5th December 2024
Share

TUMAKURU:SHAKTHIPEETA FOUNDATION

ಸರ್ಕಾರಿ ಜಮೀನಾದರೂ ಬಗರ್ ಹುಕುಂ ಯೋಜನೆಯಡಿ ಉಳುಮೆ ಮಾಡುತ್ತಿದ್ದ, ಹೆಚ್.ಎ.ಎಲ್ ಗೆ ಜಮೀನು ಬಿಟ್ಟು ಕೊಟ್ಟ ಪಕ್ಕಾ ಆರ್.ಎಸ್.ಎಸ್, ಕಾರ್ಯಕರ್ತರಾದ ರೈತರು ದಿನಾಂಕ:20.08.2022 ರಂದು ನನ್ನನ್ನು ಕುಂದರನಹಳ್ಳಿಯಲ್ಲಿ ಸಂಪರ್ಕ ಮಾಡಿದರು.

ಹೆಚ್.ಎ.ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನೀವೂ ನೀಡಿದ್ದೀರಿ. ಈಗ ಯಾವಾಗ ಬೇಕಾದರೂ ಮೋದಿಯವರು ಬಂದು ಲೋಕಾರ್ಪಣೆ ಮಾಡುತ್ತಾರೆ ಎಂದು ಹೇಳುತ್ತಿದ್ದೀರಿ, ನಾವೂ ಈಗ ಯಾರ ಮೇಲೆ ಮೊಟ್ಟೆ ಎಸೆಯಲಿ? ಎಂಬ ಪ್ರಶ್ನೆ ನನ್ನನ್ನು ಮೂಕಪ್ರೇಕ್ಷಕನಾಗಿ ಇರುವಂತೆ ಮಾಡಿತು.

ನಾನು ಹೇಳಿದೆ ಇಷ್ಟು ದೊಡ್ಡ ಮಾತು ಬೇಡ, ನಾನು ಈಗ ಸರ್ಕಾರದ ಒಂದು ಭಾಗ, ಟೀಕೆ ಮಾಡಲು ಬರುವುದಿಲ್ಲಾ. ಒಂದು ಪ್ರಾಮಾಣಿಕ ಕೆಲಸ ಮಾಡೋಣ, ಶೀಘ್ರದಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮಯೋಜನೆಯ ಪ್ರತಿಯೊಂದು ಇಲಾಖಾ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆಯನ್ನು ನಾನು ಮಾಡುತ್ತೇನೆ. ಜೊತೆಗೆ  ನಮ್ಮ ರಾಜ್ಯ ಮಟ್ಟದ ದಿಶಾ  ಸಮಿತಿ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರನ್ನು ಆಹ್ವಾನಿಸುತ್ತೇನೆ.

ಈ ವರದಿಯನ್ನು ಮುಂದಿನ ರಾಜ್ಯ ಮಟ್ಟದ ದಿಶಾ ಸಮಿತಿಗೆ ಸಲ್ಲಿಸುತ್ತೇನೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು  ಸದಸ್ಯರು ನೀಡಿದ ಸ್ಥಳ ತನಿಖಾ ವರದಿಗೆ ಆಧ್ಯತೆ ನೀಡುವುದಾಗಿ ಈಗಾಗಲೇ ಕಳೆದ ಸಭೆಯಲ್ಲಿ ಆದೇಶ ನೀಡಿದ್ದಾರೆ.

ನಾನು   ಸಾಧ್ಯಾವಾದರೆ ಒಂದು ದಿವಸ ಮಾರಶೆಟ್ಟಿಹಳ್ಳಿಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಚ್.ಎ.ಎಲ್ ಘಟಕಕ್ಕೆ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಂಡ್ಯ ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ರವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ ರವರು ಹಾಗೂ ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣನವರನ್ನು  ಆಹ್ವಾನಿಸುತ್ತೇನೆ.

ಈ ವರದಿಯೇ ನನ್ನ ಪ್ರಥಮ ಸ್ಥಳ ತನಿಖಾ ವರದಿಯಾಗಲಿದೆ. ದಿಶಾ ಸಮಿತಿ ಸದಸ್ಯರ ಕರ್ತವ್ಯದ ಅಗ್ನಿಪರೀಕ್ಷೆಯೂ ಆಗಲಿದೆ. ಇದೇ ವರದಿಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೂ ಸಲ್ಲಿಸುತ್ತೇನೆ. ಮೌನವಾಗಿರಿ ಎಂದು ಬುದ್ದಿ ಹೇಳಿ ಬಂದೆ.

ದಿನಾಂಕ:23.08.2022 ರಿಂದ ಆರಂಬಿಸಲು ಉದ್ದೇಶಿಸಿದ್ದೇನೆ. ನನ್ನ ಜೊತೆ ಬಾಗವಹಿಸುವ ದಿಶಾ ಸಮಿತಿ ಸದಸ್ಯರು ಸಂಪರ್ಕ ಮಾಡಲು ಈ ಮೂಲಕ ಮನವಿ ಮಾಡುತ್ತೇನೆ.