18th April 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್ ರವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ನಗರವನ್ನು ಹಸಿರು ತುಮಕೂರು ಹಾಗೂ ತಂಪು ತುಮಕೂರು ಮಾಡಲು ಪಣತೊಟ್ಟಿದ್ದಾರೆ.

ಈ ಯೋಜನೆಯ ಅನುಷ್ಠಾನಕ್ಕೆ ಹಸಿರುÀ ತುಮಕೂರು ವಿಷನ್ ಗ್ರೂಪ್ ಅನ್ನು ಶಾಸಕರ ಸಲಹೆ ಮೇರೆಗೆ ರಚಿಸಲಾಗಿದೆ. ಅವರ ಉದ್ದೇಶ ನಗರದಲ್ಲಿ ಹಸಿರು ತುಮಕೂರು ಯೋಜನೆಗೆ ಆಸಕ್ತಿ ಇರುವ ಯಾರನ್ನು ಬಿಡದಂತೆ, ಎಲ್ಲರ ಸಹಕಾರದೊಂದಿಗೆ ಯೋಜನೆ ರೂಪಿಸಿಬೇಕಿದೆ.

2000 ನೇ ಇಸವಿಯಲ್ಲಿ ಒಂದನೇ ಹಂತದ ಹಸಿರು ತುಮಕೂರು ಮತ್ತು 2013 ರಲ್ಲಿ ಎರಡನೇ ಹಂತದ ಹಸಿರು ತುಮಕೂರು ಯೋಜನೆ ಜಾರಿಗೊಳಿಸುವಾಗ ನಮ್ಮನ್ನು ಕರೆಯಿಲಿಲ್ಲ ಎಂಬ ಅಪವಾದ ನನ್ನ ಮೇಲೆ ಬಂದಿದ್ದು ಇತಿಹಾಸ. ಈಗ 2022 ನೇ ಇಸವಿಯಲ್ಲಿ ಮೂರನೇ ಹಂತದ ಹಸಿರು ತುಮಕೂರು ಯೋಜನೆಗೆ ಯಾರನ್ನು ಸೇರ್ಪಡೆ ಮಾಡಿಕೊಳ್ಳ ಬೇಕು ಎಂಬ ಬಗ್ಗೆ ಸ್ವತಃ ಶಾಸಕರ ಸಲಹೆಗೆ ಬಿಡುವುದು ಸೂಕ್ತವಾಗಿದೆ.

ಅವರು ಸೂಚಿಸುವ ಪ್ರತಿಯೊಬ್ಬರನ್ನು ಈ ವಿಷನ್ ಗ್ರೂಪ್ ಗೆ ಸೇರ್ಪಡೆ ಮಾಡಲಾಗುವುದು. ಜೊತೆಗೆ ತಾವುಗಳು ಸಹ ಇನ್ನೂ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದರೆ, ಅವರನ್ನು ಸೇರ್ಪಡೆ ಮಾಡಲಾಗುವುದು.

ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಯೋಜನೆಯ ರೂವಾರಿಯಾಗಿರುತ್ತಾರೆ. ಅವರು ಸೂಚಿಸುವ ಹಾಗೂ ಅಗತ್ಯವಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರ್ಪಡೆ ಮಾಡಿ ಕೊಳ್ಳುವುದು ಸೂಕ್ತವಾಗಿದೆ.

ಜೊತೆಗೆ ಪೂಜ್ಯ ಮೇಯರ್ ಶ್ರೀ ಕೃಷ್ಣಪ್ಪನವರು ರವರು ಮತ್ತು ಟೂಡಾ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು ಸಹ ಸಲಹೆ ನೀಡುವುದು ಸೂಕ್ತವಾಗಿದೆ.

ಈ ಬಗ್ಗೆ ದಿನಾಂಕ:01.08.2022 ನೇ ಸೋಮವಾರ ಸಂಜೆ 4 ಗಂಟೆಗೆ ಅರಣ್ಯ ಇಲಾಖೆಯ ಡಿಎಫ್ ಓ ರವರಾದ ಶ್ರೀ ಡಾ.ರಮೇಶ್ ರವರ ಅಧ್ಯಕ್ಷತೆಯಲ್ಲಿ ರಾಮಕೃಷ್ಣ ನಗರದಲ್ಲಿರುವ ಅವರ ಕಚೇರಿಯಲ್ಲಿ ಪೂರ್ವ ಭಾವಿ ಸಭೆ ನಡೆಯಲಿದೆ.

ತಾವೂಗಳು ಭಾಗವಹಿಸಲು ಈ ಮೂಲಕ ಮನವಿ ಮಾಡಲಾಗಿದೆ.

ಈ ಸಭೆಯಲ್ಲಿ ದಿನಾಂಕ:14.07.2022 ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡವಳಿಕೆಗಳ ಪ್ರತಿಯೊಂದು ಅಂಶದ ಬಗ್ಗೆ ಸಮಾಲೋಚನೆ ಮಾಡಲಾಗುವುದು. ಲಿಖಿತ ರೂಪದಲ್ಲಿ ತಾವೂಗಳು ಸಲಹೆ ನೀಡಲು ಮನವಿ ಮಾಡಲಾಗಿದೆ.

ಆಸಕ್ತರು ಇಷ್ಟ ಪಟ್ಟರೆ ತಮಗೂ ಸಭೆ ನಡವಳಿಕೆಯನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಲಾಗುವುದು.

ದಿನಾಂಕ:29.07.2022 ರಂದು ಬೆಳಿಗ್ಗೆ 8.30 ರಲ್ಲಿ ಅರಣ್ಯ ಇಲಾಖೆಯಲ್ಲಿ ಸಮಾಲೋಚನೆ ನಡೆಸಲಾಯಿತು.