TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿರುವ ಪಾರ್ವತಿ ನಿಲಯದಲ್ಲಿರುವ, ಶಕ್ತಿಪೀಠ ಫೌಂಡೇಷನ್ ವತಿಯಿಂದ ತುಮಕೂರು ನಗರದಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಅಧ್ಯಯನ ಪೀಠ ಆರಂಭಿಸಿದೆ.
ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಗ್ಗನಡು ಕಾವಲ್‍ನಲ್ಲಿ ಸುಮಾರು 12 ಎಕರೆ 15 ಗುಂಟೆ ಜಮೀನಿನಲ್ಲಿ ಶಕ್ತಿಪೀಠ ಕ್ಯಾಂಪಸ್ ಆರಂಭಿಸಲು ಸಿದ್ಧತೆ ನಡೆಸಿದೆ.
ನೀರು(ಗಂಗಾಮಾತೆ) ಮತ್ತು ಶಕ್ತಿಪೀಠಗಳಿಗೆ ಇರುವ ಸಂಭಂದಗಳ ಬಗ್ಗೆಯೂ ಅಧ್ಯಯನ ಆರಂಭಿಸಿದೆ. ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳಿಗೂ ಶಕ್ತಿಪೀಠ ಯಾತ್ರೆ ಆರಂಭಿಸಿದೆ.
ಭೂಮಿಯ ಮೇಲೆ ಭಾರತ ನಕ್ಷೆ ನಿರ್ಮಾಣ ಮಾಡಿ, ಕೇಂದ್ರ ಸರ್ಕಾರದ ನದಿ ಜೋಡಣೆಗಳ ಪ್ರಾತ್ಯಕ್ಷಿಕೆ, ಶಕ್ತಿಪೀಠಗಳ ಪ್ರಾತ್ಯಕ್ಷಿಕೆ, ಜ್ಯೋತಿರ್ಲಿಂಗಗಳ ಪ್ರಾತ್ಯಕ್ಷಿಕೆ, ಹಿಂದೂ ಮಹಾಸಾಗರ, ಅರಬ್ಭಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಕೃತಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಭಾರತ ದೇಶದ 37 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಾಗೂ 734 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಅಧ್ಯಯನವನ್ನು ಆರಂಭಿಸಲು ಚಿಂತನೆ ನಡೆಸಿದೆ. ಕರ್ನಾಟಕ ರಾಜ್ಯ ಸರ್ಕಾರವೂ ಸ್ಪಂಧಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಒಂದು ಅಂದಾಜಿನ ಪ್ರಕಾರ ಸುಮಾರು 3000 ರಿಂದ 4000 ವರ್ಷಗಳ ಹಿಂದೆ ಶಕ್ತಿಪೀಠಗಳು ಅಸ್ಥಿತ್ವಕ್ಕೆ ಬಂದಿವೆ ಎಂದು ಹೇಳಲಾಗುತ್ತಿದೆ. ತಾವು ಶಕ್ತಿಪೀಠಗಳು ಹಾಗೂ ಜ್ಯೋತಿರ್ಲಿಂಗಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದೀರಿ ಎಂಬ ಹೆಮ್ಮೆ ದೇಶವಾಸಿಗಳಿಗೆ ಇದೆ.
ಕೆಲವು ಅಧ್ಯಯನ ವರದಿಗಳ ಪ್ರಕಾರ 51 ಅಕ್ಷರ ಶಕ್ತಿಪೀಠಗಳು.
ಕೆಲವು ಅಧ್ಯಯನ ವರದಿಗಳ ಪ್ರಕಾರ 72 ಶಕ್ತಿಪೀಠಗಳು.
ಕೆಲವು ಅಧ್ಯಯನ ವರದಿಗಳ ಪ್ರಕಾರ 108 ಶಕ್ತಿಪೀಠಗಳು, ಉಪಶಕ್ತಿಪೀಠಗಳು ಹಾಗೂ ಸಿದ್ಧಿಪೀಠಗಳು ಇವೆ ಎಂದು ಹೇಳಲಾಗುತ್ತಿದೆ. ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಿಪೇಯಿರವರು Ministry Of Culture Govt Of India ಅಧೀನದಲ್ಲಿರುವ Indira Gandhi National For The Arts ವತಿಯಿಂದ National Mission For Manuscripts ಸ್ಥಾಪಿಸಿದ್ದಾರೆ.
ಶಕ್ತಿಪೀಠಗಳು ಹಾಗೂ ಜ್ಯೋತಿರ್ಲಿಂಗಗಳ ಬಗ್ಗೆ ಇದೂವರೆಗೂ ಯಾವುದೇ Manuscripts ಅನ್ನು ಕ್ರೋಡೀಕರಿಸಿರುವುದಿಲ್ಲ.
ಆದ್ದರಿಂದ ಕೇಂದ್ರ ಸರ್ಕಾರದ ಕಲ್ಚರ್, ಪ್ರವಾಸೋಧ್ಯಮ, ಆರ್ಕಿಯಾಲಿಜಿಕಲ್, ಜಲಶಕ್ತಿ, ಸಂಭಂದಿಸಿದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವತಿಯಿಂz, ಈ ಕೆಳಕಂಡ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಕ್ರೋಡಿಕರಿಸಲು ಮತ್ತು ಶಕ್ತಿಪೀಠ ಫೌಂಡೇಷನ್ ಪರಿಕಲ್ಪನೆಗಳಿಗೆ ಸಹಕರಿಸಲು ಈ ಮೂಲಕ ಕೋರಿದೆ ಎಂದು ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೂ ರವಾನಿಸಲಾಗಿದೆ.
- Shakthi Peeta R & D Work.
- Collection Of Manuscripts
- Collection Of Document, Photos, Statues
- Collection Of Books. Property Details, Legal Enitity.
- Collection Of Reserch Documents.
- Museum,
- Laser Veiw
- Shakthi Peeta Tourisum Circutes.
- Declared Heritage Spot And Protected From Archilogical Survey Of India.
ಲಗತ್ತಿಸಿದೆ.
- ಶಕ್ತಿಪೀಠ ಫೌಂಡೇಷನ್ ಮನವಿ ಮತ್ತು ಪರಿಕಲ್ಪನಾ ವರದಿ.
- ನೋಂದಣಿ ಪತ್ರ.
- ಆಡಿಟ್ ರಿಪೋರ್ಟ್ ಹಾಗೂ 80 ಜಿ ದಾಖಲೆಗಳು.
- ಬ್ಯಾಂಕ್ ಮಾಹಿತಿ.
- ಮಾಸ್ಟರ್ ಪ್ಲಾನ್ ಲೇ-ಔಟ್.
- ಲ್ಯಾಂಡ್ ಮಾರ್ಕ್.
- ಶಕ್ತಿಪೀಠಗಳ ಗೂಗಲ್ ಮಾರ್ಕಿಂಗ್ ನಕ್ಷೆ.
- ಜಮೀನಿನ ಮತ್ತು ಕಟ್ಟಡದ ದಾಖಲೆಗಳು. ಗುತ್ತಿಗೆ ಕರಾರು.
- ಕರ್ನಾಟಕ ಸರ್ಕಾರದ ದಾಖಲೆಗಳು.