22nd December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಜಯನಗರ ಪೂರ್ವದಲ್ಲಿ ನಿರ್ಮಾಣ ಮಾಡುತ್ತಿರುವ ಶಕ್ತಿಭವನದ ಕಟ್ಟಡದ ಕಾಮಗಾರಿಯನ್ನು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿಎಸ್.ಬಸವರಾಜ್ ರವರು ವೀಕ್ಷಣೆ ಮಾಡಿದರು.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಾಗೂ ಶಕ್ತಿಪೀಠ ಫೌಂಡೇಷನ್‍ನ ಆಡಳಿತ ಕಚೇರಿ ಹಾಗೂ ಶಕ್ತಿಪೀಠ ಕ್ಯಾಂಪಸ್ £ಲ್ಲಿನÀ ಸಂಶೋಧನಾ ಹಬ್‍ಗಳ ಮ್ಯೂಸಿಯಂ ಇಲ್ಲಿ ತಲೆ ಎತ್ತಲಿದೆ. ಕಳೆದ 34 ವರ್ಷಗಳ ಅನುಭವದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರಲು ಸ್ಟ್ರಾಟಜಿ, ರಾಜ್ಯದ ಸಮಗ್ರ ಅಭಿವೃದ್ಧಿ ಯೋಜನೆಗಳ ಸಂಶೋಧನೆ ಮತ್ತು ಮೌಲ್ಯಮಾಪನ, ರಾಜ್ಯದ ಪ್ರತಿಯೊಂದು ಹನಿ ನೀರಿನ ಬಳಕೆಯ ಜಲಗ್ರಂಥ, ವಿಶ್ವದ 108 ಶಕ್ತಿಪೀಠಗಳ ನಿಖರವಾದ ಡಾಟಾ ಸೆಂಟರ್ ಇದಾಗಲಿದೆ.

ಶಕ್ತಿಪೀಠ ಕ್ಯಾಂಪಸ್ ಒಂದು ಅಭಿವೃದ್ಧಿ ದೇವಾಲಯವಾಗಲಿದೆ. ನೇಚರ್ ಈಸ್ ಗಾಡ್ ಘೋಷಣೆಯಡಿಯಲ್ಲಿ  ಕ್ಯಾಂಪಸ್ ನಿರ್ಮಾಣವಾಗಲಿದೆ. ಈ ಕಟ್ಟಡ ನಿರ್ಮಾಣವಾಗುವ ವೇಳೆಗೆ ಕ್ಯಾಂಪಸ್ ನಲ್ಲಿ ರಾಜ್ಯದ 31 ಜಿಲ್ಲೆಗಳ ಪರಿಣಿತರಿಗೂ ತಂಗಲೂ ಅನೂಕೂಲವಾಗುವಂತಹ 32 ಕೊಠಡಿಗಳ ಪ್ರಥಮ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ಆಲೋಚನೆಯಿದೆ.

ನಂತರ ಕ್ಯಾಂಪಸ್‍ನಲ್ಲಿ, ರಾಜ್ಯದ 31 ಜಿಲ್ಲೆಗಳ ಹಾಗೂ ದೇಶದ 37 ರಾಜ್ಯಗಳ ಅಭಿವೃದ್ಧಿ ಸಂಶೋಧನಾ ಕೇಂದ್ರಗಳ ಕನಸು ತೇಲಾಡುತ್ತಾ ಇದೆ.