TUMAKURU:SHAKTHIPEETA FOUNDATION
ನಿನ್ನೆ(08.03.2022) ತುಮಕೂರಿನ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿಗಳಾದ ಶ್ರೀ ಡಾ.ರಮೇಶ್ ರವರ ಅಧ್ಯಕ್ಷತೆಯಲ್ಲಿ ಹಸಿರು ತುಮಕೂರು ಚಿಂತನಾ ಸಭೆ ನಡೆಯಿತು.
ಈ ಸಭೆಯ ಪ್ರಮುಖ ಉದ್ದೇಶ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತೀಗಣೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಕೆಗಳ ವಿಷಯವಾರು ಚರ್ಚೆ ಮಾಡಿ, ಇನ್ನೂ ಯಾವುದಾದರೂ ಹೊಸವಿಚಾರಗಳ ಇದ್ದಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ಹಾಗೂ ಅನಗತ್ಯ ವಿಚಾರಗಳಿದ್ದಲ್ಲಿ ಅವುಗಳ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿತ್ತು.
ಸಭೆಗೆ ಬಂದವರು ಬಹುತೇಕ ಶಾಸಕರ ಸಭೆ ನಡವಳಿಕೆಯನ್ನು ಓದೇ ಇರಲಿಲ್ಲ. ಕಡೇ ಪಕ್ಷ ಮೊಬೈಲ್‍ನಲ್ಲಿ ಇದ್ದ ಡಿಜಿಟಲ್ ಕಾಪಿಯನ್ನದಾರೂ ಓದುವ ಮನಸ್ಸು ಮಾಡಲಿಲ್ಲ.
ಮಾತನಾಡುವವರು ಭಾಷಣ ಮಾಡುವ ರೀತಿ ಹೇಳುತ್ತಿದ್ದರು. ನನಗೆ ಇವರೆಲ್ಲಾ ಹೀಗೇಕೆ ಮಾಡುತ್ತಿದ್ದಾರೆ. ಪಾಯಿಂಟ್‍ವಾರು ಚರ್ಚೆ ಮಾಡಿದರೆ ಒಳ್ಳೆಯದಲ್ಲವಾ? ಎಂದು ಮನಸ್ಸು ಹೇಳುತ್ತಿತ್ತು.
ಅವರು ಮಾತನಾಡುವಾಗ ನಾನು ಇದನ್ನು ಹೇಳಿದಾಗ, ಅವರಿಗೆ ನಮ್ಮ ಮಾತನ್ನು ಕೇಳುತ್ತಿಲ್ಲವಲ್ಲ ಎಂಬ ಅಭಿಪ್ರಾಯ ಅವರಿಗಿತ್ತು.
ನನಗೆ ಇವೆಲ್ಲಾ ಓದಿ ಏನಾದರೂ ಹೊಸ ಐಡಿಯಾ ಕೊಟ್ಟರೆ ಎಷ್ಟು ಚೆನ್ನಾ ಎಂದು ನನ್ನ ಮನಸ್ಸು ತುಡಿಯಿತಿತ್ತು.
ಡಿಡಿಪಿಐ ಕಚೇರಿಯಿಂದ ಬಂದ ಶ್ರೀ ರಂಗಧಾಮಪ್ಪನವರು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಅಲ್ಲಿಯೇ ಬರವಣಿಗೆ ಆರಂಭಿಸಿದರು. ನಾಳೆ ಟೈಪ್ ಮಾಡಿಸಿ ಕೊಡುತ್ತೇನೆ ಎಂದು ಹೇಳಿದ್ದು ನನಗೆ ಖುಷಿ ನೀಡಿತ್ತು.
ನನಗೆ ಹಸಿರು ತುಮಕೂರು ಮೌಲ್ಯ ಮಾಪನ ಮಾಡಲು ಹೊಸ ಅವಿಷ್ಕಾರಗಳ ವಿಷಯಗಳ ಹಸಿವು ಇದೆ.
ಕೊನೆಗೆ ಬಹಳಷ್ಟು ಉತ್ತಮ ಚರ್ಚೆ ನಡೆಯಿತು. ಪಿಪಿಪಿ ಮಾದರಿ ಮತ್ತು ಟೆಂಡರ್ ಪ್ರಕ್ರಿಯೇ ಮಾಸ್ಟರ್ ಪ್ಲಾನ್ ಮಾಡಲು ಅರಣ್ಯ ಇಲಾಖೆಗೆ ಸಂಪೂರ್ಣ ಸಹಮತ ವ್ಯಕ್ತ ಪಡಿಸಿದರು. ವಿವಿಧ ಇಲಾಖೆಗಳ ತಾಜಾ ಡಾಟಾ ಪಡೆಯಲು ವಿವಿಧ ಇಲಾಖೆಗಳಿಗೆ ಒತ್ತಡ ತಂತ್ರದ ಬಗ್ಗೆ ಸಲಹೆ ನೀಡಿದರು.
ರಾತ್ರಿ ನಾನು ಒಂದು ಗಂಟೆ ಧ್ಯಾನ ಮಾಡುತ್ತಾ ಇದೇ ಸಭೆಯ ಅತ್ಮಾವಲೋಕನ ಮಾಡುತ್ತಿದ್ದೆ. ನನಗೆ ದೊರಕಿದ ಉತ್ತರ,
- ಯಾರಿಗೂ ಯಾವುದನ್ನು ಓದಲು ಸಮಯವಿಲ್ಲ,
- ಬರೆಯಲು ತಾಳ್ಮೆ ಇಲ್ಲ.
- ಅವರವರ ಕೆಲಸದ ಒತ್ತಡ ಇದೆ.
- ಅದರಲ್ಲೂ ಸಮಾಜ ಸೇವೆಗೆ ಅವಕಾಶ ನೀಡಿರುವುದೇ ದೊಡ್ಡದು.
- ಅವರು ಹೇಳುವ ವಿಚಾರವನ್ನು ಕಾಲ ನಿಗಧಿ ಮಾಡಿ ಕೇಳುವುದು ಸೂಕ್ತ.
- ನಂತರ ಕಾಂಟ್ರವರ್ಸಿ ವಿಷಯ ಬರವಣಿಗೆ ಮಾಡಿ, ಚರ್ಚೆಗೆ ಬಿಟ್ಟಾಗ ಮಾತ್ರ ಎಲ್ಲರೂ ಓದುತ್ತಾರೆ.
- ನಾವು ನಮ್ಮ ಮನಸ್ಸಿನಲ್ಲಿ ಇರುವುದನ್ನು ಬೇರೆಯವರಿಂದ ನೀರಿಕ್ಷೆ ಮಾಡುವುದು ತಪ್ಪು.
- ಒಳ್ಳೆಯ ವಿಚಾರಗಳ ದಾಹ ಇರುವವರು ಗೊಂದಲದ ವಾತವಾರಣ ಸೃಷ್ಟಿಸಿದರೆ ಮಾತ್ರ. ಎಲ್ಲರೂ ಹೊಸ ಐಡಿಯಾ ಕೊಡುತ್ತಾರೆ.
- ಅಧಿಕಾರಿಗಳಿಗೆ ಮಂಜೂರಾದ ಹಣ ಖರ್ಚು ಮಾಡುವುದು, ಬಿಲ್ ಬರೆಯುವುದು, ನ್ಯಾಯಲಯದ ವಿಷಯಗಳ ಬಗ್ಗೆ ಸಮಾಲೋಚನೆ, ಮಾಹಿತಿ ಹಕ್ಕು ಅಧಿನಿಯಮದ ಪತ್ರಗಳಿಗೆ ಉತ್ತರ ನೀಡುವುದೇ ಅವರ ಅವಧಿ ಸೀಮೀತವಾಗಿದೆ. ಹೊಸವಿಚಾರಗಳ ಬಗ್ಗೆ ಅಧ್ಯಯನ ಮಾಡಲು ಸಮಯದ ಅಭಾವ ಕಡಿಮೆ ಇದೆ.
ಬದಲಾಗಲೇ ಬೇಕು, ಈ ಸಮಾಜಕ್ಕೆ ಹೊಂದಾಣಿಕೆ ಮಾಡಿಕೊಂಡು ಬದುಕುವ ದಾರಿ ಹುಡುಕಲೇ ಬೇಕು. ಇದೇ ಜೀವನದ ಮಾರ್ಗ ಎನಿಸಿತು.
ಡಾ.ರಮೇಶ್ ರವರು ಮಾತ್ರ ತಾಳ್ಮೆಯಿಂದ ಕೇಳಿದರು, ಕೊನೆಯಲ್ಲಿ ಒಂದು ಉತ್ತಮವಾದ ಮಾಸ್ಟರ್ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ನಿಮ್ಮ ಅಭಿಪ್ರಾಯ?