22nd December 2024
Share

TUMAKURU:SHAKTHI PEETA FOUNDATION

ಒಂದು ಗ್ರಾಮದ ಕರಾಬುಹಳ್ಳಗಳನ್ನು ಸಂರಕ್ಷಣೆ ಮಾಡುವುದು ಒಂದು ಹರಸಾಹಸ. ಸರ್ಕಾರವೇನೋ ಕಾನೂನು ಮಾಡಿದೆ, ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿರುವವರೆಗೂ  ಜೈಲು ಮತ್ತು ದಂಡ. ಹಾಗೂ ಒತ್ತುವರಿ ನೋಡಿಕೊಂಡು ಸುಮ್ಮನೆ ಇರುವ ಅಧಿಕಾರಿಗಳಿಗೂ ಜೈಲು ಮತ್ತು ದಂಡ.

ನನ್ನ ಬಹಳ ವರ್ಷಗಳ ಕನಸು, ಇದು ಒಂದು ತೊರೆಯಂತಾಗಬೇಕು, ರೈತರ ನೀರಿನ ಭವಣೆ ತಪ್ಪಬೇಕು. ನಾವು ಸಣ್ಣವರಾಗಿದ್ದಾಗ ನೋಡುತ್ತಿದ್ದ ನೀರನ್ನು ಇಲ್ಲಿ ನೋಡಬೇಕು ಎನ್ನುವುದಾಗಿತ್ತು.

ಕುಂದರನಹಳ್ಳಿ ಸೋಪನಹಳ್ಳಿ ಎರಡು ಗ್ರಾಮಗಳಿಗೆ ಸೋಪನಹಳ್ಳಿ ಕೆರೆ ಮತ್ತು ಈ ಕೋಡಿಹಳ್ಳ ಒಂದು ವರದಾನ, ಈ ಹಳ್ಳದಲ್ಲಿ ನೀರು ನಿಂತರೆ ಸುಮಾರು ನೂರಾರು ಬೋರ್‍ವೆಲ್‍ಗಳು ಒಂದು ವಾರದಲ್ಲಿ ರೀಚಾರ್ಜು ಹಾಗುವುದು ಒಂದು ವಿಶೇಷ.

ಕಾವೇರಿ ನೀರಾವರಿ ನಿಗಮದವರು ಸುಮಾರು ರೂ 2 ಕೋಟಿಗೂ ಅಧಿಕ ವೆಚ್ಚದಲ್ಲಿ, ಈ ಹಳ್ಳದ ಅಭಿವೃದ್ಧಿ, ಸೋಪನಹಳ್ಳಿ ಕೆರೆಗೆ, ಕುಂದರನಹಳ್ಳಿ ಕಟ್ಟೆಗಳಿಗೆ, ಈ ಹಳ್ಳದಲ್ಲಿರುವ ಪಿಕ್‍ಅಪ್‍ಗಳಿಗೆ ಹೇಮಾವತಿ ನೀರು ಹಾಗೂ ಮಳೆ ನೀರು ತುಂಬಿಸಿ, ಒಂದು ತೊರೆ ಮಾಡಲು ಮುಂದಾಗಿದ್ದಾರೆ.

ಈ ಕೋಡಿಹಳ್ಳದ ಒತ್ತುವರಿ ಮಾಡಿಕೊಂಡಿರುವವರು ಮನವೊಲಿಸಲು, ಈ ಎರಡು ಗ್ರಾಮಗಳ ಒಂದು ತಂಡ ಸಿದ್ಧತೆ ನಡೆಸಿದೆ. ಯಾವ ಹಂತಕ್ಕೆ ಆದರೂ ಹೋರಾಟ ಮಾಡೋಣ ಎಂಬ ನಿಲುವಿಗೆ ಬಂದಿದ್ದಾರೆ.

ಕಳೆದ ಎರಡು ವರ್ಷ ಮಳೆ ಜಾಸ್ತಿಯಾಗಿ ಜಮೀನುಗಳಿಗೆ, ತೋಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಒತ್ತುವರಿದಾರರ ಮೇಲೆ ಈ ಜನರ ಆಕ್ರೋಶ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಡಿ.ಡಿ.ಎಲ್.ಆರ್ ಗೆ ಪಕ್ಕಾ ಸಮೀಕ್ಷೆ ಮಾಡಿಸಿ, ಕಾಮಗಾರಿ ಮಾಡಲು ಕಾವೇರಿ ನೀರಾವರಿ ನಿಗಮದವರಿಗೆ ನಕ್ಷೆ ಸಹಿತ ಹ್ಯಾಂಡ್ ಓವರ್ ಮಾಡಿ ಎಂದಿದ್ದಾರೆ.

ರೈತರ ಮನವೊಲಿಸಿ ಅಥವಾ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ತುಮಕೂರು ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್ ರವರಿಗೆ ಹಾಗೂ ಗುಬ್ಬಿ ತಹಶೀಲ್ಧಾರ್ ರವರಾದ ಶ್ರೀಮತಿ ಆರತಿರವರಿಗೆ ಸೂಚಿಸಿದ್ದಾರೆ. ತುಮಕೂರು ಎಸ್.ಪಿ ಯವರೂ ಸಹ ಅಗತ್ಯಬಿದ್ದಲ್ಲಿ ಪೋಲೀಸ್ ನೇರವು ನೀಡಲು ಮುಂದಾಗಿದ್ದಾರೆ.

ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಪಕ್ಕಾ ಕಾಮಗಾರಿ ಮಾಡಲು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಗಳು ಸಹ ಈ ಕೋಡಿಹಳ್ಳವನ್ನು ಮಾದರಿ ಯೋಜನೆ ರೂಪಿಸಲು ಮುಂದಾಗಿದ್ದಾರೆ.

ಒತ್ತುವರಿದಾರರು ಸ್ವಯಂ ಆಗಿ ತೆರವುಗೊಳಿಸಲು ಮುಂದಾಗುವರೇ ಕಾದು ನೋಡಬೇಕಿದೆ.