27th July 2024
Share

TUMAKURU:SHAKTHIPEETA FOUNDATION

ಬೆಂಗಳೂರಿನಲ್ಲಿ ಬಹುತೇಕ ಶಕ್ತಿಪೀಠಗಳಿರುವ ಎಲ್ಲಾ ದೇಶಗಳ, ಎಲ್ಲಾ ರಾಜ್ಯಗಳ ಜನ ನಿವಾಸಿಗಳಾಗಿದ್ದಾರೆ. ಅವರಲ್ಲಿ ಶಕ್ತಿಪೀಠ ಮಾಹಿತಿ ಇರುವವರನ್ನು ಗುರುತಿಸಿ, ಆಯಾ ರಾಜ್ಯದ, ದೇಶದ ನಿಖರವಾದ ಮಾಹಿತಿ ಪತ್ತೆಹಚ್ಚಲು ಶ್ರಮಿಸಲು ಉದ್ದೇಶಿಸಲಾಗಿದೆ.

ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಬಹುತೇಕ ರಾಜ್ಯಗಳ ಜನರು ಇದ್ದಾರೆ. ಪಿಜೆಸಿ ಅಡ್ ಹಾಕ್ ಕಮಿಟಿ/ಅಸೋಶಿಯೇಷನ್, ಪ್ರಿಸ್ಟೇಜ್ ಕಂಪನಿ, ಜಿಂದಾಲ್ ಸಂಸ್ಥೆಗಳ ಸಹಭಾಗಿತ್ವದಲ್ಲಿ  ಶಕ್ತಿಪೀಠಗಳು ಇರುವ ಎಲ್ಲಾ ರಾಜ್ಯಗಳ ನಿವಾಸಿಗಳ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ.

ವಿಶ್ವದಲ್ಲಿ 51 ಅಕ್ಷರಪೀಠಗಳು, 72 ಶಕ್ತಿಪೀಠಗಳು, 108 ಶಕ್ತಿಪೀಠಗಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಾರೆ.

ಹೀಗೆ ಗೊಂದಲವೋ ಗೊಂದಲ. ನಿಖರವಾದ ಮಾಹಿತಿಗೆ ನಿಮ್ಮ ಸಹಕಾರ ಬಹಳ ಮುಖ್ಯ ನೀವೂ ಕೈಜೋಡಿಸಿ.

ಅಗತ್ಯವಿರುವವರಿಗೆ ಬಹಳಷ್ಟು ಜನರ ಸಂಶೋಧನೆ ಮಾಡಿರುವ ಪಟ್ಟಿಯನ್ನು ನೀಡಲಾಗುವುದು. ಕೇಳಿ ಪಡೆಯಿರಿ, ಪರ-ವಿರೋಧ ಚರ್ಚೆ ಮಾಡೋಣ.

ನನಗೆ ಖುಷಿಯಾಗಿದ್ದು ಇಲ್ಲಿನ ನಿವಾಸಿಗಳಲ್ಲಿ ಬಹಳಷ್ಟು ಜನ ಶಕ್ತಿಪೀಠಗಳ ಬಗ್ಗೆ ತಿಳಿದವರೂ ಇದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಅವರವರ ಜ್ಞಾನ ಪರಿಚಯವಾಗಿದೆ.

ಶಕ್ತಿಪೀಠ ಹಿನ್ನಲೆ: ಸತಿ ಶಿವನ ಪತ್ನಿ, ಸತಿ ದಕ್ಷಬ್ರಹ್ಮನ ಪುತ್ರಿ, ದಕ್ಷಬ್ರಹ್ಮ ಯಜ್ಞ ಮಾಡುವಾಗ ಸತಿಗೆ ಅವಮಾನ ಮಾಡಿದ. ಇದರಿಂದ ನೊಂದ ಸತಿ ಯಜ್ಞ ಕುಂಡಕ್ಕೆ ಬಿದ್ದಳು. ಸುಟ್ಟ ಸತಿಯ ದೇಹವನ್ನು ಹೊತ್ತು ಈಶ್ವರನು ಇಹ ಪರಗಳ ಪರಿವೆಯಿಲ್ಲದೆ ಸಂಚರಿಸುವಾಗ,  ಹೆದರಿದ ದೇವತೆಗಳು ಮಹಾವಿಷ್ಣುವಿನ ಮೊರೆಹೋದರು.

  ಆಗ ವಿಷ್ಣುವು ಸುದರ್ಶನ ಚಕ್ರದಿಂದ ಸತಿ ದೇಹವನ್ನು ಛಿದ್ರ-ಛಿದ್ರ ಮಾಡಿದ. ಇದರಿಂದ ದೇಹವು ರಕ್ತದ ಕಣಗಳು ಸೇರಿದಂತೆ ಸುಮಾರು 6400 ಭಾಗಗಳಾಗಿ ವಿಶ್ವದ್ಯಾಂತ ಬಿದ್ದಿದ್ದು, ಅದರಲ್ಲಿ 108 ಕ್ಷೇತ್ರಗಳು ಪ್ರಾಮುಖ್ಯತೆ ಪಡೆದಿವೆ ಎಂಬ ಇತಿಹಾಸವಿದೆ, ಈ  ಸ್ಥಳಗಳೇ ಶಕ್ತಿಪೀಠಗಳಾಗಿವೆ ಎಂಬುದು ಐತಿಹ್ಯ, 

108 ಶಕ್ತಿಪೀಠಗಳಲ್ಲಿ,

9 ನವದುರ್ಗೆಯರು,

4 ಆದಿ ಶಕ್ತಿಪೀಠ,

18 ಮಹಾಶಕ್ತಿಪೀಠ,

51 ಅಕ್ಷರ ಪೀಠಗಳು,

ಇತರೆ 57 ಉಪ ಪೀಠಗಳು ಎಂಬುದು ನಂಬಿಕೆ.

ಭಾರತ ದೇಶದಲ್ಲಿ-41 ಅಕ್ಷರ ಪೀಠಗಳು,

ಬಾಂಗ್ಲಾದೇಶದಲ್ಲಿ-4,

ನೇಪಾಳದಲ್ಲಿ-2,

ಪಾಕಿಸ್ತಾನದಲ್ಲಿ-1,

ಆಪ್ಘನಿಸ್ಥಾನದಲ್ಲಿ-1

ಶ್ರೀಲಂಕಾದಲ್ಲಿ-1

ಚೀನಾ/ಟಿಬಿಟ್‍ನಲ್ಲಿ -1

ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು/ಉಪಶಕ್ತಿಪೀಠಗಳು  ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿವೆ. ಅವುಗಳ ಸ್ಥಳ ಮತ್ತು ಎಲ್ಲಾ ಮಾಹಿತಿಗಳ ಸಂಗ್ರಹ ಕಾರ್ಯ ಹಾಗೂ ಅಧ್ಯಯನ ಆರಂಭಿಸಲಾಗಿದೆ.

 ಆದಿಶಕ್ತಿಯನ್ನು ಈ ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಜನಾಂಗದವರೂ ಆರಾಧಿಸುತ್ತಾರೆ ಕಾಲೋನಿಗಳಲ್ಲಿ ಶ್ರೀ ಕೆಂಪಮ್ಮ, ಶ್ರೀ ಮಾರಮ್ಮ ಎಂದು ಕರೆದರೆ, ಹಣವಂತರೂ ಶ್ರೀ ಕನಕಲಕ್ಮಿ ಎಂತಲೂ, ಬುದ್ದಿವಂತರೂ ಶ್ರೀ ಶಾರದಾಂಬೆ ಎಂತಲೂ, ಶರಣರು ಪಾರ್ವತಿ ಎಂತಲೂ, ಮುಸ್ಲಿಂ ಜನಾಂಗದವರು ಶ್ರೀ ಡೋಲಾಮಾತೆ ಎಂತಲೂ ಕರೆಯುತ್ತಾರೆ ಎಂಬ ಮಾತಿದೆ.

 ಪ್ರಗತಿಪರರು ಸಹ ನೀರನ್ನು ಶ್ರೀ ಗಂಗಾಮಾತೆ ಎಂದು ಒಪ್ಪುತ್ತಾರೆ, ಅರ್ಥಾತ್ ಎಲ್ಲರೂ ಪೂಜಿಸುವ ಏಕೈಕ ದೇವತೆ, ದೇವಿಗೆ ಹೆಸರು ಆನೇಕ, ಆದರೂ ಸತಿ ಒಬ್ಬಳೇ, ಭಕ್ತಿ ಮತ್ತು ಆರಾಧನೆ ಒಂದೇ. ನಿಖರವಾದ ಮಾಹಿತಿ ಬಹಳಷ್ಟು ಗೊಂದಲದಲ್ಲಿದೆ.

  ಶಕ್ತಿಪೀಠಗಳಿಗೂ ನೀರಿಗೂ/ಗಂಗಾಮಾತೆಗೂ ಇರುವ ಸಂಬಂಧಗಳ ಅಧ್ಯಯನ ಪ್ರಮುಖವಾಗಿದೆ.

ಒಂದು ಅಂದಾಜಿನ ಪ್ರಕಾರ

  1. ಜಮ್ಮು ಮತ್ತು ಕಾಶ್ಮೀರ-4
  2. ಹಿಮಾಚಲ-4
  3. ಉತ್ತರಖಾಂಡ್-12
  4. ಉತ್ತರಪ್ರದೇಶ-6
  5. ಬಿಹಾರ-3
  6. ಜಾರ್ಖಂಡ್-1
  7. ಪಶ್ಚಿಮಬಂಗಾಳ-16
  8. ಅಸ್ಸಾಂ-2
  9. ಮೇಘಾಲಯ-1
  10. ತ್ರಿಪುರ-1
  11. ಒಡಿಸ್ಸಾ-5
  12. ಆಂದ್ರಪ್ರದೇಶ-9
  13. ತೆಲಂಗಾಣ-1
  14. ತಮಿಳುನಾಡು-7
  15. ಕರ್ನಾಟಕ-7
  16. ಮಹಾರಾಷ್ಟ್ರ-6
  17. ಮದ್ಯಪ್ರದೇಶ್-5
  18. ಛತ್ತೀಸ್ ಗ್ರಹ್-3
  19. ಗುಜರಾತ್-4
  20. ರಾಜಸ್ಥಾನ್-2
  21. ಹರ್ಯಾಣ-1
  22. ಪಂಜಾಬ್-1
  23. ಪಾಕಿಸ್ಥಾನ-2
  24. ಆಪ್ಘಾನಿಸ್ಥಾನ-1
  25. ಶ್ರೀಲಂಕಾ-2
  26. ಬಾಂಗ್ಲಾದೇಶ-6
  27. ಭೂತಾನ್-1
  28. ಟಿಬೆಟ್-1
  29. ನೇಪಾಳ 2/3