22nd December 2024
Share

TUMAKURU:SHALKTHI  PEETA  FOUNDATION

ತುಮಕೂರು ಜಿಲ್ಲೆಯ, ಗುಬ್ಬಿ ತಾಲೋಕಿನ, ಬಿದರೆ ಹಳ್ಳ ಕಾವಲ್ ನಲ್ಲಿನ ಹೆಚ್.ಎ.ಎಲ್ ಘಟಕಕ್ಕೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಅಡಿಗಲ್ಲು ಹಾಕಿ, ಲೋಕಾರ್ಪಣೆ ಮಾಡಿದ್ದಾರೆ. ಸಹಕರಿಸಿದ ಎಲ್ಲಾ ವರ್ಗಕ್ಕೂ ಅಭಿನಂದನೆ.

ಭೂ ಸಂತ್ರಸ್ಥ ರೈತರು ಮತ್ತು ಸ್ಥಳೀಯ ರೈತರಿಗೆ ಹಾಗೂ ಮಕ್ಕಳಿಗೆ ನೀಡಿದ್ದ ಆಶ್ವಾಸನೆಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ನಮÀಗೆ ಇನ್ನೂ ಸಾದ್ಯಾವಾಗಿಲ್ಲ. ಸುತ್ತ ಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಸಿ.ಎಸ್.ಆರ್ ಫಂಡ್ ನೀಡುವ ಬಗ್ಗೆ ಹಾಗೂ ಉದ್ಯೋಗ ನೀಡುವ ಬಗ್ಗೆ ಒಂದು ರೀತಿಯ ಮೋಸ’ ಆಗಿದೆ ಎಂದರೆ ತಪ್ಪಾಗಲಾರದು.

 ಕಳೆದ 35 ವರ್ಷಗಳಿಂದ ಅಲ್ಲಿನ ರೈತರಿಗೆ ನಾನು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಒಂದು ರೀತಿಯ ಚೆಂಡು ಹೂ ಇಡುತ್ತಾ ಬಂದಿದ್ದೇವೆ.

ಆಗಿನ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಟಿ.ಬಿ.ಜಯಚಂದ್ರರವರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಮನವಿ ಮೇರೆಗೆ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಮಾಡುವ ಬಗ್ಗೆ ಕ್ರಮಕೈಗೊಳ್ಳಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈಗಿನ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಸಹ, ಶಕ್ತಿಪೀಠ ಫೌಂಡೇಷನ್ ಮನವಿ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದ ಆಧಾರದಲ್ಲಿ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಮಾಡುವ ಬಗ್ಗೆ ಕ್ರಮಕೈಗೊಳ್ಳಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇವಲ ಒಂದು ವಾರದಲ್ಲಿ ವಿಧಾನಸಭಾ ಚುನಾವಣಾ ಘೋಷಣೆಯಾಗಲಿದೆ. ಆದರೇ   ಜಿಲ್ಲಾಧಿಕಾರಿಗಳಾಗಲಿ, ಗುಬ್ಬಿ ತಹಶೀಲ್ಧಾರ್ ರವರಾಗಲಿ, ಹೆಚ್.ಎ.ಎಲ್ ಅಧಿಕಾರಿಗಳಾಗಲಿ ಈ ಬಗ್ಗೆ ಎಲ್ಲೂ ಚಕಾರ ಎತ್ತಿದ ಹಾಗೆ ಕಾಣಲಿಲ್ಲ.

‘ಕಾನೂನು ಮತ್ತು ನಿಯಮ ಪ್ರಕಾರ ಏನೂ ಮಾಡಲು ಸಾಧ್ಯಾ ಅಥವಾ ಏನು ಮಾಡಲು ಆಗುವುದಿಲ್ಲ ಎಂದು ಹೇಳಿದರೂ ಸಾಕು. ಮೌನ ಸರಿಯಲ್ಲ. ಉಳಿದ ವಿಚಾರಗಳ ಬಗ್ಗೆ ಪ್ರಧಾನಿಯವರ ಗಮನ ಸೆಳೆಯಲು ಚಿಂತನೆ ನಡೆಸಲಾಗಿದೆ.

ಗುಬ್ಬಿ ವಿಧಾನಸಭಾ ಕ್ಷೇತ್ರ ಚುನಾವಣಾ ವ್ಯಾಪ್ತಿಗೆ ಬರುವ, ಈ ಪ್ರದೇಶದಲ್ಲಿ ಎರಡು ಮನವಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಜನತೆಗೆ ನೀಡಲು ಆಗ್ರಹಿಸಿ, ಚುನಾವಣಾ ಬಹಿಷ್ಕಾರ ಮಾಡಲು ಮತದಾರರು ಚಿಂತನೆ ನಡೆಸುತ್ತಿದ್ದಾರೆ, ಎಂಬ ಅಂಶವನ್ನು ಶ್ರೀ ಜಿ.ಎಸ್.ಬಸವರಾಜ್ ರವರ ಗಮನಕ್ಕೆ ತರಲಾಗಿದೆ.

ಮುಂದಿನ ವಾರ ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮನಿಗೆ ಪೂಜಿಸಿ, ಈ ಬಗ್ಗೆ ಒಂದು ನಿರ್ಧಿಷ್ಠವಾದ ತೀರ್ಮಾನ ಕೈಗೊಳ್ಳಲಾಗುವುದು.

ಆಸಕ್ತರು ಸಲಹೆ, ಮಾರ್ಗದರ್ಶನ ನೀಡಲು ಮನವಿ.