22nd December 2024
Share

TUMAKURU:SHAKTHIPEETA FOUNDATION

 ಶಕ್ತಿಪೀಠ ಕ್ಯಾಂಪಸ್‍ನಲ್ಲಿ 1000 ಜಾತಿಯ ಔಷಧಿ ಮತ್ತು ಇತರೆ ಗಿಡಗಳನ್ನು ಹಾಕಿ ಬೆಳೆಸುವ ಹೊಣೆಗಾರಿಕೆ ಹೊತ್ತಿದ್ದ ಪಾರಂಪರಿಕ ವೈಧ್ಯರಾದ ಶ್ರೀ ಗುರುಸಿದ್ಧರಾಧ್ಯರವರು ಕೇಳಿದ ಮಾತು ಶಕ್ತಿಪೀಠ ಕ್ಯಾಂಪಸ್ ಕಾಮಗಾರಿ ಎಲ್ಲಿಗೆ ಬಂತು ಸಾರ್.

 ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ(ಪಿಜೆಸಿ) ಶಕ್ತಿಪೀಠ ಫೌಂಡೇಷನ್ ಗೆಸ್ಟ್‍ಹೌಸ್‍ನಲ್ಲಿ ಕುಳಿತು ಕಳೆದ 3 ವರ್ಷಗಳ ಕಾಮಗಾರಿಗಳು ಮತ್ತು ಯೋಜನೆಯ ಪ್ರಗತಿಯ ಬಗ್ಗೆ ಸಮಾಲೋಚನೆ ನಡೆಸಿದವು.

ಮುಂದಿನ ಎರಡು ವರ್ಷದ ಗುರಿಯ ಬಗ್ಗೆಯೂ ಅವರಿಗೆ ಸ್ಪಷ್ಟವಾಗಿ ವಿವರಿಸಿದೆ. ಇವೆಲ್ಲಾ ಕೇಳಿದ ಅವರು ನನಗೆ ಹೇಳಿದ ಮಾತು ಸ್ವಲ್ಪ ದೇಹಕ್ಕೆ ರೆಸ್ಟ್ ಕೊಡಿ ಸಾರ್, ಇಷ್ಟೊಂದು ಸ್ಟ್ರೆಸ್ ಒಳ್ಳೆಯದಲ್ಲ.

 ಹೌದು ಎಲ್ಲರೂ ಹೇಳುವುದೂ ಇದನ್ನೆ, ಇಷ್ಟೊಂದು ಸಿಟ್ಟು, ಕೂಗಾಟ, ರೇಗಾಟ, ಬಿಡುವಿಲ್ಲದ ಕೆಲಸ, ನಿರಂತರ ಓಡಾಟ ಇದ್ದರೂ, ನನಗೆ ಬಿಪಿ ಇಲ್ಲ, ಶುಗರ್ ಇಲ್ಲ, ಹೃದಯದ ತೊಂದರೆಯು ಇಲ್ಲ, ನಾನೂ ಆರೋಗ್ಯವಾಗಿ ಇದ್ದೇನೆಲ್ಲಾ ಪಂಡಿತರೇ ಎಂದಾಗ ಅವರು ಹೇಳಿದ ಮಾತು, ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸುಮ್ಮನಾದರು.

ನನ್ನ ಜೀವಮಾನದ ಗುರಿ, ಶಕ್ತಿಪೀಠ ಕ್ಯಾಂಪಸ್ ಅನ್ನು ವಿಶ್ವ ವಿಖ್ಯಾತಿ ಮಾಡುವುದಾಗಿದೆ. ಕ್ಯಾಂಪಸ್ ನಲ್ಲಿ ಬೃಹತ್ ಕಟ್ಟಡಗಳು, ಆಡಂಭರದ ಪೂಜೆ ಪುನಸ್ಕಾರಗಳು, ನನ್ನ ಗುರಿಯಲ್ಲ, ಪರಿಸರವೇ ದೇವರು ಎಂಬ ಪರಿಕಲ್ಪನೆ ನನ್ನದು.

 ದ್ರಾಕ್ಷಿ ಕೈಗೆ ಸಿಗದಿದ್ದಾಗ ಹುಳಿ ಎಂಬಂತೆ ಹೇಳಲು ಸಾಧ್ಯಾವಿಲ್ಲ. ಹಾಗಂತ ಕ್ಯಾಂಪಸ್‍ನಲ್ಲಿ  ಏನೂ ಮಾಡುವುದಿಲ್ಲಾ ಎಂಬ ಮಾತಲ್ಲ. ಹಾಗೇಯೇ ಅಗತ್ಯಕ್ಕೆ ತಕ್ಕಂತಹ ಕಾಮಗಾರಿಗಳನ್ನು ಪೂರ್ಣಗೊಳಿಸುವವರೆಗೂ, ನಾವು ಯೋಚನೆ ಮಾಡಿಕೊಂಡು ಸುಮ್ಮನೆ ಕೂರುವ ಹಾಗಿಲ್ಲ.

ಶಕ್ತಿಪೀಠ ಫೌಂಡೇಷನ್‍ನ, ಒಂದುÀ ಚಕ್ರ ಕ್ಯಾಂಪಸ್ ಸ್ಥಾಪನೆಯಾದರೇ, ಇನ್ನೊಂದು ಚಕ್ರ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚು ಅನುದಾನ ಪಡೆದ ರಾಜ್ಯವಾಗಬೇಕು, ಅಭಿವೃದ್ಧಿಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯ ಒದಗಬೇಕು. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿಯಾಗಲೇ ಬೇಕು ಎಂಬುದಾಗಿದೆ.

ಈ ರಥವನ್ನು ನಾನೊಬ್ಬ ಎಳೆಯಲು ಸಾಧ್ಯಾವಿಲ್ಲ, ಸಾವಿರಾರು ಜನರ, ಸಂಘ ಸಂಸ್ಥೆಗಳ, ಪರಿಣಿತರ, ಚುನಾಯಿತ ಜನಪ್ರತಿನಿಧಿಗಳ, ಎಲ್ಲಾ ಇಲಾಖೆಗಳ ಅಧಿಕಾರಿಗಳ, ಆಸಕ್ತರ ಸಹಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು-ದೆಹಲಿಗೆ, ರಾಜ್ಯದ 31 ಜಿಲ್ಲೆಗಳಿಗೂ ನಿರಂತರ ಓಡಾಟದ ಅವಶ್ಯಕತೆಯಿದೆ.

 ನವಿಲು ರೆಕ್ಕೆ ಕುಣಿಸಿದರೆಕೆಂಬಕ್ಕಿ ಪುಕ್ಕ ಹರಿದು ಕೊಂಡಂತೆ ಎಂಬ ಒಂದು ಗ್ರಾಮೀಣ ಮಾತಿದೆ. ಈ ಮಾತು ನನ್ನ ಪರಿಕಲ್ಪನೆ  ಎಂಬ ಭಾವನೆ ನನಗೆ ಹಲವಾರು ಸಮಯದಲ್ಲಿ ಬಂದಿದೆ. ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲೂ ಸಾಧ್ಯ ಎಂಬ ಅರಿವು ಮತ್ತು ಅನುಭವವೂ ಇದೆ.

ಅನುಷ್ಠಾನ ಸಾದ್ಯವಿಲ್ಲ ಎಂಬ ಯೋಜನೆಗೆ ಕೈ ಹಾಕುವುದೇ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಪ್ರವೃತ್ತಿಯಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಗೆಸ್ಟ್‍ಹೌಸ್ ತೆರೆದು, ನಿರಂತರ ಶ್ರಮಹಾಕಲು ಚಿಂತನೆ ನಡೆಸಿರುವ ಬಗ್ಗೆ ವಿವರವಾಗಿ ಹಂಚಿಕೊಳ್ಳಲಾಯಿತು.

 ನೀವೂ ಕ್ಯಾಂಪಸ್ ನಲ್ಲಿ ಆರಂಭಿಸಿರುವ ಪ್ರಥಮ ಕಟ್ಟಡ ಪೂರ್ಣಗೊಳ್ಳುವುದರೊಳಗೆ, ನಾನು ಮತ್ತು ಶ್ರೀ ಗೋವಿಂದಪ್ಪನವರು ಸೇರಿ 1000 ಜಾತಿ ಗಿಡಗಳನ್ನು ಹಾಕಿಯೇ ತೀರುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ತಾಯಿಯ ಅವತಾರದ ವಿಶ್ವಧ್ಯಾಂತ ಇರುವ  108 ಶಕ್ತಿಪೀಠಗಳು ಆಡಿಸಿದಂತೆ, ಆಡುವುದೇ ನನ್ನ ಕೆಲಸ ಎಂದು ಹೇಳಿದ ನಂತರ ಮೌನ. ಕನಿಷ್ಟ ದಿನಕ್ಕೆ ಒಂದು ಗಂಟೆ ಧ್ಯಾನ ಮಾಡಲೇ ಬೇಕು ಎಂಬ ಸಲಹೆ ನೀಡಿ, ಅವರು ಇಲ್ಲಿಂದ ಹೊರಟರು.