27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ   ನೀಡುವ ಅನುದಾನವನ್ನು ಕಾಲಮಿತಿಯಲ್ಲಿ ಸಮರ್ಪಕ ಬಳಕೆ ಮಾಡುವುದು. ದುರುಪಯೋಗ ನಡೆದರೆ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳನ್ನು ಮಂಜೂರು ಮಾಡಿಸಲು ನಿರಂತರವಾಗಿ ಶ್ರಮಿಸಲು ಪ್ರಧಾನ ಮಂತ್ರಿಯವರು ರಚಿಸಿರುವ ಸಮಿತಿಗಳೇ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳು.ರಾಜ್ಯ ಸರ್ಕಾರ ಇದೂವರೆಗೂ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿರುವುದಿಲ್ಲಾ. ಈಗ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಅರಂಭಿಸಿದೆ.

ಕರ್ನಾಟಕ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಜನತೆಯ ಸಲಹೆಗಳ ಸಂಗ್ರಹ ಅಭಿಯಾನ -2022

ಇಂದಿನಿಂದ ದಿನಾಂಕ:19.08.2022 ರಿಂದ ಅಧಿಕೃತವಾಗಿ ಆರಂಭಿಸುತ್ತಿದ್ದೇನೆ. ತಾವುಗಳು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲು ಈ ಮೂಲಕ ಮನವಿ.

ನಾಗರೀಕರಾಗಿ ನಮ್ಮ ಸಲಹೆಗಳನ್ನು ಸರ್ಕಾರಗಳಿಗೆ ನೀಡುವ ಕರ್ತವ್ಯ ನಮ್ಮದು. ಸ್ವೀಕರಿಸುವುದು ಬಿಡುವುದು ಸರ್ಕಾರದ ತೀರ್ಮಾನ.

  1. ದಿನಾಂಕ:27.06.2016 ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾರ್ಗದರ್ಶಿ ಸೂತ್ರ ಮತ್ತು ಅಲ್ಲಿಂದ ಕಾಲಕಾಲಕ್ಕೆ ಬದಲಾವಣೆ ಮಾಡಿದ ಪ್ರಮುಖ ತಿದ್ದುಪಡಿಗಳ ಅಂಶಗಳು.
  2. ದಿನಾಂಕ:05.08.2022 ರಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ನಡೆಸಿದ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ದಿಶಾ ಸಭೆ ನಡವಳಿಕೆಗಳು.
  3. ದಿನಾಂಕ:15.08.2022 ರಂದು  ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 75 ನೇ ಸ್ವಾತಂತ್ರ್ಯದ ದಿವಸ ಕೆಂಪುಕೋಟೆಯಿಂದ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಅಂಶಗಳು.
  4. ನನ್ನ ಅನುಭವದ ಅಂಶಗಳನ್ನು ಶಕ್ತಿಪೀಠ ಇ-ಪೇಪರ್ ನಲ್ಲಿ ಬರೆದಾಗ ನನಗೆ ವಿಶ್ವಧ್ಯಾಂತ ಹಲವಾರು ಓದುಗರು ನೀಡುವ ಸಲಹೆಗಳು.
  5. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಮೌಖಿಕವಾಗಿ ರಹಸ್ಯವಾಗಿ ನೀಡುವ ಸಲಹೆಗಳು.
  6. ಪರಿಣಿತರ ಅನುಭವಿಗಳ ಲೇಖನಗಳ/ಅಧ್ಯಯನ ವರದಿಗಳ ಪ್ರಮುಖ ಅಂಶಗಳು.
  7. ಗೂಗಲ್ ಗುರು ವಿನ ಪ್ರಮುಖ ಅಧ್ಯಯನ ಅಂಶಗಳು.
  8. ಸೋಶಿಯಲ್ ಮೀಡಿಯಾದಲ್ಲಿ ಬರುವ ಉತ್ತಮ ಅಂಶಗಳು.
  9. ದಿನಾಂಕ:01.08.1988 ರಿಂದ ಸುಮಾರು 34 ವರ್ಷಗಳ ಕಾಲ ನಿರಂತರವಾಗಿ ನಾನು ಆರಂಭಿಸಿದ ಅಭಿವೃದ್ಧಿ ಪರ ಹೋರಾಟ ಮತ್ತು ಸಂಶೋಧನೆಯ ಅನುಭವದ ಅಂಶಗಳು.