TUMAKURU:SHAKTHIPEETA FOUNDATION
ಗುಬ್ಬಿ ತಾಲ್ಲೋಕು ಹೆಚ್.ಎ.ಎಲ್ ಬಳಿ ಹೊಸದಾಗಿ ಪೋಲೀಸ್ ಸ್ಟೇಷನ್ ಮಂಜೂರು ಮಾಡಲು ಸುಮಾರು 4 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲು ಕಳೆದ ಎರಡು ವರ್ಷದಿಂದ ಪೋಲೀಸ್ ಇಲಾಖೆ ಪ್ರಯತ್ನ ಮಾಡುತ್ತಿದೆ.
ಸರ್ಕಾರಿ ಜಮೀನು ಇದೆ. ಬಗರ್ ಹುಕುಂ 53 ಅಥವಾ 50 ಯಾವುದು ಅರ್ಜಿಯೂ ಇಲ್ಲ, ಬಿದರೆಹಳ್ಳಕಾವಲ್ ನಲ್ಲಿ ಒಮ್ಮೆ ಸರ್ಕಾರಿ ಯೋಜನೆಗಳಿಗೆ ಜಮೀನು ಮಂಜೂರು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಖಾಲಿ ಇರುವ ಬೆಳಗಾವಿಯ ಸುವರ್ಣ ಸೌಧದಲ್ಲೂ ಅಪ್ಪಳ ಒಣಗಿ ಹಾಕಿದ ಉದಾಹರಣೆ ಇರುವಾಗ, ಖಾಲಿ ಜಮೀನಿನನಲ್ಲಿ ಅನುಭವ ಇರುವುದು ಮಾಮೂಲಿ.
ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಹಿಂದಿನ ಜಿಲ್ಲಾಧಿಕಾರಿಗಳಾದ À ಶ್ರೀ ಡಾ.ರಾಕೇಶ್ ಕುಮಾರ್ ರವರು, ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ಕುಮಾರ್ ರವರು ಮತ್ತು ತಹಶೀಲ್ಧಾರ್ ಶ್ರೀಮತಿ ಆರತಿ ರವರಿಗೂ ಹೇಳಿಯಾಗಿದೆ. ಆದರೂ ಪ್ರಯೋಜನವಾಗಿಲ್ಲ.
ನನಗೆ ಅರ್ಥವಾಗುತ್ತಿಲ್ಲ, ಏಕೆ ಇಷ್ಟು ವಿಳಂಭವಾಗಿದೆ ಎಂದು. ನಿನ್ನೆ ದಿನಾಂಕ:20.08.2022 ರಂದು ನಿಟ್ಟೂರು ಆರ್.ಐ ಶ್ರೀ ಮೋಹನ್ ಕುಮಾರ್ ರವರ ಬಳಿ ಚರ್ಚೆ ನಡೆಸಿದೆ. ಅವರು ಹೊಸದಾಗಿ ಬಂದಿದ್ದಾರೆ. ಸಾರ್ ಇಂದೇ ಸ್ಥಳ ಪರಿಶೀಲನೆ ಮಾಡಿ 3 ದಿವಸದೊಳಗೆ ದಾಖಲೆ ಸಲ್ಲಿಸುತ್ತೇವೆ ಎಂದು ಹೇಳಿದರು.ನಾನು ಬರುತ್ತೇನೆ ಇಂದೇ ಸ್ಥಳ ಪರಿಶೀಲನೆ ಮಾಡೋಣ ಎಂದು ತಿಳಿಸಿದೆ.
ಸ್ಥಳಕ್ಕೆ ನಿಟ್ಟೂರು ಆರ್.ಐ ಶ್ರೀ ಮೋಹನ್ ಕುಮಾರ್ ರವರು, ಅದಲಗೆರೆ ವಿಎ ಶ್ರೀ ಸ್ವಾಮಿರವರು ಬಂದರು. ಸರ್ಕಾರಿ ಜಮೀನಿನ ಬಳಿ ನಿಂತು ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ಕುಮಾರ್ ರವರಿಗೂ ಕರೆ ಮಾಡಿ ಹೇಳಲಾಯಿತು. ಅವರು ಸಹ ಖಡಕ್ ಆಗಿ ಸೂಚಿಸಿದ್ದಾರೆ. ಒಂದು ವಾರದೊಳಗೆ ಜಮೀನು ಮಂಜೂರು ಮಾಡಲೇ ಬೇಕು ಇದು ಸರ್ಕಾರಿ ಯೋಜನೆ ಆಧ್ಯತೆ ಇರಲೇ ಬೇಕು ಎಂದು ತಿಳಿಸಿದ್ದಾರೆ.