16th September 2024
Share

TUMAKURU:SHAKTHIPEETA FOUNDATION

ರಾಷ್ಟ್ರದ ಅತ್ಯುನ್ನತ ಎರಡನೇ  ಪ್ರಶಸ್ತಿ ಪಧ್ಮ ವಿಭೂಷಣ, ಈ ಪ್ರಶಸ್ತಿ ತಾನಾಗಿಯೇ ಹುಡುಕಿಕೊಂಡು, ಮಾಜಿ ಮುಖ್ಯಮಂತ್ರಿಯವರು, ಹಿರಿಯ ಮತ್ಸುದ್ಧಿ, ಬೆಂಗಳೂರನ್ನು ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಐಟಿಬಿಟಿ ದೇವರು ಶ್ರೀ ಎಸ್.ಎಂ.ಕೃಷ್ಣರವರ ಬಳಿ ಬಂz ನಂತರ, ಅವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಗೌರವಿಸಿದ ಕ್ಷಣ.

ಸಾರ್, ಪ್ರಶಸ್ತಿ ಪಡೆಯುವಾಗ ತಾವು ಹಾಕಿದ ಡ್ರೆಸ್ ತುಂಬಾ ಚೆನ್ನಾಗಿತ್ತು ಎಂದು ಬಸವರಾಜ್ ರವರು ಹೇಳಿದಾಗ, ಶ್ರೀ ಎಸ್.ಎಂ.ಕೃಷ್ಣರವರು ಉತ್ತರ ಮುಗುಳ್ನಗೆ. ಈ ಸಂದರ್ಭದಲ್ಲಿ ಗತಕಾಲದ ನೆನಪುಗಳನ್ನು ಇಬ್ಬರೂ ನಾಯಕರು ಹಂಚಿ ಕೊಂಡರು. ಅವರಿಬ್ಬರ ಆಘಾದವಾದ ನೆನಪಿನ ಶಕ್ತಿ ಮತ್ತು  ಆತ್ಮೀಯತೆ ನಿಜಕ್ಕೂ ಅದ್ಭುತ.

ಈ ಮಧ್ಯೆ ನಾನು ಎಸ್.ಎಂ.ಕೃಷ್ಣರವರನ್ನು ಕೇಳಿದ ಮಾತು ಸಾರ್, ನಿಮಗೆ ಐಟಿಬಿಟಿ ಐಡಿಯಾ ಹೇಗೆ ಜನ್ಮ ತಾಳಿತು. ಈ ಮಟ್ಟಕ್ಕೆ ಬೆಂಗಳೂರು ಅಭಿವೃದ್ಧಿ ಮತ್ತು ಹೆಸರು ಮಾಡುವ ಪರಿಕಲ್ಪನೆ ತಮಗೆ ಆವಾಗಲೇ ಇತ್ತಾ ಸಾರ್.

ಅವರ ಉತ್ತರ ‘ಭಗವತ್ ಪ್ರೇರಣೆ’ ನನ್ನ ಅಳಿಯ ಸಿದ್ದಾರ್ಥ್ ರವರು ಮತ್ತು ಐಟಿ-ಬಿಟಿ ದಿಗ್ಗಜರ ಕನಸಿಗೆ ಶಕ್ತಿಮೀರಿ ಸ್ಪಂಧಿಸಿದ ಇತಿಹಾಸವನ್ನು, ಎಳೆ, ಎಳೆಯಾಗಿ ಮೆಲುಕು ಹಾಕಿದರು.

ಒಂದೆರಡು ಪ್ರಮುಖ ಅಂಶಗಳು.

ಒಬ್ಬರು ಐಟಿ-ಬಿಟಿ ದಿಗ್ಗಜರಿಗೆ ಕರೆ ಮಾಡಿ, ನಮ್ಮ ಮನೆಗೆ ಬನ್ನಿ ಐಟಿ-ಬಿಟಿ ಬಗ್ಗೆ ಚರ್ಚೆಮಾಡೋಣ. ಎಂದಾಗ ಅವರು ಹೇಳಿದರಂತೆ, ಸಾರ್ ಈಗ ನಿಮ್ಮ ಸಮಯಕ್ಕೆ ಬರಲು ಸಾದ್ಯಾವಿಲ್ಲ, ಇಲ್ಲಿಂದ ತಮ್ಮ ಮನೆಗೆ ಬರಲು ಸುಮಾರು 4-5 ಗಂಟೆ ಸಮಯ ಆಗುತ್ತದೆ, ರಸ್ತೆ ಮತ್ತು ಟ್ರಾಫಿಕ್ ಉತ್ತಮವಾಗಿಲ್ಲ, ಇನ್ನೊಂದು ದಿವಸ ಸಮಯ ನಿಗದಿ ಮಾಡಿ ಸಾರ್ ಎಂದಾಗ.

ಕೃಷ್ಣರವರು ಫೋನ್ ಇಟ್ಟ ನಂತರ ಲೋಕೋಪಯೋಗಿ ಕಾರ್ಯದರ್ಶಿಯನ್ನು ತಕ್ಷಣ ಕರೆಯಿರಿ, ಎಂದು ಹೇಳಿದರಂತೆ. ಅವರು ಬಂದ ತಕ್ಷಣ, ಅವರ ಐಟಿ ಕಂಪನಿಯಿಂದ ನಮ್ಮ ಮನೆಗೆ ಬರುವ ರಸ್ತೆ ಇತಿಹಾಸದ ಬಗ್ಗೆ ತಕ್ಷಣವೇ ವರದಿಯೊಂದಿಗೆ, ಇಂದೇ ಭೇಟಿ ಮಾಡಿ ಎಂದು ಆದೇಶಿಸಿದರಂತೆ.

ಅವರು ವರದಿಯೊಂದಿಗೆ ಬಂದ ನಂತರ ಉತ್ತಮ ರಸ್ತೆ ನಿರ್ಮಾಣಕ್ಕೆ ಆದೆಶ ನೀಡಿದರಂತೆ, ಈ ಘಟನೆ ಇಂದು ಐಟಿ-ಬಿಟಿ ಮತ್ತು ಬೆಂಗಳೂರು ಪ್ರಪಂಚದಲ್ಲಿ ಈ ಮಟ್ಟಕ್ಕೆ ಬೆಳೆಯಲು, ಅಡಿಗಲ್ಲು ಹಾಕಿದ ಹಾಗಾಯಿತು. ಐಟಿಬಿಟಿ ದಿಗ್ಗಜರಿಗೆ ಎಸ್.ಎಂ.ಕೃಷ್ಣರವರ ದೂರದೃಷ್ಠಿ ಬಗ್ಗೆ ಅದೆಂತ ಬಲವಾದ ವಿಶ್ವಾಸ ಮೂಡಿರಬಹುದು. ನೀವೇ ಊಹಿಸಿಕೊಳ್ಳಿ ?

ಇನ್ನೊಬ್ಬ ಐಟಿ-ಬಿಟಿ ದಿಗ್ಗಜರ ಮನೆಗೆ ಊಟಕ್ಕೆ ಆಹ್ವಾನಿಸಿದ್ದರಂತೆ, ಎಸ್.ಎಂ.ಕೃಷ್ಣರವರು ಮತ್ತು ಅವರ ಶ್ರೀಮತಿ ಪ್ರೇಮಕೃಷ್ಣರವರು ಹೋದರಂತೆ. ಅವರ ಮನೆಗೆ ಹೋದಾಗ ಅವರ ಮನೆಯವರನ್ನು ಬಿಟ್ಟರೇ, ಯಾವುದೇ ತರಹದ ಆಳು-ಕಾಳು ಇರಲಿಲ್ಲವಂತೆ, ಅವರೇ ಅಡುಗೆ ಮಾಡಿದ್ದರಂತೆ. ಅವರೇ ಇವರಿಗೆ ಊಟ ಬಡಿಸಿದರಂತೆ. ಈ ಘಟನೆ ಎಸ್.ಎಂ.ಕೃಷ್ಣರವರ ಮನಸ್ಸಿಗೆ ಬಲವಾಗಿ ನಾಟಿತಂತೆ.

ದೇಶಕ್ಕಾಗಿ ಕೋಟಿ, ಕೋಟಿ ದುಡಿದರೂ, ಲಕ್ಷಾಂತರ ಉದ್ಯೋಗ ಸೃಷ್ಠಿಸಿದರೂ, ಅವರ ಸರಳತೆ, ಅವರ ನಡೆ-ನುಡಿ ನೋಡಿ, ಈ ಕ್ಷೇತ್ರದ ಬಗ್ಗೆ ಅವರಿಗೆ ಅರಿವು ಇಲ್ಲದಂತೆ ನಂಟು ಬೆಳೆಯಿತಂತೆ.

ನೋಡಿ ಒಬ್ಬ ನಾಡಿನ ಯಜಮಾನ, ದೊರೆಯ, ದೂರದೃಷ್ಠಿ ಮತ್ತು ಪರಿಕಲ್ಪನೆ,  ಅವರು ಮನಸ್ಸು ಮಾಡಿದರೇ ಹೇಗೆ ಆಗುತ್ತದೆ, ನಮ್ಮ ಬೆಂಗಳೂರು ಐಟಿಬಿಟಿ ಬೆಳವಣಿಗೆಯೇ ಒಂದು ಉದಾಹರಣೆ.

ಆಡಿಯೋ ರೆಕಾರ್ಡ್ ಮಾಡದ ಕಾರಣ ಅವರ ಹೆಸರುಗಳನ್ನು ಬರೆದಿಲ್ಲ ಎಂಬ ಅಂಶವನ್ನು ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ.

ಜೊತೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಶ್ರೀ ಶಿವಪ್ರಸಾದ್ ರವರು ಇದ್ದರು.