22nd December 2024
Share

TUMKURU:SHAKTHIPEETA FOUNDATION

  ಯಾವುದೇ ಮಾತುಕತೆ ಪೂರ್ಣವಾಗದೇ, ಶಕ್ತಿಪೀಠ ಫೌÀಂಡೇಷನ್ ಸಿಇಓ ಚಿ.ಕೆ.ಆರ್.ಸೋಹನ್ ರವರು ಜಮ್ಮು ಮತ್ತು ಕಾಶ್ಮೀರದ ಶ್ರೀ ವೈಷ್ಣವಿ ದೇವಿ ಅಮ್ಮನವರ ಮೂರನೇ ಭಾರಿ ದರ್ಶನ ಪಡೆದ ದಿವಸ ಅಂದರೆ, ದಿನಾಂಕ:10.11.2022 ರಂದು ತುಮಕೂರು ನಗರದ, ಜಯನಗರ ಪೂರ್ವದಲ್ಲಿ ಶಕ್ತಿಪೀಠ ಮ್ಯೂಸಿಯಂ ಕಟ್ಟಡ ಆರಂಭವಾಗಿದೆ ಎಂದು ಶಕ್ತಿಪೀಠ ಫ್ಯಾಮಿಲಿಗೆ ತಿಳಿಸಲು ಹರ್ಷಿಸುತ್ತೇನೆ.

ಶ್ರೀ ಹರೀಶ್ ರವರು ಕಟ್ಟಡದ ಎಲ್ಲಾ ಸಂಪೂರ್ಣ ಹೊಣೆಗಾರಿಕೆ ಪಡೆದು ಕೊಂಡು, ಪ್ರತಿಯೊಬ್ಬರ ಸಹಕಾರ ಪಡೆದು ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದಾರೆ.

  ನಾವು ಯಾರು ಕೂಡ ಮಾತಾಡಿಕೊಂಡಿಲ್ಲ, ಇನ್ನೂ ಎಲ್ಲಾ ಚರ್ಚೆಯ ಹಂತದಲ್ಲಿ ಇದೆ, ಆದರೂ ಯಾರ ಮಾತು ಕೇಳದೇ ಕಾಮಗಾರಿ ತಾನೇ ತಾನಾಗಿ ಆರಂಭವಾಗಿದೆ. ನಾನು ಕಟ್ಟಡದ ಕೆಲಸ ಮಾಡುವ ಶ್ರೀ ಮಲ್ಲಿಕಾರ್ಜುನರವರನ್ನು ಕೇಳಿದೆ, ಮಾತುಕತೆ ಪೂರ್ಣವಾಗಿಲ್ಲ, ನಾನು ಲೇಬರ್ ಗುತ್ತಿಗೆ ನೀಡುವುದೋ ಅಥವಾ ಮೆಟಿರಿಯಲ್ ಗುತ್ತಿಗೆ ನೀಡುವುದೋ, ಎಂಬ ಚರ್ಚೆಯ ಹಂತದಲ್ಲಿ ಇರುವಾಗಲೇ ಹೀಗೆ ಶುರು ಮಾಡಿದ್ದಿಯಲ್ಲ, ಇದು ಸರಿನಾ ಎಂದಾಗ ಆತ ಹೇಳಿದ್ದು, ದೇವಿಯ ಕೆಲಸ, ಮಾಡಬೇಕು ಎನ್ನಿಸಿದೆ, ಮಾಡಿದ್ದೇನೆ ಸಾರ್.

ನೀವೂ ನನಗೆ ಬಹಳ ವರ್ಷದ ಪರಿಚಯವಲ್ಲ ಸರಿ, ಆದರೇ  ಶಕ್ತಿಪೀಠ ಕ್ಯಾಂಪಸ್ ನಲ್ಲಿ ಕೆಲಸ ಆರಂಭಿಸಿದ ನನಗೆ, ನಿಮ್ಮ ವಿಷನ್ ನೋಡಿ, ಈ ಕೆಲಸವನ್ನು ಮಾಡಲೇ ಬೇಕು ಎನಿಸಿದೆ. ನೀವೂ ಎಷ್ಟೇ ಕೂಲಿ ಕೊಡಿ, ನಿಮ್ಮ ಇಂಜಿನಿಯರ್ ತಂಡ ಹೇಳಿದ ಹಾಗೆ, ನೀವೂ ಲೋಕಾರ್ಪಣೆಗೆ ನಿಗದಿ ಪಡಿಸಿಕೊಂಡಿರುವ ಮುಂದಿನ ನವರಾತ್ರಿ ವೇಳೆಗೆ ಪೂರ್ಣಗೊಳಿಸಬೇಕಾದರೇ, ಒಂದೊಂದು ದಿವಸವೂ ನನಗೆ ಮುಖ್ಯ ಸಾರ್.

ಪಾಯದಿಂದ ಆರಂಭಿಸಿ, ತುತ್ತ ತುದಿಯವರಿಗೆ ಬೇಗ ಪ್ಲಾನ್ ನೀಡಿ, ನಾನು ನೀಡಿರುವ ರೀತಿ ಎಲ್ಲಾ ಕಾಮಗಾರಿಗಳ ಡ್ರಾಯಿಂಗ್, ಪ್ರಂಟ್ ಎಲಿವೇಷನ್, ಪ್ಲಿಂಥ್ ಹೈಟ್ ನೀಡಿ, ಪ್ರತಿ ದಿವಸ ಕೆಲಸ ಮಾಡುವ ಕಾರ್ಮಿಕರಿಗೆ, ಯಾವುದೇ ಕಾರಣಕ್ಕೂ ತಪ್ಪದೇ, ಪ್ರತಿ ಶನಿವಾರ ಕೂಲಿಗೆ ವ್ಯವಸ್ಥೆ ಮಾಡಿ, ಸಂಪೂರ್ಣ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿದ ನಂತರ ಶೇ 20 ರಷ್ಟು ಹಣವನ್ನು ಉಳಿಸಿಕೊಂಡು ಪಾವತಿ ಮಾಡಿ ಪರವಾಗಿಲ್ಲ.

ನನ್ನ ಪಾಲಿನ ಹಣವನ್ನು ಕಾಮಗಾರಿವಾರು, ಶೇಕಡವಾರು 8-10 ಭಾರಿ ನೀಡಿ. ಕೆಲಸ ಆದಮೇಲೆ ನೀವೇ ನನ್ನನ್ನು ಕರೆದು ಟಿಪ್ಸ್ ಕೊಡುತ್ತೀರಿ, ಅದು ನಿಮ್ಮಿಷ್ಟ ಎಂದು ಪಟ ಪಟನೆ ಪುಸ್ತಕದಲ್ಲಿ ಬರೆದು ಬೇಗ ಅಗ್ರಿಮೆಂಟ್ ಮಾಡಿಕೊಳ್ಳಿ ಸಾರ್.

ಈ ಕೆಲಸದಲ್ಲಿ ಹಣ ಮುಖ್ಯವಲ್ಲ, ಕಾಯಕ ಮುಖ್ಯ, ಶಕ್ತಿ ದೇವತೆಯ ಕೆಲಸ, ನೀವೂ ಇಷ್ಟೊಂದು ಶ್ರಮ ಹಾಕುವಾಗ, ನಮ್ಮ ಸೇವೆ ಬೇಡವಾ ಸಾರ್, ಎಂದಾಗ ನನಗೆ ನಿಜವಾಗಲೂ ಶಾಕ್. ಮುಂದಿನ ವಾರ ಎಂ.ಓ.ಯು ಅಂತಿಮಗೊಳಿಸಲೇ ಬೇಕು. ಕಳೆದ ಒಂದು ವಾರ ನನಗೆ ಇ-ಪೇಪರ್ ಬರೆಯಲು ಸಮಯದ ಅಭಾವ, ಆರೋಗ್ಯ ಏರುಪೇರು ಆದರೂ, ಇಂದು 12.11.2022 ರಂದು ಆತ ಹೇಳಿದ ಮಾತು ನಿಜಕ್ಕೂ ಪ್ರಶ್ನಾರ್ಹವಾಗಿದೆ.

ದೇವರ ಆಟ ಬಲ್ಲವರಾರು?