15th September 2024
Share

TUMAKURU:SHAKTHIPEEAT FOUNDATION

  ಸೋಶಿಯಲ್ ಮೀಡಿಯಾ ಈ ಮಟ್ಟಕ್ಕೆ ಬೆಳೆಯಲು ಕಾರಣ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಎಂದರೆ ಅತಿಶಯೋಕ್ತಿಯಲ್ಲ, ಅಂದು ಸೋಶಿಯಲ್ ಮೀಡಿಯಾವನ್ನು ಟೀಕಿಸುತ್ತಿದ್ದ ಕಾಂಗ್ರೆಸ್, ಇಂದು ಸಾಕಷ್ಟು ಬಳಸಿಕೊಳ್ಳುತ್ತಿದೆ. ಮಾಜಿ ಪ್ರಧಾನಿಯವರಾದ ದಿ.ರಾಜೀವ್ ಗಾಂಧಿಯವರ ಹಾಗೂ ಶ್ರೀ ಮನಮೋಹನ್ ಸಿಂಗ್‍ರವರ ಕನಸಿಗೆ ಕಾಂಗ್ರೆಸ್ ಈಗ ಸ್ಪಂಧಿಸುತ್ತಿದೆಯಂತೆ.

ಮಾಜಿ ಪ್ರಧಾನಿಯವರಾದ ಶ್ರೀ ಮನಮೋಹನ್ ಸಿಂಗ್ ರವರು ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಳಿಸಿದರು, ಅದೇ ಆಕ್ಟ್ ಅನ್ನು ಸಮರ್ಪಕವಾಗಿ ಬಳಸಿಕೊಂಡ ಬಿಜೆಪಿಯ ಹಿರಿಯ ನಾಯಕ ದಿ.ಅರಣ್ ಜೇಟ್ಲಿಯವರ ಅಧ್ಯಯನದ ಮೂಲಕ ಯುಪಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮೇಲೆ ಹೇಳದಂತೆ ಮಾಡಿದ್ದು ಇತಿಹಾಸ.

ನೋಡಿ ಇದಕ್ಕೆ ಹೇಳುವುದು ಅತ್ತೆಗೊಂದು ಕಾಲಸೊಸೆಗೊಂದು ಕಾಲ ಕಾಲ ಬದಲಾಗಿದೆ ಎಂದು ಹೇಳುವುದು ವಾಡಿಕೆ, ಕಾಲ ಬದಲಾಗಿಲ್ಲ ಸತ್ಯ ಬದಲಾಗಿದೆ. ವiನುಷ್ಯನ ನಡವಳಿಕೆ ಬದಲಾಗಿದೆ. ಹಣ ಮತ್ತು ಅಧಿಕಾರ ಬಿಟ್ಟರೆ ಎಲ್ಲವೂ ಶೂನ್ಯ.

ಜೀವನ ಒಂದು ಚೆಸ್ ಆಟ ಇದ್ದ ಹಾಗೆ, ನಮಗೆ ಹೇಗೆ ಬೇಕೋ, ಆ ರೀತಿ ವ್ಯಾಖ್ಯಾನ ಮಾಡುತ್ತೇವೆ. ನಮ್ಮ ದೇಶದ ಕಾನೂನುಗಳು ಹಾಗೆ ಇವೆ. ನಾವೂ ಹಾಗೆ ಇದ್ದೇವೆ. ಇದು ಸೋಶಿಯಲ್ ಮೀಡಿಯಾ ಯುಗ, ಎಲ್ಲದಕ್ಕೂ ಸಿದ್ದವಾಗಿದ್ದರೆ ಮಾತ್ರ ಬದುಕಬಹುದು.

ನಮ್ಮ ಜೀವ ಯಾವಾಗ ಬೇಕಾದರೂ, ರೈಟ್ ಹೇಳಬಹುದು ಎಂದು ಶೇ 100 ರಷ್ಟು ಗೊತ್ತಿದ್ದರೂ ನಾವು ಆಡುವ ಆಟ ಥೂ ನಾಚಿಕೆಯಾಗುತ್ತಿದೆ. ಕೆಲವು ಸಲ ಸಂದರ್ಭ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕುವುದು ಓಕೆ, ಆದರೇ ಜೀವನವನ್ನೇ ನೆಗೆಟೀವ್ ಹಾಗೆ ತೆಗೆದುಕೊಂಡರೆ ಜೋಕೆ.

ತಪ್ಪು ಮಾಡಿದರೂ ಜೈಕಾರ ಹಾಕುವ ಜನರಿಗೇನು ಕೊರತೆ ಇಲ್ಲ. ಸರಿಯಾಗಿದ್ದರೂ ಟೀಕಿಸುವ ಜನರಿಗೇನು ಕೊರತೆ ಇಲ್ಲ.ಮನುಷ್ಯ ಆಡಿದ್ದೇ ಆಟ!