21st November 2024
Share

TUMAKURU:SHAKTHIPEETA FOUNDATION

ನಾನು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾದ ಮೇಲೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರದ ಪ್ರತಿಯೊಂದು ಅಂಶಗಳ ಸಂಶೋಧನೆ ಮಾಡುತ್ತಾ ಬಂದಿದ್ದೇನೆ.

ನನ್ನ ಸಂಶೋದನೆ ಎಂದರೆ ಕಟ್ ಅಂಡ್ ಪೇಸ್ಟ್ ವರದಿಯಲ್ಲ. ಮನೆಯಲ್ಲಿ ಕುಳಿತು ಬರೆಯುವುದು ಅಲ್ಲ. ನನಗೆ ಹೊಳೆದ ವಿಚಾರಗಳ ಬಗ್ಗೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯುವುದು, ಅವರಿಂದ ಸ್ಪಷ್ಟ ಅಭಿಪ್ರಾಯ ಸಂಗ್ರಹಣೆಯ ಮೂಲಕ ನನ್ನ ಸಂಶೋದನೆಯು ಅರ್ಥಪೂರ್ಣವಾಗಿ, ಲೈವ್ ಆಗಿ ನಡೆಯುತ್ತಿದೆ ಎಂಬುದು ನನ್ನ ಪರಿಕಲ್ಪನೆ ಅಥವಾ ಭ್ರಮೆ?

ರಾಜ್ಯ ಮಟ್ಟದ ಪ್ರಥಮ ದಿಶಾ ಸಮಿತಿ ಸಭೆಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:05.08.2022 ರಂದು ನಡೆಸಿದ್ದಾರೆ.

ನಾನು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಿಗೆ, ಕೇಂದ್ರ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರದ ಪ್ರಕಾರ  7 ಬಿ ಯಲ್ಲಿನ  ಅಂಶಗಳ ಬಗ್ಗೆ ಸ್ಪಷ್ಟ ಪಡಿಸಲು ಬಹಿರಂಗವಾಗಿ ಮನವಿ ಮಾಡಿದ್ದೇನೆ.

  1. ಸಭೆ ನಡೆದ 10 ದಿವಸದೊಳಗೆ ಸಭೆ ನಡವಳಿಕೆ ಸಹಿ ಮಾಡಿಸಬೇಕು?
  2. ಕೇಂದ್ರ ಸರ್ಕಾರದ ವೆಬ್‍ಸೈಟ್ ಗೆ ಸಭೆ ನಡವಳಿಕೆ ಅಫ್ ಲೋಡ್ ಮಾಡಬೇಕು.
  3. ರಾಜ್ಯ ಸರ್ಕಾರದ ವೆಬ್‍ಸೈಟ್ ಗೆ ಸಭೆ ನಡವಳಿಕೆ ಅಫ್ ಲೋಡ್ ಮಾಡಬೇಕು.
  4. ಸಭೆ ನಡೆದ 30 ದಿವಸದೊಳಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಅನುಷ್ಠಾನಕ್ಕಾಗಿ ಪತ್ರ ಬರೆಯಬೇಕು.
  5. ಯಾವುದೇ ಮೂಲದಿಂದ ಬಂದಿರಲಿ, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಮತ್ತು ಕೇಂದ್ರ ಪುರಸ್ಖøತ ಯೋಜನೆಗಳ ಪ್ರತಿಯೊಂದು ಇಲಾಖೆಗಳ, ಪ್ರತಿಯೊಂದು ಯೋಜನೆಯ ಅನುದಾನದ ಬಗ್ಗೆ ನಿಖರವಾದ ಮಾಹಿತಿ ಇರಬೇಕು.

 ನಾನು ಇಂದು ದಿನಾಂಕ:01.09.2022 ರಂದು ತಮ್ಮ ಕಚೇರಿಗೆ ಹಾಜರಾಗುತ್ತಿದ್ದೇನೆ. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳಿಗೆ ನಿಖರವಾದ ಮಾಹಿತಿ ನೀಡಲು ಈ ಮೂಲಕ ಕೋರಿದೆ. ಬಹುಷಃ ನಿಯಮ ಪ್ರಕಾರ ನಾನು ತಮಗೆ ಪತ್ರ ಬರೆದು ತಪಾಸಣೆಗೆ ಬರಬೇಕಿಂದಿಲ್ಲ, ಯಾವಾಗ ಬೇಕಾದರೂ ಬರಬಹುದು ಇದು ನಿಯಮ ಎಂದು ಕೊಂಡಿದ್ದೇನೆ. ಇದರ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡುವುದು ಅಗತ್ಯವಾಗಿದೆ.