22nd December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ವಿಶ್ವದ 108 ಶಕ್ತಿಪೀಠಗಳ ಕ್ಯಾಂಪಸ್‍ಗೆ ಪ್ರೇರಣೆ ನೀಡಿದ ನಮ್ಮೂರ ಗಂಗಮಲ್ಲಮ್ಮನ ಇತಿಹಾಸದ ಬಗ್ಗೆ ಡಿಜಿಟಲ್ ದಾಖಲೆ ಮಾಡಲು ದಿನಾಂಕ:18.12.2022 ರಂದು ನಿರ್ಧಾರ ಕೈಗೊಳ್ಳಲಾಯಿತು.

ಪಾವಗಡ ತಾಲ್ಲೋಕು ಕೊಂಡಾಪುರದ ಗಂಗಮಲ್ಲಮ್ಮ ಹಾಗೂ ಗುಬ್ಬಿ ತಾಲ್ಲೋಕು ಕುಂದರನಹಳ್ಳಿ ಗಂಗಮಲ್ಲಮನವರಿಗೆ ಇರುವ ಸಂಬಂದಗಳ ಬಗ್ಗೆÀ ದಾSಲೆಗಳ ಪತ್ತೆಗೆ ಹುಡುಕಾಟ ಆರಂಭಿಸಲಾಗಿದೆ.

ಮಧುಗಿರಿ ತಾಲ್ಲೋಕು ವೀರಾಪುರದ ಭಕ್ತರು ಹಾಗೂ ಬೆಂಗಳೂರಿನಲ್ಲಿ ಇರುವ ಗಂಗಮಲ್ಲಮನವರ ಭಕ್ತರಾದ ಶ್ರೀ ಸಿದ್ದಗಂಗಪ್ಪನವರು, ಶ್ರೀ ಶಿವಣ್ಣನವರು, ಶ್ರೀ ಕರಿಯಪ್ಪನವರು ದೇವಾಲಯಕ್ಕೆ ಭೇಟಿ ನೀಡಿ, ಇತಿಹಾಸ ಕಲೆಹಾಕಲು ಸಹಕಾರ ನೀಡುವುದಾಗಿ ತಿಳಿಸಿದರು.

ಪಾವಗಡ ತಾಲ್ಲೋಕಿನ ಕೊಂಡಾಪುರದ ಶ್ರೀ ತಿಪ್ಪೆಸ್ವಾಮಿಯವರು, ದೇವಾಲಯದ ಇತಿಹಾಸದ ಬಗ್ಗೆ ತಾಳೆಗರಿ ಇದೆ, ಶೀಘ್ರದಲ್ಲಿ  ಕೊಡುವುದಾಗಿ ಭರವಸೆ ನೀಡಿದ್ದಾರೆ.

ಭಕ್ತರಾದ ಶ್ರೀಮತಿ ವರದಲೋಕಮಾತಾರವರು ಹಾಗೂ ಶ್ರೀಮತಿ ಕರಿಯಮ್ಮನವರು 108 ಶಕ್ತಿಪೀoಗಳುÀ ಹಾಗೂ ಗಂಗಮಲ್ಲಮನವರ ಬಗ್ಗೆ ಹಾಡು ಬರೆದು ಕೊಡುವ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಪಿಜೆಸಿಗೆ ಬಂದರೂ ಅಲ್ಲಿಯೂ ಗಂಗಮಲ್ಲಮನವರ ಭಕ್ತರು ಜೊತೆಗೂಡಿರುವುದು ಒಂದು ವಿಶಿಷ್ಠ. ಪಿಜೆಸಿಯಲ್ಲಿನ ನಿವಾಸಿಗಳಾದ ವಿವಿಧ ರಾಜ್ಯದ ಹಾಗೂ ವಿವಿದ ದೇಶದ ಜನರು ಶಕ್ತಿಪೀಠಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ನನಗೆ ತೃಪ್ತಿ ತಂದಿದೆ.

ಗಂಗಮಲ್ಲಮನ ಭಕ್ತರಾದ ನಿವೃತ್ತ ಐಪಿಎಸ್ ಅಧಿಕಾರಿ ಹಂಡನಹಳ್ಳಿ ಶ್ರೀ ರೇವಣ್ಣವರ ನೇತೃತ್ವದಲ್ಲಿ ಒಂದು ಕಮಿಟಿ ರಚಿಸಿ, ಎಲ್ಲಾ ದಾಖಲೆಗಳನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಮಿಷನ್ಫಾರ್ ಮ್ಯಾನ್ಸ್ಕ್ರಿಪ್ಟ್ಗೆ ತಲುಪಿಸಲು ಸಿದ್ಧತೆ ಆರಂಭವಾಗಿದೆ.

ಗಂಗಮಲ್ಲಮ್ಮ£ವರÀ ಆಸಕ್ತ ಭಕ್ತರು ಸಂಪರ್ಕಿಸಲು ಬಹಿರಂಗ ಮನವಿ ಮಾಡಲಾಗಿದೆ.

ಕುಂದರನಹಳ್ಳಿಯಲ್ಲಿರುವ ಗಂಗಮಲ್ಲಮ್ಮ ದೇವಾಲಯ.

ಕುಂದರನಹಳ್ಳಿಯಲ್ಲಿರುವ ಗಂಗಮಲ್ಲಮ್ಮ ನೂತನ ದೇವಾಲಯದ ನಿರ್ಮಾಣ ಹಂತ.

ಕುಂದರನಹಳ್ಳಿಯಲ್ಲಿರುವ ಗಂಗಮಲ್ಲಮ್ಮ ದೇವಾಲಯದ ಆವರಣದಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ