TUMAKURU:SHAKTHI PEETA FOUNDATION
ಅಧಿಕೃತಕವಾಗಿ ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆ, ನಿಗಮ, ಕಾರ್ಪೋರೇಷನ್ ಮತ್ತು ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆ, ನಿಗಮ, ಕಾರ್ಪೋರೇಷನ್‍ಗಳಿಗೆ ಬೇಟಿ ನೀಡಿ, ಕೇಂದ್ರ ಸರ್ಕಾರದ ಯೋಜನೆಗಳ ಅಧ್ಯಯನಕ್ಕೆ ದಿನಾಂಕ:02.09.2022 ರಿಂದ ಚಾಲನೆ ನೀಡಲಾಗಿದೆ. ದಿನಕ್ಕೊಂದು ಇಲಾಖೆ, ನಿಗಮ, ಕಾರ್ಪೋರೇಷನ್ ಗಳಿಗೆ ಬೇಟಿ ನೀಡಲೇ ಎಂಬ ಬೇಕು ನಿಯಮವನ್ನು ನಾನೇ ಮಾಡಿಕೊಂಡಿದ್ದೇನೆ.
ದಿಶಾ ವಿಭಾಗ ಯೋಜನೆ ಇಲಾಖೆ, ಕೆಇಎ ಯೋಜನಾ ಇಲಾಖೆ, ಆರ್ಥಿಕ ಇಲಾಖೆ, ಮುಖ್ಯ ಮಂತ್ರಿಯವರ ಕಚೇರಿ, ಮೆಟ್ರೋ ಮತ್ತು ಡಲ್ಟ್ ಸಂಸ್ಥೆಗಳಿಗೆ ಇಂದು ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಯೋಜನಾವಾರು ಕೇಸ್ ವರ್ಕರ್, ಅಕೌಂಟ್ಸ್ ಆಫೀಸರ್ಸ್, ಪ್ಲಾನಿಂಗ್ ವಿಭಾಗ ಹಾಗೂ ಇಲಾಖಾ/ಸಂಸ್ಥೆ ಮುಖ್ಯಸ್ಥರ ಜೊತೆ ಮುಕ್ತವಾಗಿ ಒನ್ ಟು ಒನ್ ಸಮಾಲೋಚನೆ ಮಾಡಿದಾಗ ಮಾತ್ರ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ.
ಅಧಿಕೃತವಾಗಿ ದಾಖಲೆ ಪಡೆಯಲು ಇಲಾಖೆಯಿಂದ ಲಿಖಿತ ಪತ್ರ ಅಥವಾ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೇಳಬೇಕಾಗುತ್ತದೆ. ಮೌಖಿಕವಾಗಿ ಅಧ್ಯಯನ ಮಾಡಲು ಬಹಳ ಒಳ್ಳೆಯ ವಿಚಾರಗಳ ಲಭ್ಯವಾದರೂ, ಮುಖ್ಯ ಮಂತ್ರಿಯವರಿಗೆ ವರದಿ ನೀಡಬೇಕಾದಲ್ಲಿ ಲೀಖಿತ ದಾಖಲೆ, ಭಾವಚಿತ್ರ, ಸ್ಥಳ ವೀಕ್ಷಣೆ ಇತ್ಯಾದಿ ದಾಖಲೆ ಅಗತ್ಯವಾಗಿದೆ.
ದಿಶಾ ಮಾರ್ಗದರ್ಶಿ ಸೂತ್ರದ ಪ್ರಕಾರ ನಾವು ಯಾವ ರೀತಿ ಮಾಹಿತಿ ಸಂಗ್ರಹ ಮಾಡಬೇಕು ಎಂಬ ಬಗ್ಗೆ ಸ್ಪಷ್ಠನೆ ಇರಬೇಕು. ಯಾವ ಇಲಾಖೆಯಾದರೂ ದೃಡೀಕರಿಸಿದ ಮಾಹಿತಿಗಳನ್ನು ಸುಮ್ಮನೆ ಸುಮ್ಮನೆ ನೀಡುವುದಿಲ್ಲ.
ಮೊದಲಿಗೆ ದಿಶಾ ಸಮಿತಿ ಬಗ್ಗೆ ಮನವರಿಕೆ ಮಾಡುವುದೇ ಒಂದು ದೊಡ್ಡ ತಲೆನೋವಾಗಿದೆ. ಬಹಳಷ್ಟು ಮಂದಿ ಅಧಿಕಾರಿಗಳಿಗೆ ದಿಶಾ ಸಮಿತಿಯ ಬಗ್ಗೆ ಮಾಹಿತಿ ಇಲ್ಲ. ದಿನ ಸಾಯುವವರಿಗೆ ಅಳುವರು ಯಾರು ಎಂಬ ಧೋರಣೆ ಕೆಲವು ಅಧಿಕಾರಿಗಳಲ್ಲಿದೆ.
ಆದರೂ ನನ್ನ 34 ವರ್ಷಗಳ ವಿವಿಧ ಇಲಾಖೆಗಳ ಸುಧೀರ್ಘ ಸಂಪರ್ಕದಿಂದ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ನಿರಂತರವಾಗಿ ಕಚೇರಿಗಳಿಗೆ ಸುತ್ತಾಡಿರುವುದರಿಂದ, ಒಭ್ಬರಲ್ಲ, ಒಬ್ಬರು ನನಗೆ ಗೊತ್ತಿರುವವರು ಇರುವುದರಿಂದ ನನಗೆ ಅನೂಕೂಲವಾಗಲಿದೆ,
ನಾನು ದೆಹಲಿಯಲ್ಲಿ ಯಾವುದೇ ಇಲಾಖೆಗೆ ಹೋದರೆ ಮೊದಲು ಪರಿಚಯ ಮಾಡಿಕೊಳ್ಳುವುದು ಕರ್ನಾಟಕ ರಾಜ್ಯವರನ್ನು, ಬೆಂಗಳೂರಿನಲ್ಲಿ ಯಾವುದೇ ಇಲಾಖೆಗೆ ಹೋದರೆ ಮೊದಲ ಪರಿಚಯ ತುಮಕೂರು ಜಿಲ್ಲೆಯವರನ್ನು. ಈಗ ರಾಜ್ಯದ ಯಾವುದೇ ಇಲಾಖೆಗೆ ಹೋಗಲಿ, ರಾಜ್ಯದ ಯಾವುದೇ ಜಿಲ್ಲೆಯವರಾಗಲಿ ಒಬ್ಬರಲ್ಲ ಒಬ್ಬರು ನೋಡಿದ ತಕ್ಷಣ ಅವರೇ ಪರಿಚಯ ಮಾಡಿಕೊಳ್ಳುವ ಅನುಭವ ನನಗೆ ಖುಷಿ ತಂದಿದೆ.
ಈ ಬೆಳವಣಿಗೆ ನನ್ನ ಅಧ್ಯಯನಕ್ಕೆ ಪೂರಕವಾಗಿದೆ ಎನಿಸುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ, ಆಗ ನಾನು ಪರಿಚಯ ಮಾಡಿಕೊಳ್ಳ ಬೇಕಾದ ಪ್ರಮೇಯವೇ ಬರುವುದಿಲ್ಲ. ಅವರೇ ಎಲ್ಲರಿಗೂ ನನ್ನ ಬಗ್ಗೆ, ನಮ್ಮ ಸಂಸ್ಥೆ ಬಗ್ಗೆ ಮನವರಿಕೆ ಮಾಡುವುದು ಒಂದು ಪವಾಡ ಎನಿಸುತ್ತಿದೆ.
ಇಂದು ವಿವಿಧ ಕಚೇರಿಗಳಿಗೆ ನನ್ನ ಭೇಟಿಯ ನಂತರ ಆತ್ಮೀಯ ಅಧಿಕಾರಿಗಳು, ನೌಕರರು, ನನಗೆ ಹೇಳಿದ ಮಾತು, ಸಾರ್ ಬಹಳ ಹುಷಾರಾಗಿರಿ, ನೀವೂ ಎಲ್ಲವನ್ನು ಇ ಪೇಪರ್ ನಲ್ಲಿ ಬರೆಯಬೇಡಿ, ಆದಷ್ಟು ಸತ್ಯ ಹೇಳಬೇಡಿ ಎಂಬ ಕಟು ಸತ್ಯವನ್ನು ಹೇಳುವ ಮೂಲಕ ನನ್ನನ್ನು ತಿದ್ದುತ್ತಿದ್ದಾರೆ.
ನಾನು ಸಂಪೂರ್ಣ ಬದಲಾಗ ಬೇಕು ಎನಿಸುತ್ತಿದೆ. ಈಗಾಗಲೇ ನಾನು ಎಷ್ಟು ಬೇಕೋ ಅಷ್ಟೆ ಹೇಳಿದರೂ, ಇದು ಸಹ ತಲೆ ಮೇಲೆ ಹೊಡೆದ ಹಾಗೆ ಇರುತ್ತದೆ ಸಾರ್ ಎಂಬ ಸಲಹೆಗಳು ನಿರಂತರವಾಗಿ ಬರುತ್ತಿವೆ. ನಾನೇ ಅತ್ಮವಾಲೋಕನ ಮಾಡಿಕೊಳ್ಳುತ್ತಿದ್ದೇನೆ.
ಪ್ರೀತಿಯ ಇ ಪೇಪರ್ ಓದುಗರೇ ನಿವೇನಂತಿರಾ?