22nd December 2024
Share

TUMAKURU:SHAKTHIPEETA FOUNDATION

ನನ್ನ ಮನವಿಗೆ ಓಗೊಟ್ಟು ಹಲವಾರು ಜನ ಶಕ್ತಿಭವನದ ಪ್ಲಾನ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುವ ನನ್ನ ಆತ್ಮೀಯ ಸ್ನೇಹಿತರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಪರಿಕಲ್ಪನೆ ಪ್ಲಾನ್ ಅನ್ನು ದಿನಾಂಕ:28.10.2022 ರಂದು ಭೂಮಿ ಪೂಜೆ ಮಾಡುವಾಗ ಬ್ರಹ್ಮ ಸ್ಥಾನದಲ್ಲಿ ಇಟ್ಟು ಪೂಜೆ ಮಾಡಲಾಗಿದೆ.

ಅಂತಿಮ ಪ್ಲಾನ್ ಅನ್ನು ದಿನಾಂಕ:10.11.2022 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿನ ಶ್ರೀ ವೈಷ್ಣವಿ ಮಾತೆಯ ಸನ್ನಿಧಿಯಲ್ಲಿಟ್ಟು ಪೂಜಿಸಿದ ನಂತರ, ಶಕ್ತಿಭವನ ಕಟ್ಟಡದ ಕಾಮಗಾರಿಯನ್ನು ಅಧಿಕೃತವಾಗಿ ಆರಂಭಿಸಲಾಗುವುದು. ಅಷ್ಟರೊಳಗೆ ಎಲ್ಲಾ ಎಂ.ಓ.ಯುಗಳನ್ನು ಮಾಡಿಕೊಳ್ಳಲಾಗುವುದು.

ಎಲ್ಲರ ಅಭಿಪ್ರಾಯ, ಸಲಹೆಗಳ ಜೊತೆಗೆ, ನನ್ನ ಮನದಾಳದ ಅನಿಸಿಕೆಯಂತೆ ಯಾವುದೇ ಕಾರಣಕ್ಕೂ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆ ಮಾಡುವುದು ಬೇಡ ಎಂಬ ದೃಢ ನಿರ್ಧಾರಕ್ಕೆ ಬರಲಾಗಿದೆ.

 ಶಕ್ತಿಭವನದ ಅಕ್ಕ-ಪಕ್ಕ ಇರುವ ಎರಡು ಕಟ್ಟಡಗಳು ಸೆಟ್ ಬ್ಯಾಕ್ ನಿಯಮ ಉಲ್ಲಂಘಿಸಿದ್ದರೂ, ಇಡೀ ದೇಶದಲ್ಲಿನ ಶೇ 99 ರಷ್ಟು ಕಟ್ಟಡಗಳು ಸೆಟ್ ಬ್ಯಾಕ್ ನಿಯಮ ಉಲ್ಲಂಘಿಸಿದ್ದರೂ, ಶಕ್ತಿಭವನ ಕಟ್ಟಡಕ್ಕೆ ಮುಂದಿನ ಮತ್ತು ಹಿಂದಿನ ರಸ್ತೆಗಳಿಗೆ ತಲಾ 5 ಅಡಿ ಹಾಗೂ ಅಕ್ಕ-ಪಕ್ಕದಲ್ಲಿ 3 ಅಡಿ ಜಾಗವನ್ನು ಕಡ್ಡಾಯವಾಗಿ ಬಿಟ್ಟು, 1580 ಚದುರ ಅಡಿ ನಿವೇಶನದಲ್ಲಿ, ಕೇವಲ 930 ರಿಂದ 961 ಚದುರ ಅಡಿಯೊಳಗೆ, ಆಯಾ ಮತ್ತು ವಾಸ್ತು’ ಪ್ರಕಾರ ಕಟ್ಟಡ ನಿರ್ಮಾಣ ಮಾಡಲಾಗುವುದು.

ಕಟ್ಟಡದ ಎತ್ತರದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಂತದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು.ಈಗಾಗಲೇ ನಿವೇಶನದ ಮೌಲ್ಯಮಾಪನ ನಡೆದಿದೆ. ಭೂಮಿಯಲ್ಲಿ ಯಾವುದೇ ಕರಾಬು/ರಾಜ ಕಾಲುವೆ ಇಲ್ಲ, ಯಾವುದೇ ದಾರಿ ಕರಾಬು ಇಲ್ಲ, ಒತ್ತುವರಿ ಯಾಗಿಲ್ಲ ಎಂಬ ಖಚಿತ ಮಾಹಿತಿ ಪಡೆಯಲಾಗಿದೆ.

ನಿವೇಶನ ವಾಸ್ತು ಪ್ರಕಾರ ಸರಿಯಾಗಿ ಇಲ್ಲ, ಪೂರ್ವ ದಿಕ್ಕಿಗೆ ನೀರು ಹರಿಯ ಬೇಕಂತೆ, ಉಲ್ಟಾ ಪಶ್ಚಿಮ ದಿಕ್ಕಿಗೆ ನೀರು ಹರಿಯಲಿದೆ. ನೈರುತ್ಯದಲ್ಲಿ ನಿವೇಶನ ಬೆಳೆದಿದೆ, ಉತ್ತರ ಈಶಾನ್ಯದಲ್ಲಿ ನಿವೇಶನ ಬೆಳದರೆ ಒಳ್ಳೆಯದಂತೆ, ಅದಕ್ಕೆ ನಿವೇಶನದಲ್ಲಿ ಮಾತ್ರ ವಾಸ್ತುವಿಗೆ ಒತ್ತು ನೀಡಲಾಗಿದೆ.

108 ಶಕ್ತಿದೇವತೆಗಳ, 12 ಜ್ಯೋತಿರ್ಲಿಂಗಗಳ, ಮೂರು ಸಾಯಿಬಾಬಾ ರವರ, ಅಷ್ಟ ದಿಕ್ಪಾಲರ, ನವಗ್ರಹಗಳ ಜೊತೆಗೆ ಇನ್ನೂ ಆನೇಕ ಪ್ರಾತ್ಯಕ್ಷಿಕೆಗಳ ಶಕ್ತಿಪೀಠ ಮ್ಯೂಸಿಯಂ ಮಾಡುವುದರಿಂದ ವಾಸ್ತು ಹಾಗೂ ಆಯಾ ಕ್ಕೆ ತಲೆ ಕೆಡಿಸಿಕೊಳ್ಳುವುದು ಅಗತ್ಯವಿಲ್ಲವಂತೆ.

ಆದರೂ ನಿವೇಶನದ ಒಳಭಾಗದಲ್ಲಿ, ಆಯಾ ಹಾಗೂ ವಾಸ್ತುವಿಗೂ ಒತ್ತು ನೀಡಲಾಗಿದೆ. ಶಕ್ತಿಪೀಠ ಫೌಂಡೇಷನ್ ನ ಪರಿಕಲ್ಪನೆಯ ಸಾಧಕ-ಭಾದಕಗಳ ‘ಜ್ಞಾನ ಭಂಢಾರ ಶಕ್ತಿಭವನ ವಾಗಲಿದೆ.

ಸಲಹೆಗಳಿಗಾಗಿ ಮತ್ತೊಮ್ಮೆ ಬಹಿರಂಗ ಮನವಿ.