21st November 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಡಿಯಲ್ಲಿನ NATIONAL MISSION FOR MANUSCRIPTS ವಿಬಾಗದ ನಿರ್ದೇಶಕರಾದ ಶ್ರೀ ಅನಿರ್ ಬನ್ ದಾಸ್ ರವರೊಂದಿಗೆ, ವಿಶ್ವದ 108 ಶಕ್ತಿಪೀಠಗಳ MANUSCRIPTS ಸಂಗ್ರಹಿಸುವ ಸಂಭಂದ ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ ದಿನಾಂಕ:13.02.2023 ರಂದು ಸಮಾಲೋಚನೆ ನಡೆಸಲಾಯಿತು.

ವಿಶ್ವದ 108 ಶಕ್ತಿಪೀಠಗಳಿಂದಲೂ ಸಮಿತಿಯ ಪದಾಧಿಕಾರಿಗಳು ಮತ್ತು ಇದೂವರೆಗೂ ಶಕ್ತಿಪೀಠಗಳ ಸಂಶೋಧನೆ ನಡೆಸಿರುವ ಪರಿಣಿತರನ್ನು ಆಹ್ವಾನಿಸುವ ಬಗ್ಗೆಯೂ ಸುಧೀರ್ಘ ಚರ್ಚೆ ನೆಡೆಯಿತು,

ಶಕ್ತಿಪೀಠ ಫೌಂಡೇಷನ್ ಸಿಇಓ ಕೆ.ಆರ್.ಸೋಹನ್ ಜೊತೆಯಲ್ಲಿದ್ದರು.

ಕರ್ನಾಟಕ ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೂ ದಿನಾಂಕ:13.02.2023 ರಂದು ಸಮಾಲೋಚನೆ ನಡೆಸಲಾಯಿತು.

ಕರ್ನಾಟಕÀ ರಾಜ್ಯದ ಕೆಳಕಂಡ ಯಾವುದಾದರೊಂದು ಕ್ಷೇತ್ರದಲ್ಲಿ

  1. ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ  ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ,
  2. ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರುಪಾಕ್ಷ ದೇವಾಲಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ,   
  3. ಶೃಂಗೇರಿಯ  ಶ್ರೀ ಶಾರದಾದೇವಿಯ  ಸನ್ನಿಧಿಯಲ್ಲಿ,
  4. ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ   ಶ್ರೀ ತಾಮ್ರಗೌರಿ ದೇವಿಯ  ಸನ್ನಿಧಿಯಲ್ಲಿ, 
  5. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಡಲ ತೀರದಲ್ಲಿ    ಶ್ರೀ ಮಂಗಳಾ ದೇವಿಯ ಸನ್ನಿಧಿಯಲ್ಲಿ, 
  6. ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಗ್ರಾಮದಲ್ಲಿ ಶ್ರೀ ಮೂಕಾಂಬಿಕಾ ದೇವಿಯ  ಸನ್ನಿಧಿಯಲ್ಲಿ,
  7. ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ/ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ,
  8. ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕು, ಬಗ್ಗನಡು ಶಕ್ತಿಪೀಠ ಕ್ಯಾಂಪಸ್ ನಲ್ಲಿ,
  9. ತುಮಕೂರು ನಗರದ ಉದ್ದೇಶಿತ ಶಕ್ತಿಪೀಠ ಮ್ಯೂಸಿಯಂ ಸನ್ನಿಧಿಯಲ್ಲಿ,

ಅಥವಾ  ಪ್ರಾಯೋಜಕತ್ವ ನೀಡುವವರು ಸೂಚಿಸುವ ಸ್ಥಳದಲ್ಲಿ ಸಮಾವೇಶ ನಡೆಸುವ ಆಲೋಚನೆಯಿದೆ.