27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ವಸಂತಾನರಸಾಪುರ ಕೈಗಾರಿಕಾ ಪ್ರದೇಶ ಸುತ್ತಮುತ್ತ, ಚನ್ನೈ-ಬೆಂಗಳೂರು – ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಪ್ರಾಧಿಕಾರ ಘೋಷಣೆ ಮಾಡಿರುವುದರಿಂದ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ರೈತರಲ್ಲಿ ಗೊಂದಲವಿದೆ.

ಸುಮಾರು 13000 ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಗೆ ಜಮೀನು ಭೂಸ್ವಾಧೀನ ಮಾಡಲಾಗಿದೆ. ಮತ್ತೆ ಸುಮಾರು 123 ಗ್ರಾಮಗಳನ್ನು ಭೂ ಸ್ವಾಧೀನ ಮಾಡುತ್ತಾರೆ ಎಂಬ ಸುದ್ದಿ ಹರಡಿರುವುದರಿಂದ, ರೈತರು ನಿದ್ದೆ ಮಾಡಿ ಸುಮಾರು ತಿಂಗಳು ಆಗಿವೆ. ಕಾರಿಡಾರ್ ಗೆ ನಮ್ಮ 123 ಗ್ರಾಮಗಳನ್ನು ಭೂ ಸ್ವಾಧೀನ ಮಾಡುತ್ತಾರಂತೆ. ಯಾರ ಗಮನಕ್ಕೂ ತರದೆ ಇಂಥಹ ನಿರ್ಣಯವನ್ನು ಕೈಗೊಂಡಿದ್ದಾರೆ ಎಂದು ಆಕ್ರೋಶ ಭರಿತರಾಗಿದ್ದಾರೆ.

ಈ ಬಗ್ಗೆ ರೈತರಿಗೆ ವಸ್ತು ನಿಷ್ಠ ಮಾಹಿತಿಯನ್ನು ಮನವರಿಕೆ ಮಾಡುವವರೆಗೂ, ತಾತ್ಕಾಲಿಕವಾಗಿ ಈ ಪ್ರಾಧಿಕಾರಕ್ಕೆ ತಡೆಯಾಜ್ಞೆ ನೀಡಲು  ಬಿಜೆಪಿಯ ಲೋಕಸಭಾ ಸದಸ್ಯರು, ಶಾಸಕರ ಮೇಲೆ ರೈತರು ಒತ್ತಾಯ ಮಾಡುತ್ತಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಇಂದು(26.08.2022) ತುಮಕೂರಿಗೆ ಬರುತ್ತಿದ್ದು, ರೈತರ ಚಿತ್ತ ಮುಖ್ಯ ಮಂತ್ರಿಯವರತ್ತ ಇದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇದರ ಬಿಸಿ ತಟ್ಟುವ ಆತಂಕ ಬಿಜೆಪಿಯವರಿಗಿದೆ. ವಿರೋಧ ಪಕ್ಷಗಳಿಗೆ ಇದೊಂದು ಒಳ್ಳೆಯ ಆಹಾರವಾಗಿದೆ.

ಬೊಮ್ಮಾಯಿರವರು ಏನು ಸೂಚನೆ ಕೊಡುತ್ತಾರೋ ಕಾದು ನೋಡೋಣ?