TUMAKURU:SHAKTHIPEETA FOUNDATION
ದಿನಾಂಕ:19.08.2022 ರಿಂದ ಅಧಿಕೃತವಾಗಿ ದಿಶಾ ಮಾರ್ಗದರ್ಶಿ ಸೂತ್ರ ಅಭಿಯಾನ ಆರಂಭಿಸಲಾಗಿತ್ತು.
ದಿನಾಂಕ:30.08.2022 ರಂದು ದಿಶಾ ಮಾರ್ಗದರ್ಶಿ ಸೂತ್ರ ಕರಡು ಪ್ರತಿಯನ್ನು ರಾಜ್ಯ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಿಗೆ ಸಲ್ಲಿಕೆ ಮಾಡಲಾಗಿದೆ.
ದಿನಾಂಕ:05.08.2022 ರಂದು ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು.ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿಯೂ ದಿಶಾ ಮಾರ್ಗದರ್ಶಿ ಸೂತ್ರದ ಬಗ್ಗೆ ಕಡತ ಆರಂಭವಾಗಿತ್ತು.
ಕುಂದರನಹಳ್ಳಿ ರಮೇಶ್ ರವರ ಸಲಹೆಯನ್ನು ಪರಿಗಣಿಸಿ, ದಿಶಾ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ ಸಲ್ಲಿಸಲು, ಮುಖ್ಯ ಮಂತ್ರಿಯವರ ಕಚೇರಿಯಿಂದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದು ಇತಿಹಾಸ.
ದಿನಾಂಕ:24.09.2020 ರಂದು ನನ್ನನ್ನು ರಾಜ್ಯಮಟ್ಟದ ದಿಶಾ ಸಮಿತಿಗೆ ನಾಮನಿರ್ದೇಶನ ಮಾಡಿದ ದಿನದಿಂದ ಇಲ್ಲಿಯವರೆಗೂ ನಿರಂತರವಾಗಿ, ರಾಜ್ಯ ದಿಶಾ ಸಮಿತಿಗೆ ಹಲವಾರು ಪತ್ರಗಳನ್ನು ನೀಡುತ್ತಾ ಬಂದಿದ್ದೇನೆ. ಎರಡು ವರ್ಷಕ್ಕೆ ಅಂದರೆ ದಿನಾಂಕ:24.09.2022 ರ ವೇಳೆಗಾದರೂ ಉತ್ತಮವಾದ ಮಾರ್ಗದರ್ಶಿ ಸೂತ್ರ ಹೊರಬರಲಿ ಎಂಬ ಕನಸು ನನ್ನದಾಗಿದೆ.
ಆ ಎಲ್ಲಾ ಪತ್ರಗಳಲ್ಲಿರುವ ಅಂಶಗಳನ್ನು ಸಹ ದಿಶಾ ಮಾರ್ಗದರ್ಶಿ ಸೂತ್ರ ಕರಡು ಪ್ರತಿಗೆ ಸೇರಿಸ ಬಹುದಾಗಿದೆ ಅಥವಾ ಯಾವ ಕಾರಣಕ್ಕೆ ಯಾವ ಅಂಶ ಸೇರಿಸಲು ಸಾಧ್ಯಾವಿಲ್ಲ ಎಂಬ ಮಾಹಿತಿಯನ್ನು ನೀಡುವುದು ಸಂವಿಧಾನದ ಆಶಯ.
ನನ್ನ ಅನಿಸಿಕೆಗಳನ್ನು ಸಲ್ಲಿಸಲಾಗಿದೆ. ಇತರರು ಸಲ್ಲಿಸ ಬಹುದಾಗಿದೆ. ಸರ್ಕಾರಕ್ಕೆ ಈ ದೇಶದ ಯಾವುದೇ ಒಬ್ಬ ಪ್ರಜೆಯು ಸಲಹೆ ನೀಡಬಹುದಾಗಿದೆ. ಅದಕ್ಕೆ ಉತ್ತರ ಕೊಡುವುದು ಸರ್ಕಾರದ ಆಧ್ಯಕರ್ತವ್ಯ.
ಇಂದಿನಿಂದ ದಿನಾಂಕ:30.08.2022 ರಿಂದ ನಾನು ರಾಜ್ಯ ದಿಶಾ ಸಮಿತಿಗೆ ನೀಡಿರುವ ಪ್ರತಿಯೊಂದು ಪತ್ರಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಅಭಿಯಾನ ಆರಂಭಿಸುತ್ತೇನೆ.
ಜೊತೆಗೆ ಕೇಂದ್ರ ಸರ್ಕಾರದ ದಿಶಾ ವಿಭಾಗದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲು ಚಿಂತನೆ ನಡೆಸಲಾಗಿದೆ.
ಪ್ರಧಾನ ಮಂತ್ರಿಯವರ ಕಚೇರಿ, ನೀತಿ ಆಯೋಗದಲ್ಲೂ ಸಮಾಲೋಚನೆ ನಡೆಸಲು ಯೋಚಿಸಲಾಗಿದೆ.
ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ನೇತೃತ್ವದ ಸರ್ಕಾರ ರಚಿಸಿದ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರ ದೇಶಕ್ಕೆ ಮಾದರಿಯಾಗಿರಬೇಕು. ಎಂಬುದು ನನ್ನ ಆಸೆ.
ಕರಡು ಪ್ರತಿಯನ್ನು ಎಲ್ಲಾ ಸದಸ್ಯರಿಗೆ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯವರು ಸಲ್ಲಿಸುವುದು ಸೂಕ್ತವಾಗಿದೆ.