22nd December 2024
Share

TUMAKURU:SHAKTHI PEETA FOUNDATION

2019 ರಲ್ಲಿ ಆರಂಭ ಮಾಡಿದ, ಶಕ್ತಿಪೀಠ ಇ ಪೇಪರ್, ನಿಮಗಿದು ಗೊತ್ತೆ?4 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನನ್ನ ಬರವಣಿಗೆಯಂತೂ, ನನಗೆ ಇಷ್ಟ ಬಂದಂತೆ ಬರೆಯುವುದಾಗಿದೆ, ಯಾವ ವಿಷಯ ಬರೆಯ ಬೇಕಾದರೂ, ಆರಂಭದಲ್ಲಿ ಡಿಜಿಟಲ್ ದಾಖಲೆಯಾಗಲಿ ಎಂದು ಬರೆಯಲು ಆರಂಭಿಸಲಾಯಿತು.

ಆದರೆ ನನ್ನ ಬರವಣಿಗೆ ಜನರಿಗೂ ಇಷ್ಟವಾಗಲಿದೆ ಎಂದು ನನಗನಿಸಿದ್ದು, ಅನಾನಲೀಸಿಸ್  ಗಮನಿಸಿದ ನಂತರ. ಪ್ರತಿ ಪೇಪರ್ ಅನ್ನು ಎಷ್ಟು ಜನ ಓದಿದ್ದಾರೆ ಎಂಬ ಡಿಜಿಟಲ್ ದಾಖಲೆ ದೊರೆಯುವುದರಿಂದ ಮಾತ್ರ. ಓದುಗರಿಗೆ ಯಾವ ವಿಷಯ, ಹೇಗೆ, ಏಕೆ ಇಷ್ಟವಾಗಲಿದೆ ಎಂಬ ಸುಳಿವು ಸಹ ಗೊತ್ತಾಗುವುದಿಲ್ಲ.

 ಈ ವರ್ಷ ವಿಶ್ವದ 108 ಶಕ್ತಿಪೀಠಗಳ ಸಂಶೋಧನೆಗೆ ಇನ್ನೂ ಒತ್ತು ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ನಮ್ಮ ಫೌಂಡೇಷನ್ ಸಿಇಓ ಕೆ.ಆರ್.ಸೋಹನ್ ದಿನಾಂಕ:08.05.2022 ರಂದು ಶಕ್ತಿಪೀಠ ಯಾತ್ರೆ ಆರಂಭಿಸಿದ ದಿನದಿಂದ, ವಿವಿಧ ರಾಜ್ಯಗಳ ಸುಮಾರು 25 ಕ್ಕೂ ಹೆಚ್ಚು ಶಕ್ತಿಪೀಠಗಳಿಗೆ ಭೇಟಿ ನೀಡಿದ್ದಾರೆ.

ಕೆಲವರು ಹಣಗಳಿಕೆಗಾಗಿ, ನಮ್ಮದೂ ಶಕ್ತಿಪೀಠ ಎಂದು ಜನರಿಗೆ ಯಾಮಾರಿಸುವುದು ಸಹಜವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿವಿಧ ದೇಶಗಳ ಸರ್ಕಾರದ ಅಧಿಕೃತ ದಾಖಲೆ ಸಂಗ್ರಹ ಮಾಡುವುದು ನಮ್ಮ ಮೊದಲ ಆಧ್ಯತೆ.

‘ಶಕ್ತಿಪೀಠ ಮ್ಯೂಸಿಯಂ ಸ್ಥಾಪಿಸಬೇಕಾದರೆ, ನಿಖರವಾದ, ಅಧಿಕಾರಿಗಳ ಅಧಿಕೃತ ಸಹಿಯುಳ್ಳ ದಾಖಲೆ ಸಂಗ್ರಹ ನನ್ನ ಗುರಿಯಾಗಿದೆ. ಪೂರಕವಾಗಿ ಕೇಂದ್ರ ಸರ್ಕಾರದ Ministry Of Culture Govt Of India   ಅಧೀನದಲ್ಲಿರುವ Indira Gandhi National For The Arts  ವತಿಯಿಂದ National Mission For Manuscripts  ವತಿಯಿಂದ ಪಕ್ಕಾ ದಾಖಲೆ ಮಾಡಿಸಲು ದೇಶದ ಪ್ರಧಾನಿಯವರ ಮೊರೆ ಹೋಗಲಾಗಿದೆ.

ಸುಮಾರು 4000 ವರ್ಷಗಳು ಆದರೂ, ಶಕ್ತಿದೇವತೆ ಈ ಕೆಲಸವನ್ನೂ, ಯಾರಿಂದಲೂ ಪಕ್ಕಾ ಮಾಡಿಸದೇ, ನಮಗೆ ವಿಶಿಷ್ಠವಾದ ರೀತಿಯಲ್ಲಿ ಈ ಕೆಲಸ ಮಾಡಲು ಸೂಚಿಸಿರುವುದು, ನಮ್ಮ ಕುಟುಂಬಕ್ಕೆ ಸಂತೋಷó ತಂದಿದೆ. ಈ ಕಾಯಕವನ್ನೂ ಬಹಳ ತೃಪ್ತಿಯಿಂದ ಮಾಡುತ್ತಿರುವುದು ನನಗೆ ಖಷಿಯಾಗಿದೆ.

ನಮ್ಮ ಜೊತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡುತ್ತಿರುವ ನೂರಾರು ಜನರ ಸಹಕಾರ ಮರೆಯುವಂತಿಲ್ಲ. ಶಕ್ತಿಪೀಠ ಸಂಶೋಧಕರ ಮಾಹಿತಿ ಓದುಗರಿಗೆ ತಿಳಿದಿದ್ದರೆ, ಅವರ ಮಾಹಿತಿ ನೀಡಿದರೆ ನನಗೆ ಅದೇ ದೊಡ್ಡ ಸಹಕಾರವಾಗಲಿದೆ.

ಇ ಪೇಪರ್ ಐದು ವರ್ಷ ಪೂರ್ಣಗೊಳಿಸುವುದರೊಳಗೆ, ವಿಶ್ವದ 51 ಅಥವಾ 72 ಅಥವಾ 108 ಶಕ್ತಿಪೀಠಗಳ ಅಧಿಕೃತ ಮಾಹಿತಿಯನ್ನು, ಕೇಂದ್ರ ಸರ್ಕಾರದಿಂದ ಹಾಗೂ ವಿವಿಧ ದೇಶಗಳಿಂದ ಪಡೆಯಲೇ ಬೇಕು ಎಂಬ ದೃಢ ನಿರ್ಧಾರ ನಮ್ಮದಾಗಿದೆ.

ಪತ್ರಿಕೆಯ ಅನಾಲೀಸಿಸ್ ಗಮನಿಸಿ, ಇನ್ನೂ ಹೆಚ್ಚು ಜನರೂ ಓದುವಂತಾಗ ಬೇಕು ಎಂಬುದು ನಮ್ಮ ಅನಿಸಿಕೆ ಆದರೂ, ಅದು ನಿಮ್ಮ ಕೈನಲ್ಲಿದೆ.