22nd December 2024
Share

TUMAKURU:SHAKTHIPEETA FOUNDATION

ಪಿಜೆಸಿಯಲ್ಲಿನ ಲೈಬ್ರರಿ ಹಾಗೂ ಬಯೋಡೈವರ್ಸಿಟಿ ಡಾಟಾ ಬೇಸ್ ನೊಂದಿಗೆ ಮಾಸ್ಟರ್ ಪ್ಲಾನ್ ಮತ್ತು ಪಿಪಿಟಿ ಸಿದ್ಧತೆ ಪಡಿಸಲು ಸಮಾಲೋಚನೆ ನಡೆಸಲಾಯಿತು. ನಿರಂತರವಾಗಿ ನಡೆದ ವಿವಿಧ ಸಭೆಗಳಲ್ಲಿ ಭಾಗವಹಿಸಿದ ಹಲವಾರು ಜನತೆಗೆ, ಆಸಕ್ತಿ ಇರುವ ವಿಷಯಗಳವಾರು ವಿಷನ್ ಗ್ರೂಪ್ ರಚಿಸುವ ಮೂಲಕ ನಿರ್ದಿಷ್ಠ ಹೊಣೆಗಾರಿಕೆಯೊಂದಿಗೆ ಡಾಟಾ ಬೇಸ್ ಸಿದ್ಧಪಡಿಸಲು ಮತ್ತು ಅನುಷ್ಠಾನ ಮಾಡಲು ಚಿಂತನೆ ಆರಂಭವಾಗಿದೆ.

ಹೀಗೆ ಅಗತ್ಯವಿರುವ ಹಾಗೂ ಆಸಕ್ತ ಕುಟುಂಬದವರು ಇಷ್ಟಪಟ್ಟು ಒಪ್ಪುವ ವಿಷನ್ ಗ್ರೂಪ್‍ನೊಂದಿಗೆ, ನಿರಂತರ ಸಂಪರ್ಕಹೊಂದಿ ಮಾಹಿತಿ ಸಂಗ್ರಹ ಮಾಡುವುದು ಅಗತ್ಯವಾಗಿದೆ. ಯಾವ ಕುಟುಂಬ ಯಾವ ವಿಷಯದ ಬಗ್ಗೆ ಅಭಿಪ್ರಾÀಯ ವ್ಯಕ್ತಪಡಿಸಿತ್ತದೆಯೋ, ಆ ವಿಷಯದ ಅನುಷ್ಠಾನ ಸಾದ್ಯಾÀ್ಯತೆ ಸಿದ್ಧಪಡಿಸಿ ಪಿಜೆಸಿ ಮಾಲೀಕರ ಹಾಗೂ ಅಸೋಶಿಯೇಷನ್ ಗಮನಕ್ಕೆ ತಂದು ಮುಂದುವರೆಯಲು ಎಲ್ಲರೂ ಮುಂದಾಗಿದ್ದಾರೆ.

  1. ಪಿಜೆಸಿ ನಿವಾಸಿಗಳಾದ ತುಮಕೂರು ಜಿಲ್ಲೆಯ ಆರ್ಕಿಟೆಕ್ಚರ್ ಶ್ರೀ ನಾರಾಯಣಗೌಡರ ಕುಟುಂಬದವರು ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಎರಡು ಯೋಜನೆಗಳ ಬಗ್ಗೆ ಲೇ ಔಟ್ ಸಿದ್ಧಪಡಿಸಲು ಅರ್ಹರಾಗಿದ್ದಾರೆ.
  2. ಪಿಜೆಸಿ ನಿವಾಸಿಗಳಾದ ಶಿವಮೊಗ್ಗ ಜಿಲ್ಲೆಯ ಶ್ರೀ ತಿಮ್ಮಣ್ಣನವರ ಕುಟುಂಬದವರು ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಮಾನವ ಗ್ರಂಥಾಲಯ, ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಹಾಗೂ ಯೂಟ್ಯೂಬ್ ಆರಂಭದ ಬಗ್ಗೆ ಪರಿಣಿತ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ರೂಪುರೇಷೆಗಳನ್ನು ನೀಡಲು ಅರ್ಹರಾಗಿದ್ದಾರೆ.
  3. ಪಿಜೆಸಿ ನಿವಾಸಿಗಳಾದ ದಾರವಾಡ ಜಿಲ್ಲೆಯ ಶ್ರೀ ಸೂರಿಯವರ  ಕುಟುಂಬದವರು ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ವರ್ಷದ 365 ದಿವಸಗಳ ಕಾರ್ಯಕ್ರಮಗಳ ರೂಪುರೇಷೆ ಹಾಗೂ 3571 ಪ್ಲಾಟ್‍ಗಳ ಕುಟುಂಬಗಳು ಸೇರಿದಂತೆ 365 ದಿನಕ್ಕೂ ಕನಿಷ್ಠ 9 ಕುಟುಂಬಗಳ ಒಂದೊಂದು ವಿಷನ್ ಗ್ರೂಪ್ ಡಾಟಾ ಬೇಸ್ ಸಿದ್ಧಪಡಿಸಲು ಅರ್ಹರಾಗಿದ್ದಾರೆ.
  4. ಪಿಜೆಸಿ ನಿವಾಸಿಗಳಾದ ಹುಬ್ಬಳ್ಳಿ ದಾರವಾಡ ಜಿಲ್ಲೆಯ ಶ್ರೀಮತಿ ಆರತಿ ಕುಲಕರ್ಣಿರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಲೈಬ್ರರಿಯಲ್ಲಿ ಸಂಗ್ರಹ ಮಾಡಬಹುದಾದ ಪುಸ್ತಕಗಳು, ಕಡತಗಳ ಬಗ್ಗೆ ಮಾಹಿತಿ ಸಂಗ್ರಹಿಸಲು  ಅರ್ಹರಾಗಿದ್ದಾರೆ.
  5. ಪಿಜೆಸಿ ನಿವಾಸಿಗಳಾದ ತುಮಕೂರು ಜಿಲ್ಲೆಯ ಶ್ರೀ ವಿಶ್ವನಾಥ್ ರವರ ಕುಟುಂಬದವರು ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿ ಆವರಣದ  ಬಯೋಡೈವರ್ಸಿಟಿ ಡಾಟಾ ಬೇಸ್ ಸಿದ್ಧಪಡಿಸಲು ಅರ್ಹರಾಗಿದ್ದಾರೆ.
  6. ಪಿಜೆಸಿ ನಿವಾಸಿಗಳಾದ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಪ್ಪನವರ ಕುಟುಂಬದವರು ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ 3571 ಪ್ಲಾಟ್ ಗಳ ಮಾಲೀಕರು ಹಾಗೂ ಬಾಡಿಗೆದಾರರ ಜಿಲ್ಲಾವಾರು, ರಾಜ್ಯವಾರು ಹಾಗೂ ದೇಶಗಳವಾರು ಡಾಟಾ ಬೇಸ್ ಸಿದ್ಧಪಡಿಸಲು ಅರ್ಹರಾಗಿದ್ದಾರೆ.
  7. ಪಿಜೆಸಿ ನಿವಾಸಿಗಳಾದ ಚಿಕ್ಕಮಂಗಳೂರು ಜಿಲ್ಲೆಯ ಶ್ರೀಮತಿ ಸ್ಮಿತಾರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ ಆವರಣದಲ್ಲಿ ಇನ್ನೂ ಯಾವ ಗಿಡಗಳನ್ನು ಹಾಕಬೇಕು ಎಂದು ವಿಷನ್ ಗ್ರೂಪ್ ಸಿದ್ಧಪಡಿಸಿ ವರದಿ ನೀಡಿದ ನಂತರ ಅಗತ್ಯವಿರುವ ಗಿಡಗಳನ್ನು ಸಂಗ್ರಹ ಮಾಡಲು  ಅರ್ಹರಾಗಿದ್ದಾರೆ.
  8. ಪಿಜೆಸಿ ನಿವಾಸಿಗಳಾದ ತಮಿಳುನಾಡಿನ ಶ್ರೀ ರಾಜೇಶ್ ರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ ಆವರಣದಲ್ಲಿ ಇನ್ನೂ ಯಾವ ಗಿಡಗಳನ್ನು ಹಾಕಬೇಕು ಎಂದು ವಿಷನ್ ಗ್ರೂಪ್ ಸಿದ್ಧಪಡಿಸಿ ವರದಿ ನೀಡಿದ ನಂತರ, ಇನ್ನೊಂದು ವಿಷನ್ ಗ್ರೂಪ್ ನವರು ಅಗತ್ಯವಿರುವ ಗಿಡಗಳನ್ನು ಸಂಗ್ರಹ ಮಾಡಿದ ನಂತರ ಗಿಡಗಳನ್ನು ಹಾಕಿಸಲು  ಅರ್ಹರಾಗಿದ್ದಾರೆ.
  9. ಪಿಜೆಸಿ ನಿವಾಸಿಗಳಾದ — ಜಿಲ್ಲೆಯ ಶ್ರೀಮತಿ—–ರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ ಆವರಣದಲ್ಲಿ  ಸಾವಯವ ತರಕಾರಿ, ಉತ್ತಮತಳಿಯ ಹಾಲು ಮಾರಾಟ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು  ಅರ್ಹರಾಗಿದ್ದಾರೆ.
  10. ಪಿಜೆಸಿ ನಿವಾಸಿಗಳಾದ ಚಿಕ್ಕಮಂಗಳೂರು ಜಿಲ್ಲೆಯ ಶ್ರೀರಜನಿಕಾಂತ್ ರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ ಆವರಣದಲ್ಲಿ  ರೈತರು ಉತ್ಪನ್ನಗಳನ್ನು ನೇರವಾಗಿ ಪಿಜೆಸಿ ಆವರಣದಲ್ಲಿ ಮಾರಾಟ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು  ಅರ್ಹರಾಗಿದ್ದಾರೆ.
  11. ಪಿಜೆಸಿ ನಿವಾಸಿಗಳಾದ ಗುಲ್ಬರ್ಗ ಜಿಲ್ಲೆಯ ಶ್ರೀ ಶೇಖಪ್ಪರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಪಿಜೆಸಿಯ ಆವರಣದಲ್ಲಿನ  ಲ್ಯಾಂಡ್ ಯೂಸ್ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಲು  ಅರ್ಹರಾಗಿದ್ದಾರೆ.
  12. ಪಿಜೆಸಿ ನಿವಾಸಿಗಳಾದ ತಮಿಳುನಾಡಿನ ಶ್ರೀ ಕೃಷ್ಣಮೂರ್ತಿರವರ ಕುಟುಂಬದವರು  ಆಸಕ್ತ 9 ಕುಟುಂಬಗಳ ವಿಷನ್ ಗ್ರೂಪ್‍ನೊಂದಿಗೆ/ತಂಡದೊಂದಿಗೆ, ಆಗತಾನೆ ಹುಟ್ಟಿದ ಮಕ್ಕಳಿಂದ ಆರಂಭಿಸಿ  ಹಿರಿಯ ನಾಗರೀಕರವರೆಗೆ ಪಿಜೆಸಿಯಲ್ಲಿ ಏನೇನು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಮಾಹಿತಿ ಸಂಗ್ರಹ ಮಾಡಲು ಅರ್ಹರಾಗಿದ್ದಾರೆ.

ಸುಮಾರು 9 ವಿಷನ್ ಗ್ರೂಪ್‍ಗಳ 108 ಕುಟುಂಬಗಳು ಕುಳಿತು ಚರ್ಚೆ ಮಾಡಿದ ನಂತರ ಕರಾರುವಕ್ಕಾಗಿ, ಪ್ರತಿಯೊಂದು ವಿಷನ್ ಗ್ರೂಪ್‍ಗೆ ಹೊಣೆಗಾರಿಕೆ ನೀಡುವ ಕಾರ್ಯಕ್ರಮ ನಡೆಯುವುದು ಸೂಕ್ತವಾಗಿದೆ.

ವಿಷಯವಾರು ನಿರಂತರವಾಗಿ ಇಂಥಹ ವಿಷನ್ ಗ್ರೂಪ್‍ಗಳು ರಚನೆಯಾಗುತ್ತಲೇ ಇರಬೇಕಾಗುತ್ತದೆ. ಪಿಜೆಸಿ ನಿವಾಸಿಗಳು ದೇಶದ ಪ್ರಧಾನಿಯವರು ಹಾಗೂ ವಿರೋಧ ಪಕ್ಷಗಳ ನಾಯಕರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷಗಳ ನಾಯಕರು ಗಮನಿಸುವಂತಹ ಕಾರ್ಯಕ್ರಮಗಳ ಜಾರಿಗೆ ಮುಂದಾಗಲಿದ್ದಾರೆ ಎಂಬ ಭಾವನೆ ನನ್ನದಾಗಿದೆ.

ಪಿಜೆಸಿ ನಿವಾಸಿಗಳ ಅಭಿರುಚಿಗೆ ತಕ್ಕಂತಹ ಅಭಿಪ್ರಾಯ ಸಂಗ್ರಹ ಮಾಡಲು ಆಸಕ್ತರು ಸಲಹೆ ನೀಡಬಹುದಾಗಿದೆ.