27th July 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಜಯನಗರ ಪೂರ್ವದ ಎರಡನೇ ರಸ್ತೆಯಲ್ಲಿರುವ ಎಡಕಲ್ಲು ಗುಡ್ಡದ ಪಾರ್ಕ್ ಇನ್ನೂ ಮುಂದೆ, ನಗರಾಧ್ಯಾಂತ ವಿಶಿಷ್ಠ ಸುದ್ದಿ ಮಾಡಲಿದೆ. ತುಮಕೂರು ನಗರದ ಗ್ರೀನ್ ಆಡಿಟ್ ಹಾಗೂ 2023 ಬಯೋಡೈವರ್ಸಿಟಿ ವರ್ಷ ವಾಗಿ ಆಚರಿಸಲು ನಗರದ ಒಂದು ತಂಡ ಮೌನ ಕ್ರಾಂತಿ ಬರೆಯಲು ಸಿದ್ಧವಾಗುತ್ತಿದೆ.

ಈ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹಾಗೂ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ ಹಿನ್ನಲೆಯಲ್ಲಿ, ತುಮಕೂರು ಸ್ಮಾರ್ಟ್ ಸಿಟಿ ಯವರು ಕಾಮಗಾರಿ ಆರಂಭಿಸಿದ್ದಾರೆ.

ನಾನು ಇಂದು ಬೇಟಿ ನೀಡಿ, ಉಧ್ಯಾನವನದ ಸುತ್ತ ಮುತ್ತ ಮತ್ತು ಅಕ್ಕಪಕ್ಕದ ಜನರ ಒಂದು ತಂಡ ರಚಿಸಿಕೊಂಡು ಮುಂದಿನ ರೂಪುರೇಷೆ ನಿರ್ಧರಿಸಲು ಶ್ರೀ ಆರಾಧ್ಯರವರು ಹಾಗೂ ಶ್ರೀ ಕೃಷ್ಣ ಸ್ವಾಮಿಯವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ.

ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕಾಮಗಾರಿ ನಾಮಫಲಕ ಹಾಕಿ, ಇಲ್ಲಿ ಏನೇನು ಮಾಡಲಾಗುವುದು ಎಂಬ ಬಗ್ಗೆ ಬಡಾವಣೆಯ ನಾಗರೀಕರ ಮುಂದೆ ಮಂಡಿಸಿ, ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಸಲಹೆ ನೀಡಲಾಗಿದೆ.

ಈ ಉದ್ಯಾನವನದ ನಿರ್ವಹಣೆಯನ್ನು ಮಾಜಿ ಶಾಸಕರಾದ ಶ್ರೀ ರಫೀಕ್ ಅಹಮ್ಮದ್ ರವರು ಮಾಡಲಿದ್ದಾರೆ ಎಂದು ನಾಮಫಲಕ ಹಾಕಲಾಗಿದೆ. ಬಹಳ ವರ್ಷಗಳ ಹಿಂದೆ ಗುಬ್ಬಿ ಶ್ರೀ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನವರು ಕುಳಿತು ಕೊಳ್ಳಲು ಸಿಮೆಂಟ್ ಕುರ್ಚಿಗಳನ್ನು ಹಾಕಿಸಿದ್ದಾರೆ.

ಈಗ ಅವರ ಸಲಹೆಗಳನ್ನು ಕೇಳಿ, ಪ್ರಸ್ತುತ ನಿರ್ವಹಣೆ ಮಾಡಲು ಮುಂದೆ ಬಂದಿರುವ ತುಮಕೂರು ಇಂಜಿನಿಯರ್ಸ್ ಅಸೋಸಿಯೇಷನ್ ರವರ ಅಭಿಪ್ರಾಯವನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

ಉದ್ಯಾನವನದ ವೀಸ್ಥೀರ್ಣ ಮತ್ತು ಇತರ ಮಾಹಿತಿಗಳ ನಾಮಫಲಕ ಹಾಕಲು ತುಮಕೂರು ಮಹಾನಗರ ಪಾಲಿಕೆ ಇಂಜಿನಿಯರ್‍ಗಳಿಗೂ ತಿಳಿಸಲಾಗಿದೆ. ತುಮಕೂರು ಮಹಾನಗರ ಪಾಲಿಕೆಯವರು ಮಾಡಿರುವ ಜಿಐಎಸ್ ಲೇಯರ್ ನಲ್ಲಿ ವಿವರ ನಮೂದಿಸಲು ಸಲಹೆ ನೀಡಲಾಗಿದೆ.

ಈ ಭಾಗದ ಕಾರ್ಪೋರೇಟರ್ ಶ್ರೀ ರಮೇಶ್ ರವರು, ಒಂದು ಸಭೆಯನ್ನು ನಡೆಸಲಿದ್ದಾರೆ. ಗ್ರೀನ್ ಆಡಿಟ್ ಬಗ್ಗೆ ಚರ್ಚೆ ಮಾಡುವ ಉದ್ಯಾನವನದ ಬಗ್ಗೆ ಮೊದಲು ಚರ್ಚೆಯಾಗಬೇಕಿದೆ. ಯಾವುದೇ ಉದ್ಯಾನವನದ ಅಭಿವೃದ್ಧಿ ಮಾಡಬೇಕಾದರೇ ನಾಗರೀಕರು ಗಮನಿಸಬೇಕಾದ ಅಂಶಗಳ ಬಗ್ಗೆ ಜನತೆಗೆ ಮನವರಿಕೆ ಅಗತ್ಯ.