TUMAKURU:SHAKTHIPEETA FOUNDATION
1999 ರಲ್ಲಿ ಕುಂದರನಹಳ್ಳಿಯಲ್ಲಿ ‘ಚಿಂತನಾ–ಕಾರ್ಯಾಗಾರ–ಅನುಷ್ಠಾನ’ ಘೋಷಣೆಯಡಿಯಲ್ಲಿ ‘ತುಮಕೂರು ಲೋಕಸಭಾ ಕ್ಷೇತ್ರದ ಕಾರ್ಯಾಗಾರ’ ವನ್ನು ಆರಂಭಿಸಲಾಗಿತ್ತು. ಜಮೀನಿನ ವಿವಾದದಿಂದ ನನೆಗುದಿಗೆ ಬಿದ್ದಿತ್ತು. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂಬ ಮಾತಿನಂತೆ 23 ವರ್ಷಗಳ ನಂತರ ಮತ್ತೆ ಚಾಲನೆ ನೀಡುತ್ತಿರುವುದು ನನಗೆ ಹರ್ಷ ತಂದಿದೆ.
ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶಕ್ತಿಪೀಠ ಫೌಂಡೇಷನ್ ವತಿಯಿಂದ ಮನವಿ ಮಾಡಲಾಗಿದೆ.
ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ನ ಶ್ರೀ ಸತ್ಯಾನಂದ್ ರವರ ಬಳಿ ಮಾಸ್ಟರ್ ಪ್ಲಾನ್ ಲೇಔಟ್ ಮಾಡಲು ಆರಂಭಿಸಲಾಗಿದೆ. ಯೋಜನೆಯ ಪರಿಕಲ್ಪನೆ ನನ್ನದೇ ಆಗಿರುತ್ತದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಪ್ಪುವ ರೀತಿಯಲ್ಲಿ ಪ್ರಸ್ತಾವನೆ ಸಿದ್ದಪಡಿಸಬೇಕಿದೆ.
ಈ ಕ್ಯಾಂಪಸ್ ಕೇವಲ ಒಂದು ಎಕರೆ ಹದಿನೈದು ಗುಂಟೆಯಲ್ಲಿ ಮಾತ್ರ ತಲೆ ಎತ್ತಲಿದೆ. ಈಗಾಗಲೇ ನಮ್ಮ ತಾಯಿ ದಿ.ಪಾರ್ವತಮ್ಮನವರಿಂದ ಈ ಜಮೀನಿನಲ್ಲಿ ತಾನಾಗಿಯೇ ಹುಟ್ಟಿ ಬೆಳೆದಿರುವ ಬಿಲ್ವಪತ್ರೆ ಗಿಡಕ್ಕೆ ಪೂಜೆ ಮಾಡಿಸಲಾಗಿದೆ. ಅಂದೇ ಇಲ್ಲಿ ನನ್ನ ಕನಸಿನ ಯೋಜನೆಯನ್ನು ಆರಂಭಿಸಬೇಕು. ಅಥವಾ ಈ ಜಮೀನು ಬಿಟ್ಟು ಹೊರ ಹೋಗಬೇಕು ಎಂಬ ನಿರ್ಧಾರ ಮಾಡಿದ್ದೆ.
ಆದರೆ ಶಕ್ತಿದೇವತೆ ಮತ್ತೆ ಹೊಸ ಚಿಗರು ಮೂಡಿಸಿದೆ, ಪಲಿತಾಂಶ ಕಾದು ನೋಡೋಣ. ಈ ಕ್ಯಾಂಪಸ್ ನಲ್ಲಿ ಏನೇನು ಇರಲಿದೆ ಎಂಬ ಬಗ್ಗೆ ಪರಿಕಲ್ಪನೆ ವರದಿ ಆರಂಭಿಸಲಾಗಿದೆ. ಆಸಕ್ತರು ತಾವೂ ಸಲಹೆ ನೀಡಬಹುದಾಗಿದೆ.
ತುಮಕೂರು ಜಿಲ್ಲೆಯ ಶಕ್ತಿಪೀಠ ಕ್ಯಾಂಪಸ್ ಯೋಜನೆಗಳು ಕೆಳಕಂಡಂತಿವೆ.
- ಹೆಚ್.ಎ.ಎಲ್ ನಡೆದ ಬಂದ ದಾರಿ.
- ನಮ್ಮೂರಿಗೆ ಹೆಚ್.ಎ.ಎಲ್ ಬಂದ ರೀತಿ.
- ನಮ್ಮೂರಿಗೆ ಹೆಚ್.ಎ.ಎಲ್ ಬಂದಿದ್ದರಿಂದ ಸ್ಥಳೀಯರಿಗೆ ಆದ ಅನೂಕೂಲ ಅಥವಾ ಅನಾನುಕೂಲ.
- ತುಮಕೂರು ಲೋಕಸಭಾ ಕ್ಷೇತ್ರದ ಕಾರ್ಯಾಗಾರ.
- ಪ್ರಧಾನ ಮಂತ್ರಿಗಳವಾರು ಕೇಂದ್ರ ಸರ್ಕಾರದ ಯೋಜನೆಗಳ ಅವಲೋಕನ.
- ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳವಾರು ಯೋಜನೆಗಳ ಅವಲೋಕನ.
- ಕರ್ನಾಟಕ ರಾಜ್ಯದ ಹೆರಿಟೇಜ್
- ಕರ್ನಾಟಕ ರಾಜ್ಯದ ರಾಜಕೀಯ ಪಕ್ಷಗಳ ಅವಲೋಕನ.
- ವಿಶ್ವದ 108 ಶಕ್ತಿಪೀಠಗಳ ಇತಿಹಾಸ
ಒಂದೇ ಒಂದು ಕಟ್ಟಡ, ಕೇವಲ 9 ರೂಮುಗಳವಾರು, 9 ಯೋಜನೆಗಳ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರವಾರು ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಲಿದೆ. ಪೂರಕವಾದ ಮೂಲಭೂತ ಸೌಕರ್ಯ ಮಾತ್ರ ಇರಲಿದೆ.
75 ಅಡಿ ಅಗಲ, ಸುಮಾರು 1000 ಅಡಿ ಉದ್ದವಿದೆ, ಇದರಲ್ಲಿ ರಸ್ತೆಗಳ ಮಾರ್ಜಿನ್ ಕಳೆಯಬೇಕಿದೆ. ಇಂಜಿನಿಯರಿಂಗ್ ಮತ್ತು ರೆವಿನ್ಯೂ ಸರ್ವೇ ಇನ್ನೂ ಆಗಬೇಕಿದೆ.