೇಯರ್
  12. ಪ್ರಾಥಮಿಕ ಶಾಲೆಗಳ ಜಿಐಎಸ್ ಲೇಯರ್
  13. ಪಿಯುಸಿ ಕಾಲೇಜುಗಳ ಜಿಐಎಸ್ ಲೇಯರ್
  14. ಪ್ರಥಮ ದರ್ಜೆ ಕಾಲೇಜುಗಳ ಜಿಐಎಸ್ ಲೇಯರ್
  15. ಇಂಜಿನಿಯರ್ ಕಾಲೇಜುಗಳ ಜಿಐಎಸ್ ಲೇಯರ್
  16. ಮೆಡಿಕಲ್ ಕಾಲೇಜುಗಳ ಜಿಐಎಸ್ ಲೇಯರ್
  17. ವೃತ್ತಿಪರ ತರಬೇತಿ ಸಂಸ್ಥೆಗಳ  ಜಿಐಎಸ್ ಲೇಯರ್
  18. ನಾಗರೀಕ ಸಂಸ್ಥೆಗಳ ಜಿಐಎಸ್ ಲೇಯರ್
  19. ಸಂಘ ಸಂಸ್ಥೆಗಳ ಜಿಐಎಸ್ ಲೇಯರ್
  20. ದೇವಾಲಗಳ ಜಿಐಎಸ್ ಲೇಯರ್
  21. ಚರ್ಚ್ ಗಳ ಜಿಐಎಸ್ ಲೇಯರ್
  22. ಮಸೀದಿಗಳ ಜಿಐಎಸ್ ಲೇಯರ್
  23. ದಗಾರ್Àಗಳ ಜಿಐಎಸ್ ಲೇಯರ್
  24. ಪತ್ತಿನ ಸಹಕಾರ ಸಂಘಗಳ ಜಿಐಎಸ್ ಲೇಯರ್
  25. ವಾಣಿಜ್ಯ ಬ್ಯಾಂಕ್‍ಗಳ ಜಿಐಎಸ್ ಲೇಯರ್
  26. ಹೇಮಾವತಿ ಕಾಲುವೆ ಜಿಐಎಸ್ ಲೇಯರ್
  27. ಸ್ಮಶಾನಗಳ ಜಿಐಎಸ್ ಲೇಯರ್
  28. ಬಯಲು ಪ್ರದೇಶಗಳ ಜಿಐಎಸ್ ಲೇಯರ್
  29. ಆಟದ ಮೈದಾನಗಳ ಜಿಐಎಸ್ ಲೇಯರ್
  30. ಕೈಗಾರಿಕಾ ವಸಾಹತುಗಳ ಜಿಐಎಸ್ ಲೇಯರ್
  31. ಮುಖ್ಯ ರಸ್ತೆ, ಅಡ್ಡರಸ್ತೆ, ಕ್ರಾಸ್ ರಸ್ತೆ, ಲಿಂಕ್ ರಸ್ತೆ ವಾರು ಜಿಐಎಸ್ ಲೇಯರ್
  32. ಸರ್ಕಾರಿ ಆಸ್ತಿಗಳ ಜಿಐಎಸ್ ಲೇಯರ್

ಈಗಾಗಲೇ ಸಿದ್ಧಪಡಿಸಿರುವ ಜಿಐಎಸ್ ಲೇಯರ್ ಮಾಹಿತಿಗಳನ್ನು ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆಯಲು ಸೂಚಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

5.ಸ್ಪೆಕ್ಟ್ರಾ ಅಸೋಶಿಯೇಷನ್ ರವರಿಂದ ಬೂತ್ ವ್ಯಾಪ್ತಿ ನಕ್ಷೆ ಪಡೆಯುವ ಬಗ್ಗೆ

ಈಗಾಗಲೇ ವಾರ್ಡ್ ಮತ್ತು ಬೂತ್ ವ್ಯಾಪ್ತಿ ಸಿದ್ಧಪಡಿಸಲು ಸಲಹಾಗಗರಿಗೆ ನೀಡಿರುವದರಿಂದ,  ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ರವರಿಂದ ಬೂತ್ ವ್ಯಾಪ್ತಿ ನಕ್ಷೆ ಪಡೆಯಲುÀ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

6.ಹಸಿರು ವ್ಯಾಪ್ತಿ ಜಿಐಎಸ್ ಲೇಯರ್

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 939 ಉದ್ಯಾನವನಗಳು ಮತ್ತು ಇತರೆ ಪ್ರದೇಶಗಳ ನಿರ್ದಿಷ್ಠ ವ್ಯಾಪ್ತಿಯ ಜಿಐಎಸ್ ಲೇಯರ್ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ:ತುಮಕೂರು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಐಟಿ ಸೆಲ್)

7.ಗ್ರೀನ್ ನೋಡೆಲ್ ಆಫೀಸರ್ ರವರಿಂದ ಮಾಹಿತಿ ಸಂಗ್ರಹಣೆ

ಶಾಸಕರ ಸಲಹೆ ಮೇರೆಗೆ ಈಗಾಗಲೇ ಈ ಕೆಳಕಂಡ ಸಂಸ್ಥೆಗಳಲ್ಲಿ ನೇಮಕ ಮಾಡಿರುವ ಗ್ರೀನ್ ನೋಡೆಲ್ ಆಫೀಸರ್ ರವರಿಂದ ಅವರು ಸಿದ್ಧಪಡಿಸಿರುವ ಮತ್ತು ಅಗತ್ಯವಿರುವ 35 ವಾರ್ಡ್‍ವಾರು ಮಾಹಿತಿ ಸಂಗ್ರಹಣೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

  1. ತುಮಕೂರು ಸ್ಮಾರ್ಟ್ ಸಿಟಿ,
  2. ತುಮಕೂರು ಮಹಾನಗರ ಪಾಲಿಕೆ
  3. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ
  4. ಎಂಪ್ರೆಸ್ ಕಾಲೇಜು

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

8.ಜಿಲ್ಲಾಧಿಕಾರಿಗಳ ಮೂಲಕ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆಸುವ ಬಗ್ಗೆ

ಎಲ್ಲಾ ಮಾಹಿತಿಗಳನ್ನು ಕ್ರೋಡಿಕರಿಸಿದ ನಂತರ ಜಿಲ್ಲಾಧಿಕಾರಿಗಳ ಮೂಲಕ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ:ಆಯುಕ್ತರು)

9.ಕಾಲ ಮಿತಿ ನಿಗದಿ

ಒಂದು ವಾರದೊಳಗೆ ಎಲ್ಲಾ ಲಿಖಿತ ಮಾಹಿತಿ ಕ್ರೋಡೀಕರಿಸಲು ಕಾಲಮಿತಿ ನಿಗದಿ ಗೊಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ:ಆಯುಕ್ತರು)

10.ಪ್ರಚಾರ ಆಂದೋಲನ

ಘನತ್ಯಾಜ್ಯ ವಸ್ತು ವಾಹನಗಳ ಮೂಲಕ ಪ್ರಚಾರ ಮತ್ತು ಮನೆ ಮನೆಗೆ ಕರಪತ್ರ ವಿತರಣೆಯನ್ನು ಮಾಡಲು ಹಾಗೂ ಮಾಧ್ಯಮಗಳ ಮೂಲಕ ಪರಿಸರ ಆಸಕ್ತರಿಗೆ ಬಹಿರಂಗ ಮನವಿ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್) 

11.ಹಸಿರು ಸಮನ್ವಯತೆ

ಶಾಸಕರು ಸಭೆಯಲ್ಲಿ ಸೂಚಿಸಿರುವಂತೆ ಅಗತ್ಯವಿzಲ್ಲಿ ಕಾಲಕಾಲಕ್ಕೆ ಹಸಿರು ಸಮನ್ವಯತೆಗಾಗಿ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಲಹೆ ಪಡೆಯಲು ಮತ್ತು ದಿನನಿತ್ಯದ ಚಟುವಟಿಕೆಗಳ ಮಾಹಿತಿ ಹಂಚಿಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

(ಕ್ರಮ: ಪಾಲಿಕೆ ಗ್ರೀನ್ ನೋಡೆಲ್ ಆಫೀಸರ್)