TUMAKURU:SHAKTHIPEETA FOUNDATION
ದಿನಾಂಕ:01.08.1988 ರಂದು ಅಭಿವೃದ್ಧಿ ಪರ ಹೋರಾಟ ಮತ್ತು ಸಂಶೋಧನೆ ಆರಂಭಿಸಿ ಸುಮಾರು 34 ವರ್ಷಗಳು ಕಳೆದಿವೆ.
ಆರಂಭದಲ್ಲಿ 1996 ರಲ್ಲಿ ನನ್ನ ಹುಟ್ಟೂರು ಕುಂದರನಹಳ್ಳಿ ಗ್ರಾಮದಲ್ಲಿಯೇ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಿ, ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಆರಂಭಿಸಿ ಸುಮಾರು 26 ವರ್ಷಗಳು ಕಳೆದಿವೆ. ಜಮೀನು ಪಿಟಿಸಿಎಲ್ ವಿವಾದಕ್ಕೆ ಸಿಲುಕಿ ಇನ್ನೂ ನರಳುತ್ತಿದೆ.
ತುಮಕೂರು ನಗರದಲ್ಲಿ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಿ, ದಿನಾಂಕ:20.08.2004 ರಂದು ಆರಂಭಿಸಿದ ತುಮಕೂರಿನ ಅಭಿವೃದ್ಧಿ ಗ್ರಂಥಾಲಯಕ್ಕೆ 18 ವರ್ಷ ತುಂಬಿದೆ.
ದಿನಾಂಕ:26.11.2015 ರಂದು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆಜಿಹಳ್ಳಿ ಹಳ್ಳಿ ಹೋಬಳಿಯ, ಬಗ್ಗನಡು ಕಾವಲ್ ನಲ್ಲಿ ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡಲು ಜಮೀನು ಕರಾರು ಪತ್ರ ಮಾಡಿಕೊಂಡು 7 ವರ್ಷಗಳಾಗಿವೆ.
ದಿನಾಂಕ:22.08.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಪ್ರಥಮ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಒಂದು ವರ್ಷ ಮುಗಿಯುತ್ತಾ ಬಂದರೂ, ಹಣದ ಅಭಾವದಿಂದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯಾವಾಗಿಲ್ಲ.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ:15.08.2022 ರಂದು 75 ನೇ ಸ್ವಾತಂತ್ಯ್ರದ ದಿವಸ ಅಭಿವೃದ್ಧಿ ಪರ ‘ಜೈ ಅನುಸಂಧಾನ್’ ಘೋಷಣೆ ಮಾಡಿದ್ದಾರೆ.
ಸಾಲ ಮಾಡಲು ಧೈರ್ಯವಿಲ್ಲ, ಟ್ರಸ್ಟ್ ಗೆ ದಾನ ಕೇಳಲು ನಾಚಿಕೆಯಾಗುತ್ತಿದೆ. 80 ಜಿ ಯನ್ನು ಮಾಡಿಸಲಾಗಿದೆ. ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಆಗಿಲ್ಲ, ಸಿ.ಎಸ್.ಆರ್. ಫಂಡ್ ಸಹ ಸುಲಭವಾಗಿ ದೊರೆಯುತ್ತಿಲ್ಲ.ಅಗ್ರಿಮೆಂಟ್ ದೇವತೆ ಹಾಗೂ ಮುಯ್ಯಾಳು ಚಿಂತನೆ ಒತ್ತಡಕ್ಕೆ ಸಿಲುಕಿದೆ.
ಮೋದಿಯವ ಜೈ ಅನುಸಂಧಾನ್ ಚಿಂತನೆಯ ಚಾಲನೆಗೆ, ‘ಕ್ಯಾಂಪಸ್ನ ಅಪೂರ್ಣ ಕಟ್ಟಡದ ಮೇಲ್ಛಾವಣೆಗೆ ತೆಂಗಿನ ಗರಿ ಹಾಕಿ, ನೆಲಕ್ಕೆ ನಾಟಿ ಹಸುವಿನ ಸಗಣೆ ಬಗ್ಗಡ ಹಾಕಿ’ ಆರಂಭ ಮಾಡುವುದೇ ಸೂಕ್ತ ಎನಿಸುತ್ತಿದೆ.
ದಾನಿಗಳಿಂದ ದಾನ ಸಂಗ್ರಹ ಅಭಿಯಾನ ಆರಂಭಿಸಲು ಚಿಂತನೆ ಇದೆ. ಸಾಧ್ಯವಿದ್ದಲ್ಲಿ ಕೆಳಕಂಡ ಖಾತೆಗೆ ಡಿಜಿಟಲ್ ದಾನ ನೀಡುವಿರಾ?