27th July 2024
Share

TUMAKURU:SHAKTHIPEETA FOUNDATION

  ಕುಂದರನಹಳ್ಳಿ-ಅದಲಗೆರೆ ರಸ್ತೆಯ ಇತಿಹಾಸ ಕಳೆದ 50 ವರ್ಷಗಳಿಂದ ಇದೆಯಂತೆ. ಭೂ ಸ್ವಾಧೀನ ಆಗಿರುವ ರಸ್ತೆಯನ್ನು ಅಳತೆ ಮಾಡಿ, ಸರ್ಕಾರದ ಸ್ವಾಧೀನಕ್ಕೆ ಪಡೆಯುವಲ್ಲಿ ಅಂದಿನಿಂದ ಆಡಳಿತ ನಡೆಸಿದ ಗುಬ್ಬಿ ತಾಲ್ಲೋಕು ಆಡಳಿತ ಕೈ ಚೆಲ್ಲಿದೆ. ನರ ಸತ್ತಿದೆ ಎಂದರೆ ತಪ್ಪಾಗಲಾರದು.

ಈಗ ದಿನಾಂಕ:27.10.2022 ರಂದು ಭೂ ಸ್ವಾಧೀನ ಆಗಿರುವ ರಸ್ತೆಯ ಸಮೀಕ್ಷೆ ಮಾಡಲು, ಗುಬ್ಬಿ ತಹಶೀಲ್ಧಾರ್ ರವರು ಸರ್ವೇಯರ್‍ಗೆ ಆದೇಶ ನೀಡಿದ್ದಾರೆ.

  1. ಕುಂದರನಹಳ್ಳಿ ಗ್ರಾಮಠಾಣದ ಗಡಿ ಕಲ್ಲು ಗುರುತಿಸಿ ಗಡಿ ಕಲ್ಲು ಹಾಕಿ.
  2. ತಿಮ್ಮಳಿ ಪಾಳ್ಳ-ಕುಂದರನಹಳ್ಳಿ ಕರಾಬುದಾರಿ ಗಡಿ ಗುರುತಿಸಿ ಗಡಿ ಕಲ್ಲು ಹಾಕಿ.
  3. 2008 ರಲ್ಲಿ ಭೂ ಸ್ವಾಧೀನವಾದ ರಸ್ತೆ ಭಾಗದ ಜಮೀನು ಗುರುತಿಸಿ, ಗಡಿ ಕಲ್ಲು ಹಾಕಿ.
  4. ಮೂರು ನಕ್ಷೆಗಳ ಸಹಿತ ನ್ಯಾಯಾಲಯಕ್ಕೆ ಮಾಹಿತಿ ನೀಡುವುದು ಅಗತ್ಯವಾಗಿದೆ.ಇವೆಲ್ಲಾ ಒಂದೇ ಕಡೆ ರಸ್ತೆಯ ಜಾಗದಲ್ಲಿಯೇ ಇವೆ. ನೆನಪಿರಲಿ.
  5. ರಸ್ತೆಯ ಮೂಲ ಮಾಲೀಕತ್ವದ ಇಲಾಖೆ ಜಿಲ್ಲಾ ಪಂಚಾಯತ್.
  6. 1976 ರಲ್ಲಿ ಭೂ ಸ್ವಾಧೀನ ಮಾಡಿರುವ ಇಲಾಖೆ ಯಾವುದು? ನಮಗಂತೂ ಗೊತ್ತಿಲ್ಲ.
  7. 2008 ರಲ್ಲಿ ಭೂ ಸ್ವಾಧೀನ ಮಾಡಿರುವುದು ಲೋಕೋಪಯೋಗಿ ಇಲಾಖೆ.
  8. ರಸ್ತೆ ನಿರ್ಮಾಣ ಮಾಡುತ್ತಿರುವ ಇಲಾಖೆ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯ ವಿಭಾಗ.
  9. ಗ್ರಾಮಠಾಣದ ವ್ಯಾಪ್ತಿಯು ಇರುವುದರಿಂದ ಮಾರಶೆಟ್ಟಿಹಳ್ಳಿ ಪಿಡಿಓರವರು ಹಾಜರಿ ಇರುವುದು ಒಳ್ಳೆಯದು.

ಪೋಲೀಸ್ ಇಲಾಖೆಯವರು ಇರುವುದು ಒಳ್ಳೆಯದು. ಇದು ಗುಬ್ಬಿ ತಾಲ್ಲೋಕು ಆಡಳಿತಕ್ಕೆ ಕುಂದರನಹಳ್ಳಿ ಗ್ರಾಮಸ್ಥರ ಬಹಿರಂಗ ಮನವಿ. ಕುಂದರನಹಳ್ಳಿ – ಅದಲಗೆರೆ ರಸ್ತೆ ಸುಮಾರು ನಿಟ್ಟೂರು- ಸಂಪಿಗೆ ರಸ್ತೆಯಿಂದ ಹೊರಟು, ಚಿಕ್ಕನಾಯಕನಹಳ್ಳಿ-ಬುಕ್ಕಾಪಟ್ಣ ರಸ್ತೆಗೆ ಸುಮಾರು 30 ಕೀಮೀ ಉದ್ದ ರಸ್ತೆಯಂತೆ. ನೀಖರವಾದ ನಕ್ಷೆಯನ್ನು ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿಕೊಳ್ಳುವುದು ಉತ್ತಮ.

ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ನ್ಯಾಯಾಲಯಕ್ಕೆ ಪಕ್ಕಾ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ, ಯಾರಾದರೂ ಅಡ್ಡಿ ಪಡಿಸಿದರೆ, ವೀಡಿಯೋ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಅಧಿಕಾರಿಗಳ ಕರ್ತವ್ಯ.

ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಓಡಾಡುವ ಜನ ಮೌನವಾಗಿದ್ದು, ಚುನಾಯಿತ ಜನಪ್ರತಿನಿಧಿಗಳನ್ನು  ಬೈದುಕೊಳ್ಳುವುದು ವಾಡಿಕೆ. ಇದು ಹಾಗೆ ಮುಂದುವರೆಯಲಿ.

50 ವರ್ಷಗಳ ಹೋರಾಟದ ರಸ್ತೆಗೆ ಅಂತಿಮ ರೂಪ ಕೊಡುವುರೇ? ಕಾದು ನೋಡಬೇಕು?