30th April 2024
Share

TUMAKURU:SHAKTHIPEETA FOUNDATION

2047 ನವ ಕರ್ನಾಟಕದ ವಿಷನ್ ಡಾಕ್ಯುಮೆಂಟ್, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹೆಚ್ಚಿಗೆ ಅನುದಾನ ಪಡೆಯಲು, ವಿವಿಧ ಮ್ಯೂಸಿಯಂ, ಲೈಬ್ರರಿ, ಡಿಜಿಟಲ್ ಲೈಬ್ರರಿ, ಯುಮನ್ ಲೈಬ್ರರಿ, ಶಕ್ತಿಪೀಠ ಯು-ಟ್ಯೂಬ್ ಚಾನಲ್ ಸ್ಥಾಪಿಸಲು, ಹೈಟೆಕ್ ಮೊಬೈಲ್ ಕಚೇರಿ ಜೊತೆಗೆ ಅತ್ಯುತ್ತಮವಾದ ಮಾಹಿತಿಗಳ ಸಂಗ್ರಹ ಮಾಡುವ ಗ್ರಂಥಾಲಯ ಅಥವಾ ಮ್ಯೂಸಿಯಂ ಅವಶ್ಯಕತೆ ಇದೆ.

ಕಳೆದ 22 ವರ್ಷಗಳಿಂದ 80 ರ್ಯಾಕ್ಸ್‍ಗಳಲ್ಲಿ ಸುಮಾರು 1000 ಕ್ಕೂ ಅಧಿಕ ಫೈಲ್‍ಗಳು, ವಿವಿಧ ಯೋಜನೆಗಳ ವರದಿಗಳು, ಪುಸ್ತಕಗಳ ಸಂಗ್ರಹಣೆಯನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ಸಂಗ್ರಹ ಮಾಡಲಾಗಿತ್ತು.

ಪ್ರಸ್ತುತ ವಿಶ್ವದ 108 ಶಕ್ತಿಪೀಠಗಳು, ದೇಶದ 734 ಜಿಲ್ಲೆಗಳ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಬಗ್ಗೆ ಅಧ್ಯಯನ ಆರಂಭಿಸಿರುವುದರಿಂದ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಮ್ಯೂಸಿಯಂ ಸ್ಥಾಪಿಸಲು, ಮಾಹಿತಿ ಸಂಗ್ರಹ ಮಾಡಲು ಸುಮಾರು 400  RACKS ಅವಶ್ಯಕತೆಯಿದೆ.

ಶಕ್ತಿಭವನದ ನೆಲಮಹಡಿ ಮತ್ತು ಮೊದಲನೇ ಅಂತಸ್ತುಗಳಲ್ಲಿ ಸುಮಾರು 400 ರ್ಯಾಕ್ಸ್‍ಗಳನ್ನು ಮಾಡಿಸಬೇಕಿರುವುದರಿಂದ, ಕಿಟಕಿ ಬಾಗಿಲುಗಳು ಹಾಗೂ ರ್ಯಾಕ್ಸ್ ಸಂಗ್ರಹದ ಮಾದರಿಯನ್ನು ಇಟ್ಟಿಗೆ ಕಟ್ಟಡ ಆರಂಭ ಮಾಡುವ ಮುನ್ನವೇ ಪ್ಲಾನ್ ಮಾಡಬೇಕಿದೆ.

ನಮ್ಮ ಇಂಜಿನಿಯರ್ ಮತ್ತು ಆರ್ಕಿಟೆಕ್ಟ್‍ಗಳಿಗೆ ಇದೊಂದು ವಿಶಿಷ್ಠವಾದ ಅನುಭವ, ಎಲ್ಲೆಲ್ಲಿ ಏನು ಇರಬೇಕು ಎಂದು ಅವರು ಹೇಳುವ ಹಾಗಿಲ್ಲ, ನನಗೆ ಎಲ್ಲೆಲ್ಲಿ ಏನಿರಬೇಕು ಎಂಬ ಅವಶ್ಯಕತೆಗೆ ಅನುಗುಣವಾಗಿ ಅವರು ನಿರ್ಧಾರ ಮಾಡಬೇಕಿದೆ.

ನೆಲ ಅಂತಸ್ತಿನ ಕಟ್ಟಡವನ್ನು ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಮೊದಲನೇ ಅಂತಸ್ತಿನ ಕಟ್ಟಡದ ಬಗ್ಗೆ ಸ್ಥಳಕ್ಕೆ ಬಂದು ಸಲಹೆ ನೀಡಲು ಬಹಿರಂಗ ಮನವಿ ಮಾಡಲಾಗಿದೆ. ಉತ್ತಮ ಬೆಳಕು, ಗಾಳಿ ಹಾಗೂ 400 ರ್ಯಾಕ್ಸ್ ಗಳ ಜೋಡಣೆ ಡ್ರಾಯಿಂಗ್ ಅವಶ್ಯಕತೆಯಿದೆ.

  1. ಶಕ್ತಿಪೀಠ ಕ್ಯಾಂಪಸ್‍ನಲ್ಲಿ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳ, 3 ಸಾಯಿಬಾಬಾ ಸೇರದಂತೆ  ಬಾರತ ದರ್ಶನದ 365 ಪ್ರಾತ್ಯಾಕ್ಷಿಕೆಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  2. ತುಮಕೂರು ಜಿಲ್ಲೆಯ 33 ಗ್ರಾಮಪಂಚಾಯಿತಿಗಳ ಹಾಗೂ 11 ಸ್ಥಳೀಯ ಸಂಸ್ಥೆಗಳ ಮಾಹಿತಿ ಸಂಗ್ರಹ ಮಾಡಲು 341 ಸ್ಥಳೀಯ ಸಂಸ್ಥೆಗಳ ಕಡತ ಇಡುವ ಅವಶ್ಯಕತೆಯಿದೆ. 
  3. ರಾಜ್ಯದ 225 ವಿಧಾನಸಭಾ ಸದಸ್ಯರ, 75 ಜನ ವಿಧಾನ ಪರಿಷತ್ ಸದಸ್ಯರ, 28 ಜನ ಲೋಕಸಭಾ ಸದಸ್ಯರ, 12 ರಾಜ್ಯ ಸಭಾ ಸದಸ್ಯರ ಹಾಗೂ ದೆಹಲಿ ಪ್ರತಿನಿಧಿಯವರು ಸೇರಿದಂತೆ 341 ಜನರ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  4. ವರ್ಷದ 365 ದಿವಸಗಳ ಕಾರ್ಯಕ್ರಮದ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  5. ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಸಂಗ್ರಹ ಮಾಡಲು ಉದ್ದೇಶಿರುವ 365 ವಿದದ ರಾಕ್ಸ್‍ಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  6. ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಬೆಳೆಸಲು ಉದ್ದೇಶಿರುವ 365 ಔಷಧಿಗಿಡಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  7. ರಾಜ್ಯದಲ್ಲಿನ ವಿವಿಧ ಬೆಳೆಗ¼/ಸಂಪನ್ಮೂಲಗಳÀ ಮೌಲ್ಯವರ್ಧಿತ ಉತ್ಪನ್ನಗಳ 365 ಕ್ಲಸ್ಟರ್‍ಗಳ   ಕಡತಗಳನ್ನು ಇಡುವ ಅವಶ್ಯಕತೆಯಿದೆ.
  8. ರಾಜ್ಯದಲ್ಲಿ ಇರುವ   365 ಜಾತಿಗಳ ಜನರನ್ನು ಒಂದೊಂದು ದಿವಸದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿರುವುದರಿಂದ ಜಾತಿಗಳಿಗೆ ಸಂಬಂದಿಸಿದ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  9. ಭಾರತ ದೇಶದಲ್ಲಿನ 101 ನದಿ ಪಾತ್ರಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  10. ಭಾರತ ದೇಶದಲ್ಲಿನ 734 ಜಿಲ್ಲೆಗಳ ದಿಶಾ ಸಮಿತಿ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  11. ತುಮಕೂರು ಜಿಲ್ಲೆಯಲ್ಲಿರುವ 341 ರಾಷ್ರೀಕೃತ ಬ್ಯಾಂಕ್‍ಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  12. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 326 ಬಡಾವಣೆಗಳ  ಕಡತಗಳನ್ನು ಇಡುವ ಅವಶ್ಯಕತೆಯಿದೆ.
  13. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ, ಬೋರ್ಡ್, ಕಾರ್ಪೋರೇಷನ್, ಕಂಪನಿಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  14. ಭಾರತದ ಪ್ರಧಾನ ಮಂತ್ರಿಗಳ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಕಾಲದ ಯೋಜನೆಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.
  15. ವರ್ಷದ 365 ದಿವಸಗಳಿಗೂ ಶಕ್ತಿಪೀಠ ಫ್ಯಾಮಿಲಿ ವಿಷನ್‍ಗ್ರೂಪ್‍ಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

ಹೀಗೆ 15 ಅಂಶದ ಮಾಹಿತಿಗಳನ್ನು ಒಂದೊಂದು RACKS ನಲ್ಲಿ ಸಂಗ್ರಹ ಮಾಡಲು, ಸುಮಾರು 400  RACKS ಮಾಡಲು ಆಲೋಚನೆಯಿದೆ ನಿಮ್ಮ ಐಡಿಯಾ?