9th October 2024
Share

TUMAKURU:SHAKTHI PEETA FOUNDATION

ದಿನಾಂಕ:05.12.2022 ರಂದು ಹನುಮಜಯಂತಿ ದಿವಸ, ಬೆಂಗಳೂರಿನ ಪಿಜೆಸಿಯ ರೀಡಿಂಗ್ ರೂಂನಲ್ಲಿ ಶಕ್ತಿಪೀಠ ಕ್ಯಾಂಪಸ್-ಮ್ಯೂಸಿಯಂ–ಸಂಶೋಧನೆ ಮತ್ತು ಅಭಿವೃದ್ಧಿ ಬಗ್ಗೆ ವಿವರವಾದ ಚರ್ಚೆ ನಡೆಯಿತು.ತುಮಕೂರಿನ ಶಕ್ತಿಪೀಠ ಫೌsÀ0ಡೇಷನ್ ಉದ್ದೇಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಮೊದಲನೇ ಹಂತದಲ್ಲಿ ವಿಶ್ವದ 108 ಶಕ್ತಿಪೀಠಗಳು  ಹಾಗೂ ನೀರಿಗೆ(ಗಂಗಾಮಾತೆಯ) ಇರುವ ಸಂಬಂದಗಳ ವೈಜ್ಞಾನಿಕ ಡಿಜಿಟಲ್ ದಾಖಲೆ ಮಾಡಲು  ನಿರ್ಣಯ ಕೈಗೊಳ್ಳಲಾಯಿತು. ಶಕ್ತಿದೇವತೆಯ ಕೆಲಸಕ್ಕೆ ಕೈಜೋಡಿಸಲು ಆಸಕ್ತಿ ಇರುವ ಪಿಜೆಸಿ ನಿವಾಸಿಗಳ ಡಿಜಿಟಲ್ ಡೈರಕ್ಟರಿ ಸಿದ್ಧಪಡಿಸಲು ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

  1. ಶಕ್ತಿಪೀಠ ಕ್ಯಾಂಪಸ್: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ,  ಬಗ್ಗನಡು ಕಾವಲ್‍ನಲ್ಲಿ  ಆರಂಭಿಸಿರುವ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಏನೇನು ಬರಲಿದೆ, ಏಕೆ ಬರಲಿದೆ, ಹೇಗೆ ಬರಲಿದೆ ಎಂಬ ಬಗ್ಗೆ ಒಂದು ಪಿಪಿಟಿ ಪ್ರದರ್ಶನ ಮಾಡುವುದು.
  2. ಶಕ್ತಿಪೀಠ ಮ್ಯೂಸಿಯಂ: ಉದ್ದೇಶಿತ ಶಕ್ತಿಪೀಠ ಮ್ಯೂಸಿಯಂನಲ್ಲಿ ಏನೇನು ಸಂಗ್ರಹಮಾಡಬೇಕು, ಹೇಗೆ ಮಾಡಬೇಕು, ಎಲ್ಲಿಂದ ತರಬೇಕು, ಏಕೆ ತರಬೇಕು ಎಂಬ ಬಗ್ಗೆಯೂ ಒಂದು ಪಿಪಿಟಿ ಪ್ರದರ್ಶನ ಮಾಡುವುದು.
  3. ಶಕ್ತಿಪೀಠ ಸಂಶೋಧನೆ ಮತ್ತು ಅಭಿವೃದ್ಧಿ: ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿ ಶಕ್ತಿಭವನ ದಲ್ಲಿ ಶಕ್ತಿಪೀಠ ಸಂಶೋಧನೆ ಮತ್ತು ಅಭಿವೃದ್ಧಿ ಹೇಗೆ ನಡೆಯಬೇಕು, ಯಾರೆಲ್ಲರಿಂದ ಮಾಹಿತಿ ಸಂಗ್ರಹ ಮಾಡಬೇಕು, ಒಂದೊಂದು ಶಕ್ತಿಪೀಠದ ಸ್ಥಳ ಇತಿಹಾಸ, ಸರ್ಕಾರಿ ದಾಖಲೆ ಅಥವಾ ಅನುಭವಿಗಳ, ಸಂಶೋಧಕರ ಗ್ರಂಥಗಳನ್ನು ಹೇಗೆ ಪತ್ತೆ ಹಚ್ಚಬೇಕು ಎಂಬ ಬಗ್ಗೆಯೂ ಒಂದು ಪಿಪಿಟಿ ಪ್ರದರ್ಶನ ಮಾಡುವುದು.
  4. ಶಕ್ತಿಪೀಠ ವೆಬ್ ಸೈಟ್ : ಶಕ್ತಿಪೀಠ ವೆಬ್ ಸೈಟ್ ಹೇಗೆ ಇದೆ, ಹೇಗೆ ಬದಲಾಗಬೇಕು, ಯಾರು ನಿರ್ವಹಣೆ ಮಾಡಬೇಕು.
  5. ಶಕ್ತಿಪೀಠ ಯೂ ಟ್ಯೂಬ್ ಚಾನಲ್: ಶಕ್ತಿಪೀಠ ಯೂಚಾನಲ್ ಹೇಗೆ ಮಾಡಬೇಕು.ಯಾರು ನಿರ್ವಹಣೆ ಮಾಡಬೇಕು.
  6. ಶಕ್ತಿಪೀಠ ಪೇಪರ್: ಇದೂವರೆಗೂ ಹೇಗೆ ನಡೆಯುತ್ತಿದೆ, ಇನ್ನೂ ಮುಂದೆ ಹೇಗೆ ಇರಬೇಕು, ಯಾರು ಮೌಲ್ಯಮಾಪನ ಮಾಡಬೇಕು.
  7. ಶಕ್ತಿಪೀಠ ಸಭೆಗಳು: ಶಕ್ತಿಪೀಠ ಸಂಶೋಧನಾ ಗ್ರಂಥವನ್ನು ಪೂರ್ಣಗೊಳಿಸಲು, ಯಾವ ರೀತಿ ಸಭೆಗಳು, ಎಲ್ಲೆಲ್ಲಿ ಹೇಗೆ, ಎಷ್ಟು ನೆಡೆÀಯಬೇಕು ಎಂಬ ಬಗ್ಗೆ ರೂಪುರೇಷೆ ನಿರ್ಧರಿಸುವುದು.
  8. ಶಕ್ತಿಪೀಠ ಕ್ಯಾಂಪಸ್ನಲ್ಲಿ ಪ್ರತಿ ದಿನದ ಕಾರ್ಯಕ್ರಮಗಳು: ಶಕ್ತಿಪೀಠ ಕ್ಯಾಂಪಸ್ ಲೋಕಾರ್ಪಣೆ ಆದ ನಂತರ ವರ್ಷದ 365 ದಿವಸಗಳ ಕಾರ್ಯಕ್ರಮಗಳ ಬಗ್ಗೆ ಪಕ್ಕಾ ಮಾಹಿತಿ ಸಂಗ್ರಹ ಮಾಡುವುದು.
  9. ಶಕ್ತಿಪೀಠ ಫ್ಯಾಮಿಲಿ: ಶಕ್ತಿಪೀಠ ಫೌಂಡೇಷನ್‍ನ ಉದ್ದೇಶಗಳ ಬಗ್ಗೆ, ಆಸಕ್ತಿ ಇರುವವರು, ಪರಿಣಿತರು, ತಜ್ಞರು, ಸಂಶೋಧಕರು, ಅನುಭವಿಗಳ ತಂಡ ರಚಿಸುವುದು.

ಇಂದು ನಡೆದ ಪ್ರಥಮ ಸಭೆಯಲ್ಲಿ ಫೋಟೋದಲ್ಲಿರುವವರು ಹಾಗೂ ಪೋಟೋ ತೆಗೆದವರು ಭಾಗವಹಿಸಿದ್ದರು. ಅರ್ಥಗರ್ಭಿತವಾದ ಚರ್ಚೆ ನಡೆಯಿತು.