9th October 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ 2023 ರ ದಸರಾ ಹಾಗೂ ನವರಾತ್ರಿ ಪೂಜೆಯನ್ನು ವಿಶೇಷವಾಗಿ ಆಚರಿಸಲು, ಈಗಲೇ ವಾಟ್ಸ್ ಅಫ್ ಗ್ರೂಪ್ ರಚಿಸಿಕೊಂಡು ಸಿದ್ಧತೆ ನಡೆಸಲು ನಿವಾಸಿಗಳು ಸಲಹೆ ನೀಡಿದ್ದಾರೆ. ಆಸಕ್ತರು ಗ್ರೂಪ್ ರಚಿಸಲು ಮನವಿ.

ಶಕ್ತಿಪೀಠ ಫೌಂಡೇಷನ್ ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋದನೆ ಮಾಡುತ್ತಿದ್ದು, ಪಿಜೆಸಿಯಲ್ಲಿನ 3571 ಅಪಾರ್ಟ್ ಮೆಂಟ್‍ಗಳಲ್ಲಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ, ಭಾರತದ ಬಹುತೇಕ ರಾಜ್ಯಗಳು ಹಾಗೂ ಶಕ್ತಿಪೀಠಗಳಿರುವ ಹಲವು ದೇಶಗಳ ಜನರು ವಾಸವಿರಬಹುದು.

ಶಕ್ತಿಪೀಠ ಫೌಂಡೇಷನ್ ಈಗಾಗಲೇ ಈ ಮಾಹಿತಿ ಸಂಗ್ರಹ ಮಾಡಲು ಆರಂಭಿಸಿದೆ. ಅಭೂತ ಪೂರ್ವ ಸಹಕಾರ ಸಿಕ್ಕಿದೆ. ಎಲ್ಲಾ ರಾಜ್ಯಗಳ, ಎಲ್ಲಾ ದೇಶಗಳು ಶಕ್ತಿಪೀಠಗಳಲ್ಲಿ ಆಚರಿಸುವ ನವರಾತ್ರಿ ಮಾದರಿಯಲ್ಲಿ 108 ಶಕ್ತಿಪೀಠಗಳ ಪೂಜೆಯೊಂದಿಗೆ 2023 ರ ದಸರಾ ಹಾಗೂ ನವರಾತ್ರಿ ಆಚರಿಸಲು ಪೂರ್ವ ಸಿದ್ಧತೆ ಅವಶ್ಯಕತೆ ಇದೆ.

108 ಶಕ್ತಿಪೀಠಗಳ ಪಕ್ಕಾ ಮಾಹಿತಿಗಳನ್ನು, ಆಯಾ ಜಿಲ್ಲೆಯ, ಆಯಾ ರಾಜ್ಯದ, ಆಯಾ ದೇಶಗಳ ಜನರಿಂದ ಸಂಗ್ರಹ ಮಾಡಲು ಹಾಗೂ ಸಂಗ್ರಹ ಮಾಡಿದ ಮಾಹಿತಿಗಳನ್ನು ಎಲ್ಲಾ ಶಕ್ತಿಪೀಠಗಳಿರುವ ಭಾಷೆಯಲ್ಲಿ ವರದಿ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಲ್ಲಿ ಡಿಜಿಟಲೀಕರಣ ಮಾಡಿಸುವ ಪ್ರಯತ್ನವೂ ಆರಂಭವಾಗಿದೆ.

ಗೂಗಲ್ ರಿಜಸ್ಟ್ರೇಷನ್ ಆರಂಭವಾಗಿದೆ. ವಿಶ್ವದ ಯಾವುದೇ ಭಾಗದ  ಆಸಕ್ತರು ಉಚಿತವಾಗಿ ನೊಂದಾಯಿಸಿಕೊಂಡು ತಮ್ಮ ಶಕ್ತಿಪೀಠ  ಜ್ಞಾನವನ್ನು ಹಾಗೂ ಅಕ್ಕ ಪಕ್ಕದ ನಿವಾಸಿಗಳ ಶಕ್ತಿಪೀಠ ಜ್ಞಾನವನ್ನು ಧಾರೆ ಎರೆಯಲು ಮನವಿ.