27th July 2024
Share

TUMAKURU:SHAKTHIPEETA FOUNDATION

ವಿಶ್ವದ 108 ಶಕ್ತಿಪೀಠಗಳ ಸಾನಿದ್ಯದಲ್ಲಿ, ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ. ಜ್ಞಾನಿಗಳ ಮುಖಾಂತರ ನಡೆದ ಮೂರು ದಿªಸಗಳ ಕಾಲ ನಡೆದ ‘ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಅಭಿವೃದ್ಧಿ ಪೀಠ, ಜಲಪೀಠ, ಶಕ್ತಿಪೀಠಗಳ ವಿಚಾರ ಮಂಥನ, ಭಾಷಣವಿಲ್ಲದ,ವೇದಿಕೆ ಇಲ್ಲದ, ಶಿಸ್ತು ಭದ್ಧ, ಸಮಯ ಪ್ರಜ್ಞೆ ಕಾರ್ಯಾಗಾರ ನಡೆಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್.

ದಿನಾಂಕ:22.01.2023 gಂದು ಸಂಜೆ 6 ಗಂಟೆಯಿಂದ 8.30 ರವರೆಗೆ, ವೆಸ್ಟರ್ನ್ ಘಾಟ್ ಫೌಂಡೇಷನ್ ಉದ್ಘಾಟನೆಯನ್ನು ಹೊಗಂದಹಳ್ಳ ಶಾಲಾ ಮಕ್ಕಳಿಂದ ಪಶ್ಚಿಮಘಟ್ಟಗಳ ಪರಿಚಯದ ಮೂಲಕ ಕಾರ್ಯಕ್ರಮ ನಡೆಸಲಾಯಿತು.

ದಿನಾಂಕ:23.01.2023 ರ ಸಂಜೆ 4 ಗಂಟೆಯಿಂದ ಮದ್ಯೆ ರಾತ್ರಿ 8 ರವರೆಗೆ  ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047ಸಲಹೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 28 ಜ£ರಿಂದÀ ತಲಾ 5 ನಿಮಿಷ ಕರಾರು ವಕ್ಕಾಗಿ ವಿಷಯ ಮಂಡಿಸಿದರು.

ದಿನಾಂಕ:23.01.2023 ರಾತ್ರಿ 9.00 ರಿಂದ 11.45 ರವರೆಗೆ ಪರಿಣಿತ ತಜ್ಞರಿಂದ ಗ್ರೂಪ್ ಡಿಸ್ಕಷನ್ ನಡೆಯಿತು. ನಿವೃತ್ತ ಇಂಜಿನಿಯರ್ ಶ್ರೀ ಸಜ್ಜನ್‍ರವರು ಟೋಪೋಶೀಟ್ ಮೇಲೆ ಕುಳಿತು ತಮ್ಮ ಕನಸಿನ ‘ಅಂತರ್ಜಲ ಅಭಿವೃದ್ಧಿ ಕಾರಿಡಾರ್’ ಬಗ್ಗೆ ಮಾಹಿತಿ ನೀಡಿದರು.

 ದಿನಾಂಕ:24.01.2023 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ಞ 1.45 ರವರೆಗೆ ವಿವಿಧ ವಿಷಯಗಳ ಬಗ್ಗೆ ಪಿಪಿಟಿ ಮತ್ತು ನಿರ್ಣಯ ಮಂಡಿಸಲಾಯಿತು.

ಮೂಕಾನನ ರೆಸಾರ್ಟ್ ತಂಡದವರು ಬಾಗವಹಿಸಿದ್ದ ಎಲ್ಲರಿಗೂ ಮೂಕಾನನ ರೆಸಾರ್ಟ್ ಬ್ರ್ಯಾಂಡ್ ಮಾಡಿಕೊಳ್ಳಲು ನೆನಪಿನ ಕಾಣಿಕೆ ನೀಡಿದರು.

ಮೂರು ದಿವಸಗಳ ಕಾಲ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ವಿಧ್ಯಾರ್ಥಿಯಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಸಾಹಿತಿ ಕವಿತಾಕೃಷ್ಣರವರು 3 ದಿವಸಗಳ ಚರ್ಚೆಯ ಆಧಾರಿತ ನಿರ್ಣಯಗಳ ಬಗ್ಗೆ ಮಾತನಾಡಿದರೆ, ಶ್ರೀ ಜಿ.ಎಸ್.ಬಸವರಾಜ್ ರವರು ಅವರ ದೂರದೃಷ್ಠಿ ಕನಸುಗಳ ಬಗ್ಗೆ ವಿಷಯ ಮಂಡಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.

3 ದಿವಸಗಳ ಚರ್ಚೆಯಲ್ಲಿ ರಾಜ್ಯದ ವಿವಿಧ ಮೂಲೆಗಳ ಸುಮಾರು 162 ಜನರು ಭಾಗವಹಿಸಿದ್ದರು.

ಕರತಾಡನ ಮಾಡುವ ಮೂಲಕ ನಿರ್ಣಯಗಳಿಗೆ ಜ್ಞಾನ ದಾನಿಗಳು ಬೆಂಬಲ ಸೂಚಿಸಿದರು. ಬುರುಡೆ ಹೊಡೆಯಲು ಯಾರಿಗೂ ಅವಕಾಶವಿಲ್ಲ, ವಿಷಯ ಮಂಡಿಸುವ 31 ಜಿಲ್ಲೆಗಳಿಗೂ ಪ್ರಾತಿನಿಧ್ಯ. ಪ್ರತಿಯೊಬ್ಬರಿಗೂ ಅವಕಾಶ.ಉತ್ತಮ ಪರಿಸರ, ವ್ಯವಸ್ಥಿತ ಬೋಜನ, ಉಳಿದುಕೊಳ್ಳಲು ಉತ್ತಮ ಕಾಟೇಜ್, ಇದೊಂದು ಮಿಲ್ಟ್ರಿ ಕಾರ್ಯಕ್ರಮ ದಂತೆ ಇತ್ತು, ಸಮಯ ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ ಎಂದು ಬಾಗವಹಿಸಿದ ಜ್ಞಾನಿಗಳ ಅಭಿಪ್ರಾಯವಾಗಿತ್ತು.